ಭಾರತದ ಖಾದ್ಯಕ್ಕೆ ಮನಸೋತು ದೋಸೆ ತಿನ್ನುವ ಇಂಗಿತ ವ್ಯಕ್ತಪಡಿಸಿದ ದುಬೈ ಸಚಿವ; ಪ್ರಲ್ಹಾದ ಜೋಶಿ ಹೇಳಿದ್ದೇನು?
Pralhad Joshi: ಯುಎಇಯ ಎಐ ಮತ್ತು ಡಿಜಿಟಲ್ ಆರ್ಥಿಕತೆ ರಾಜ್ಯ ಸಚಿವ ಒಮರ್ ಸುಲ್ತಾನ್ ಆಲ್ ಓಲಾಮಾ ಭಾರತದ ಜನಪ್ರಿಯ ಖಾದ್ಯ ದೋಸೆ ಸವಿಯುವ ಇಂಗಿತವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಳಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಯುಎಇ ಸಚಿವ ಒಮರ್ ಸುಲ್ತಾನ್ ಆಲ್ ಓಲಾಮಾ ಮತ್ತು ಅಧಿಕಾರಿಗಳೊಂದಿಗೆ ಪ್ರಲ್ಹಾದ ಜೋಶಿ -
ದುಬೈ, ನ. 19: ಭಾರತದ ಆಹಾರ ಪದ್ಧತಿಗೆ ಮನಸೋಲದವರಿಲ್ಲ. ಜಗತ್ತಿನಾದ್ಯಂತ ಅನೇಕರು ಇಲ್ಲಿನ ಪಾಕ ವೈವಿಧ್ಯತೆಯ ರುಚಿಯನ್ನು ಒಮ್ಮೆಯಾದರೂ ಸವಿಯಬೇಕು ಎಂದು ಬಯಸುತ್ತಾರೆ. ಇದಕ್ಕೆ ಗಣ್ಯರು ಹೊರತಲ್ಲ. ಇದೀಗ ದುಬೈ ಸರ್ಕಾರದ ಸಚಿವರೊಬ್ಬರು ದೋಸೆ ತಿನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯುಎಇಯ ಎಐ (AI) ಮತ್ತು ಡಿಜಿಟಲ್ ಆರ್ಥಿಕತೆ ರಾಜ್ಯ ಸಚಿವ ಒಮರ್ ಸುಲ್ತಾನ್ ಆಲ್ ಓಲಾಮಾ (Omar Al Olama) ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಬಳಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಸದ್ಯ ದುಬೈ ಪ್ರವಾಸದಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ (AI), ಶಿಕ್ಷಣ ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಭಾರತ-ಯುಎಇ ಸಹಕಾರವನ್ನು ಹೆಚ್ಚಿಸುವ ಕುರಿತು ಯುಎಇಯ AI ಮತ್ತು ಡಿಜಿಟಲ್ ಆರ್ಥಿಕತೆ ರಾಜ್ಯ ಸಚಿವ ಒಮರ್ ಸುಲ್ತಾನ್ ಆಲ್ ಓಲಾಮಾ ಜತೆ ಮಾತುಕತೆ ನಡೆಸಿದರು.
ಪ್ರಲ್ಹಾದ ಜೋಶಿ ಅವರ ಎಕ್ಸ್ ಪೋಸ್ಟ್:
Held bilateral discussions in Dubai with H.E. @OmarSAlolama, UAE Minister of State for Artificial Intelligence, Digital Economy and Remote Work Applications, to deepen India–UAE cooperation in Artificial Intelligence, #education and emerging technologies. Discussions focused on AI-enabled learning, digital public infrastructure for education, STEM education, teacher capacity building and the responsible use of emerging technologies in classrooms. Explored the potential of the IIT Delhi–Abu Dhabi campus as a bridge for joint AI research with @mbzuai, along with research collaboration under #SPARC in areas such as AI, climate resilience, #renewableenergy, advanced manufacturing and space technologies. Also exchanged perspectives on the UAE’s National AI Literacy Curriculum Framework (K–12) and National AI Upskilling Programme for Teachers. Proposed a structured India–UAE dialogue on AI in education to translate our shared vision into concrete cooperation and prepare our education systems for the future.
— Pralhad Joshi (@JoshiPralhad) November 19, 2026
ಭಾರತೀಯ ಖಾದ್ಯಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವ ಒಮರ್ ಸುಲ್ತಾನ್ ಆಲ್ ಓಲಾಮಾ ಅವರ ಮಾತಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಭಾರತಕ್ಕೆ ಬಂದಾಗ ಖಂಡಿತವಾಗಿಯೂ ಭಾರತೀಯ ದೊಸೆ ಉಣಬಡಿಸುವುದಾಗಿ ತಿಳಿಸಿದರು.
ಭಾರತ-ಯುಎಇ ಸಹಕಾರದ ಬಗ್ಗೆ ಚರ್ಚೆ
ಎಐ, ಶಿಕ್ಷಣ, ಹೊಸ ತಂತ್ರಜ್ಞಾನಗಳಲ್ಲಿ ಭಾರತ-ಯುಎಇ ಸಹಕಾರದ ಬಗ್ಗೆಯೂ ಉಭಯ ಸಚಿವರು ಚರ್ಚೆ ನಡೆಸಿದರು. ʼʼಓಲಾಮಾ ಜತೆಗಿನ ಸಭೆಯಲ್ಲಿ ಎಐ-ಆಧಾರಿತ ಕಲಿಕೆ, ಶಿಕ್ಷಣಕ್ಕಾಗಿ ಡಿಜಿಟಲ್ ಮೂಲಸೌಕರ್ಯ, ಸ್ಟೆಮ್ (STEM) ಶಿಕ್ಷಣ, ಶಿಕ್ಷಕರ ತರಬೇತಿ ಮತ್ತು ತರಗತಿಗಳಲ್ಲಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಬಗ್ಗೆ ಚರ್ಚಿಸಲಾಯಿತುʼʼ ಎಂದು ಎಕ್ಸ್ನಲ್ಲಿ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ʼʼಜಂಟಿ ಎಐ ಸಂಶೋಧನೆಗೆ ಐಐಟಿ ದೆಹಲಿ- ಅಬುಧಾಬಿ ಕ್ಯಾಂಪಸ್ ಅನ್ನು ವೇದಿಕೆಯಾಗಿ ಬಳಸಿಕೊಳ್ಳುವುದು ಹಾಗೂ SPARC ಅಡಿಯಲ್ಲಿ AI, ಹವಾಮಾನ ವೈಪರೀತ್ಯ ತಡೆ, ನವೀಕರಿಸಬಹುದಾದ ಇಂಧನ, ಆಧುನಿಕ ಉತ್ಪಾದನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸಂಶೋಧನಾ ಸಹಯೋಗದ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಯಿತುʼʼ ಎಂದು ಹೇಳಿದ್ದಾರೆ.
ಯುಎಇಯ ಶಾಲಾ ಮಟ್ಟದ (K–12) ರಾಷ್ಟ್ರೀಯ ಎಐ ಪಠ್ಯಕ್ರಮ ಮತ್ತು ಶಿಕ್ಷಕರ ಎಐ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಇಬ್ಬರು ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಭವಿಷ್ಯಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು, ಶಿಕ್ಷಣದಲ್ಲಿ ಎಐ ಬಳಕೆಯ ಕುರಿತು ಭಾರತ-ಯುಎಇ ನಡುವೆ ನಿರಂತರ ಸಂವಾದ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾಗಿ ಪ್ರಲ್ಹಾದ ಜೋಶಿ ವಿವರಿಸಿದ್ದಾರೆ.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.