ಬ್ರಿಕ್ಸ್ ಔತಣಕೂಟದಲ್ಲಿ ಸಸ್ಯಾಹಾರ ಅಳವಡಿಸಿದ್ದನ್ನು ಟೀಕಿಸಿದ ವಿಪಕ್ಷಗಳಿಗೆ ಖಡಕ್ ರಿಪ್ಲೈ ಕೊಟ್ಟ ಐಸ್‌ಲ್ಯಾಂಡ್ ಮಾಜಿ ಅಧ್ಯಕ್ಷ; ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರು ಉಲ್ಲೇಖಿಸಿ ಮಾಡಿದ ಪೋಸ್ಟ್ ವೈರಲ್
Vegetarian Food at BRICS Summit: ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಾಹಾರ ಅಳವಡಿಸಿರುವ ವಿಚಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಈ ನಡುವೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಐಸ್‌ಲ್ಯಾಂಡ್ ಭೇಟಿಯ ಸಮಯದಲ್ಲಿ ಸಂಪೂರ್ಣ ಸಸ್ಯಾಹಾರ ಊಟ ಬಡಿಸಿದ್ದಾಗಿ ಮಾಜಿ ಅಧ್ಯಕ್ಷ ಓಲಾಫರ್ ರಾಗ್ನರ್ ಗ್ರಿಮ್ಸನ್ ನೆನಪಿಸಿಕೊಂಡಿದ್ದಾರೆ.
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರೊಂದಿಗೆ ಐಸ್‌ಲ್ಯಾಂಡ್ ಮಾಜಿ ಅಧ್ಯಕ್ಷ ಓಲಾಫರ್ ರಾಗ್ನರ್ ಗ್ರಿಮ್ಸನ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 14: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಸಂಪೂರ್ಣ ಸಸ್ಯಾಹಾರಿ ಮೆನುವಿನ ಬಗ್ಗೆ ವಿರೋಧ ಪಕ್ಷಗಳು ಟೀಕಿಸಿವೆ. ಈ ನಡುವೆ, ಐಸ್‌ಲ್ಯಾಂಡ್‌ನ ಮಾಜಿ ಅಧ್ಯಕ್ಷ ಓಲಾಫರ್ ರಾಗ್ನರ್ ಗ್ರಿಮ್ಸನ್ (Olafur Ragnar Grimsson) 2005ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ Abdul Kalam) ಅವರಿಗೆ ಐಸ್‌ಲ್ಯಾಂಡ್ ಭೇಟಿಯ ಸಮಯದಲ್ಲಿ, ಸಂಪೂರ್ಣ ಸಸ್ಯಾಹಾರಿ ಊಟವನ್ನು ಬಡಿಸಿದ್ದಾಗಿ ನೆನಪಿಸಿಕೊಂಡರು.
ನಾರ್ಡಿಕ್‌ಗೆ ಮೊದಲ ಅಧಿಕೃತ ಭೇಟಿಯ ಸಂದರ್ಭದಲ್ಲಿ, “ಭಾರತದ ರಾಷ್ಟ್ರಪತಿಯವರಿಗಾಗಿ ನಾನು ಆಯೋಜಿಸಿದ್ದ ರಾಜತಾಂತ್ರಿಕ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರಿ ಮೆನುವನ್ನೇ ಏರ್ಪಡಿಸಿದ್ದೆ. ಅದೂ 20 ವರ್ಷಗಳಿಗಿಂತಲೂ ಹಿಂದೆ! ಸಸ್ಯಾಹಾರಿಯಾಗುವುದು ಅಷ್ಟೊಂದು ಸುಲಭವಲ್ಲದ ಐಸ್‌ಲ್ಯಾಂಡ್ ದೇಶದಲ್ಲಿ” ಎಂದು ಗ್ರೀಮ್ಸನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿದೆ ಪೋಸ್ಟ್:
When I hosted the President of #India for State Dinner on the first such visit to a #Nordic country, I also offered an all-vegetarian menu. More than 20 years ago! And in #Iceland where it is not easy to be vegetarian!! https://t.co/6Rw2xIqR4T
— Ólafur Ragnar Grímsson (@ORGrimsson) September 13, 2026
1996ರಿಂದ 2016ರವರೆಗೆ ಐಸ್‌ಲ್ಯಾಂಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರೀಮ್ಸನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಐಸ್‌ಲ್ಯಾಂಡ್‌ಗೆ ನೀಡಿದ್ದ ಮೊದಲ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಅವರಿಗೆ ಆತಿಥ್ಯ ವಹಿಸಿದ್ದರು. 1996ರಿಂದ 2016ರವರೆಗೆ ಐಸ್‌ಲ್ಯಾಂಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗ್ರಿಮ್ಸನ್, ಐಸ್‌ಲ್ಯಾಂಡ್ ಮತ್ತು ವಿಶಾಲವಾದ ನಾರ್ಡಿಕ್ ಪ್ರದೇಶಕ್ಕೆ ಕಲಾಂ ಅವರ ಮೊದಲ ಭೇಟಿಯ ಸಮಯದಲ್ಲಿ ಆತಿಥ್ಯ ವಹಿಸಿದ್ದರು.
ಬ್ರಿಕ್ಸ್ ಔತಣಕೂಟವು ಸಂಪೂರ್ಣ ಸಸ್ಯಾಹಾರಿ ಖಾದ್ಯಗಳನ್ನು ಒಳಗೊಂಡಿತ್ತು ಎಂಬ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಗ್ರೀಮ್ಸನ್ ಈ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆಪ್ಟೆಂಬರ್ 12) ಭಾರತ್ ಮಂಟಪದಲ್ಲಿ ಬ್ರಿಕ್ಸ್ ನಾಯಕರಿಗೆ ಭೋಜನ ಕೂಟ ಆಯೋಜಿಸಿದ್ದರು. ಮೆನುವಿನಲ್ಲಿ ಭಾರತೀಯ ಪಾಕಪದ್ಧತಿ ಮತ್ತು ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯಗಳಿದ್ದವು. ಖಾಂಡ್ವಿ, ಪನೀರ್ ಲಬಬ್ದಾರ್, ಗುಚ್ಚಿ ಮಾರ್ಮಿಕ್, ರಾಗಿ ಪಲಾವ್, ಮಶ್ರೂಮ್ ಗಲೂಟಿ, ರಸಂ ಮತ್ತು ಜಿಲೇಬಿ ಪ್ರಮುಖ ಭಕ್ಷ್ಯಗಳಾಗಿದ್ದವು.
ವಿದೇಶಿ ಗಣ್ಯರ ಮೇಲೆ ಸರ್ಕಾರವು ತನ್ನ ಆಹಾರದ ಆಯ್ಕೆಗಳನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ʼʼಶೇಕಡಾ 80ರಷ್ಟು ಭಾರತೀಯರು ಮಾಂಸಾಹಾರಿಗಳು. ಭಾರತೀಯ ಮಾಂಸಾಹಾರಿ ಆಹಾರವು ಅತ್ಯಂತ ರುಚಿಕರವಾಗಿರುತ್ತದೆ. ನನ್ನ ತಂಗಿ ಮಾಡುವ ಚೋಲೆ ಭಟೂರೆಯಷ್ಟೇ ಮಾಂಸಾಹಾರವೂ ರುಚಿಯಾಗಿರುತ್ತದೆʼʼ ಎಂದು ರಾಹುಲ್ ಗಾಂಧಿ ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ಉತ್ತರ ಭಾರತದ ಪ್ರಸಿದ್ಧ ಖಾದ್ಯದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಇಲ್ಲಿದೆ ರಾಹುಲ್ ಗಾಂಧಿ ಪೋಸ್ಟ್:
For the record: 80% of Indians are non-vegetarian.
— Rahul Gandhi (@RahulGandhi) September 13, 2026
Indian non-vegetarian food is delicious. As are my sister's chole bhature. pic.twitter.com/8f6ziKjLan
ʼʼಭಾರತೀಯರ ಮೇಲೆ ತನ್ನ ಆಹಾರದ ಆಯ್ಕೆಗಳನ್ನು ಹೇರುವ ಬಿಜೆಪಿಯ ಅಭ್ಯಾಸವು ಈಗಾಗಲೇ ತೀವ್ರ ಸಮಸ್ಯಾತ್ಮಕವಾಗಿದೆ. ಈಗ ಅವರು ಪ್ರಪಂಚದಾದ್ಯಂತದ ಗಣ್ಯರ ಮೇಲೂ ತಮ್ಮದೇ ಆದ ಆಯ್ಕೆಗಳನ್ನು ಹೇರುವ ಮೂಲಕ ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆʼʼ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ರಾಹುಲ್ ಗಾಂಧಿಗೆ ಬೆಂಬಲಿಸಿ, ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದರು.