ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Hijack: ವಿಮಾನ ಹೈಜಾಕ್‌ಗೆ ಯತ್ನ- ಸಿನಿಮೀಯ ರೀತಿಯಲ್ಲಿ ಕಿಡಿಗೇಡಿಯನ್ನು ಹೊಡೆದುರುಳಿಸಿದ ಪ್ರಯಾಣಿಕ!

ವ್ಯಕ್ತಿಯೊಬ್ಬ ಚಾಕು ತೋರಿಸಿ ವಿಮಾನವನ್ನು ಅಪಹರಿಸಿ (Plane Hijack) ಮೂವರು ಪ್ರಯಾಣಿಕರಿಗೆ ಗಾಯಗೊಳಿಸಿರುವ ಘಟನೆ ಬೆಲೀಜ್‌ನಲ್ಲಿ ಗುರುವಾರ ನಡೆದಿದೆ. ವಿಮಾನ ಅಪಹರಿಸಿದ ವ್ಯಕ್ತಿಯನ್ನು ಅಮರಿಕದ ಪ್ರಜೆಯೆಂದು ಗುರುತಿಸಲಾಗಿದೆ. 14 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಟ್ರಾಪಿಕ್ ಏರ್ ವಿಮಾನವನ್ನು ಅಪಹರಿಸಿದ್ದು, ಮೂವರು ಪ್ರಯಾಣಿಕರಿಗೆ ಗಾಯಗೊಳಿಸಿದ್ದಾನೆ.

ವಿಮಾನ ಹೈಜಾಕ್‌ಗೆ ಯತ್ನಿಸಿದವನನ್ನು ಕೊಂದ ಪ್ರಯಾಣಿಕ

ಬೆಲ್ಮೋಪನ್: ವ್ಯಕ್ತಿಯೊಬ್ಬ ಚಾಕು ತೋರಿಸಿ ವಿಮಾನವನ್ನು ಅಪಹರಿಸಿ (Plane Hijack) ಮೂವರು ಪ್ರಯಾಣಿಕರಿಗೆ ಗಾಯಗೊಳಿಸಿರುವ ಘಟನೆ ಬೆಲೀಜ್‌ನಲ್ಲಿ (Belize ) ಗುರುವಾರ ನಡೆದಿದೆ. ವಿಮಾನ ಅಪಹರಿಸಿದ ವ್ಯಕ್ತಿಯನ್ನು ಅಮರಿಕದ ಪ್ರಜೆಯೆಂದು (American citizen) ಗುರುತಿಸಲಾಗಿದೆ. 14 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಟ್ರಾಪಿಕ್ ಏರ್ ವಿಮಾನವನ್ನು ಅಪಹರಿಸಿದ್ದು, ಮೂವರು ಪ್ರಯಾಣಿಕರಿಗೆ ಗಾಯಗೊಳಿಸಿದ್ದಾನೆ. ಬಳಿಕ ಪರವಾನಿಗೆ ಪಡೆದ ಬಂದೂಕು ಕೊಂಡೊಯ್ದಿದ್ದ ಪ್ರಯಾಣಿಕ ಗುಂಡು ಹಾರಿಸಿ ಆತನನ್ನು ಕೊಂದಿದ್ದಾನೆ. ಅಪಹರಣದ ಸಮಯದಲ್ಲಿ ಗಾಳಿಯಲ್ಲಿ ಸುತ್ತುತ್ತಿದ್ದ ವಿಮಾನದ ಇಂಧನ ಖಾಲಿಯಾಗುವ ಹಂತಕ್ಕೆ ತಲುಪಿದ್ದರಿಂದ ವಿಮಾನ ಬೆಲೀಜ್‌ನಲ್ಲಿ ಮತ್ತೆ ಇಳಿದಿದೆ.

ಆರೋಪಿಯನ್ನು ಕ್ಯಾಲಿಫೋರ್ನಿಯಾದ 49 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತ ವಿಮಾನವನ್ನು ದೇಶದಿಂದ ಹೊರಗೆ ಕೊಂಡೊಯ್ಯಲು ಬಯಸಿದ್ದನು. ಇದಕ್ಕಾಗಿ ವಿಮಾನಕ್ಕೆ ಹೆಚ್ಚಿನ ಇಂಧನ ಒದಗಿಸುವಂತೆ ಬೇಡಿಕೆ ಇರಿಸಿದ್ದಾನೆ. ಗುರುವಾರ ಬೆಳಗ್ಗೆ 8.30ಕ್ಕೆ ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ವಿಮಾನದೊಳಗಿದ್ದ ಅಕಿನ್ಯೆಲಾ ಸಾವಾ ಟೇಲರ್ ಎಂಬಾತ ಜನರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ. ಇದರಿಂದ ಫಿಲಿಪ್ ಎಸ್ ಡಬ್ಲ್ಯೂ ಗೋಲ್ಡ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ಬಳಿಕ ವಿಮಾನದೊಳಗಿದ್ದ ವ್ಯಕ್ತಿಯೊಬ್ಬರ ಬಂದೂಕಿನಿಂದ ಗುಂಡು ಹಾರಿ ಆತ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಆತ ಆಸ್ಪತ್ರೆ ತಲುಪವ ಮೊದಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಹೇಳಿದ್ದಾರೆ. ಟೇಲರ್ ಮೇಲೆ ಗುಂಡು ಹಾರಿಸಿದ ಪ್ರಯಾಣಿಕ ಈ ಘಟನೆಯ ಹೀರೋ ಎಂದ ಕಮಿಷನರ್ ವಿಲಿಯಮ್ಸ್, ಟೇಲರ್ ವಿಮಾನಕ್ಕೆ ಚಾಕುವನ್ನು ತರುವಲ್ಲಿ ಹೇಗೆ ಯಶಸ್ವಿಯಾದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Punjab Grenade attack: ಪಂಜಾಬ್‌ ಗ್ರೆನೇಡ್ ದಾಳಿಯ ಹಂತಕ ಹ್ಯಾಪಿ ಪಾಸಿಯಾ ಅರೆಸ್ಟ್‌

ಘಟನೆಯ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಸಹಾಯಕ್ಕಾಗಿ ಬೆಲೀಜಿಯನ್ ಅಧಿಕಾರಿಗಳು ಯುಎಸ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ವಾರದ ಆರಂಭದಲ್ಲಿ ಬೆಲೀಜ್‌ಗೆ ಟೇಲರ್ ಬಂದಿದ್ದ. ಮಧ್ಯ ಅಮೆರಿಕದ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಒಂದಿರುವ ರಾಷ್ಟ್ರ ಬೆಲೀಜ್. ಇಲ್ಲಿ ಸುಮಾರು 4.10 ಲಕ್ಷ ಜನರು ವಾಸಿಸುತ್ತಿದ್ದಾರೆ.