Ambassador: ಭಾರತಕ್ಕೆ ಹೊಸ ರಾಯಭಾರಿಯನ್ನು ನೇಮಿಸಿದ ಡೊನಾಲ್ಡ್ ಟ್ರಂಪ್
ಅಮೆರಿಕದ ಶ್ವೇತಭವನದ ಸಿಬ್ಬಂದಿ ನಿರ್ದೇಶಕ ಸೆರ್ಗಿಯೊ ಗೋರ್ ಅವರನ್ನು ಶನಿವಾರ ಭಾರತದ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದು, ಸೆರ್ಗಿಯೊ ಗೋರ್ ಒಬ್ಬ ಉತ್ತಮ ಸ್ನೇಹಿತ, ಹಲವು ವರ್ಷಗಳಿಂದ ನನ್ನೊಂದಿಗಿದ್ದಾರೆ ಎಂದು ಹೇಳಿದ್ದಾರೆ.


ವಾಷಿಂಗ್ಟನ್: ರಷ್ಯಾದೊಂದಿಗಿನ ತೈಲ ವ್ಯಾಪಾರಕ್ಕೆ (Russia Oil trade) ಸಂಬಂಧಿಸಿ ಭಾರತದೊಂದಿಗೆ (India) ಹಗೆ ಸಾಧಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಇದೀಗ ಭಾರತಕ್ಕೆ ಹೊಸ ರಾಯಭಾರಿಯ (India Ambassador) ನೇಮಕ ಮಾಡಿದ್ದಾರೆ. ಶ್ವೇತಭವನದ ಸಿಬ್ಬಂದಿ ನಿರ್ದೇಶಕ ಸೆರ್ಗಿಯೊ ಗೋರ್ (Sergio Gor) ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸಿ ಡೊನಾಲ್ಡ್ ಟ್ರಂಪ್ ಶನಿವಾರ ಆದೇಶ ಹೊರಡಿಸಿದ್ದಾರೆ. ಸೆರ್ಗಿಯೊ ಗೋರ್ ಕುರಿತು ಮಾತನಾಡಿರುವ ಟ್ರಂಪ್, ಅವರು ಒಬ್ಬ ಉತ್ತಮ ಸ್ನೇಹಿತ. ಹಲವು ವರ್ಷಗಳಿಂದ ನನ್ನೊಂದಿಗಿದ್ದಾರೆ ಎಂದು ಹೇಳಿದ್ದಾರೆ.
ಶ್ವೇತಭವನದ ಸಿಬ್ಬಂದಿ ನಿರ್ದೇಶಕ ಸೆರ್ಗಿಯೊ ಗೋರ್ ಅವರನ್ನು ಶನಿವಾರ ಭಾರತದ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
Trump is sending one of his closest advisers as Ambassador to India
— Shashank Mattoo (@MattooShashank) August 23, 2025
Sergio Gor is among the most influential men in Washington
And his new job offers India and America a chance to mend their ties
🧵 pic.twitter.com/m9vCwqrTmT
ಈ ಸುದ್ದಿಯನ್ನೂ ಓದಿ: Shubhanshu Shukla: ಬಾಹ್ಯಾಕಾಶದಿಂದ ಭಾರತ ಹೇಗಿದೆ ನೋಡಿ.. ಶುಭಾಂಶು ಶುಕ್ಲಾ ಹಂಚಿಕೊಂಡ ಅಪರೂಪದ ಚಿತ್ರಣ
ಯಾರು ಸೆರ್ಗಿಯೊ ಗೋರ್ ?
ಸೋವಿಯತ್ ಒಕ್ಕೂಟದಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ಜನಿಸಿದ ಸೆರ್ಗಿಯೊ ಗೋರ್ ಬಾಲ್ಯದಲ್ಲೇ ಮಾಲ್ಟಾಗೆ ಸ್ಥಳಾಂತರಗೊಂಡಿದ್ದರು. ಅಮೆರಿಕದಲ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಅವರು ರಿಪಬ್ಲಿಕನ್ ಪಕ್ಷದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಈವರೆಗೆ ಕೆಂಟುಕಿಯ ಸೆನೆಟರ್ ಆಗಿರುವ ರಾಂಡ್ ಪಾಲ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.
38 ವರ್ಷದ ಗೋರ್ ನಿಧಿಸಂಗ್ರಹಣೆ ಮತ್ತು ಹವ್ಯಾಸಿ ವಿವಾಹ ಡಿಜೆಯಾಗಿಯೂ ಕೆಲಸ ಮಾಡಿದ್ದಾರೆ. ಜೂನಿಯರ್ ವಿನ್ನಿಂಗ್ ಟೀಮ್ ಪಬ್ಲಿಷಿಂಗ್ ಎಂಬ ಪ್ರಕಾಶನ ಕಂಪನಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸುತ್ತಿದ್ದಾರೆ. ಇದು ಅಮೆರಿಕ ಅಧ್ಯಕ್ಷರ ಎರಡು ಪುಸ್ತಕಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ: Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ಈ ಹಿಂದೆ ಗೋರ್‌ಗೆ ನಾಸಾ ನೇತೃತ್ವಕ್ಕೆ ಟೆಕ್ ಬಿಲಿಯನೇರ್ ಜೇರೆಡ್ ಐಸಾಕ್‌ಮನ್ ಅವರನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡಿರುವುದು ಸೇರಿದಂತೆ ಆಡಳಿತ ಸ್ಥಾನಗಳಿಗೆ ಟ್ರಂಪ್ ಅವರ ಆಯ್ಕೆಗಳನ್ನು ಪರಿಶೀಲಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿತ್ತು.