ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಧನ, ಆಹಾರ, ಭೂ ಖನಿಜಗಳ ಮೇಲೆ ಸ್ವಾವಲಂಬನೆ: ಬ್ರಿಕ್ಸ್ ಸಮ್ಮೇಳನದಲ್ಲಿ ನಿರ್ಧಾರ

BRICS summit 2026: ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಿರ್ಬಂಧ, ಸುಂಕಗಳ ಹಿನ್ನೆಲೆಯಲ್ಲಿ ಸ್ವಾವಲಂಬನೆಯ ಲಾಭ ಪಡೆಯಲು ಆದ್ಯತೆ ನೀಡಲು ಬ್ರಿಕ್ಸ್ ಸಮ್ಮೇಳನದಲ್ಲಿ ನಿರ್ಧರಿಸಲಾಯಿತು. ಮುಖ್ಯವಾಗಿ ಇಂಧನ, ಆಹಾರ, ಭೂ ಖನಿಜಗಳ ಮೇಲೆ ಸ್ವಾವಲಂಬನೆಗೆ ಸಾಮರ್ಥ್ಯವನ್ನು ವೃದ್ಧಿಪಡಿಸಲು ನಿರ್ಣಯಿಸಲಾಯಿತು.

ಸ್ವಾವಲಂಬನೆಯ ಲಾಭ ಪಡೆಯಲು ಆದ್ಯತೆ: ಬ್ರಿಕ್ಸ್  ಗುರಿ

ಸಂಗ್ರಹ ಚಿತ್ರ -

ನವದೆಹಲಿ: ಇಂಧನ, ಆಹಾರ ಮತ್ತು ವಿರಳ ಭೂ ಖನಿಜಗಳ ಮೂಲಕ ಸ್ವಾವಲಂಬನೆಯತ್ತ (Self-reliance) ಸಾಗಲು ಬ್ರಿಕ್ಸ್ ಸಮ್ಮೇಳನದಲ್ಲಿ (BRICS summit 2026) ಸದಸ್ಯ ರಾಷ್ಟ್ರಗಳು ನಿರ್ಣಯ ಕೈಗೊಂಡವು. ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಿರ್ಬಂಧ, ಸುಂಕಗಳ ಹಿನ್ನೆಲೆಯಲ್ಲಿ ಸ್ವಾವಲಂಬನೆಯ ಲಾಭ ಪಡೆಯಲು ಆದ್ಯತೆ ನೀಡಲು ನಿರ್ಧರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಸೇರಿದಂತೆ ಬ್ರಿಕ್ಸ್ ನಾಯಕರು ಆರ್ಥಿಕ ಸಹಕಾರವನ್ನು ಬಲಪಡಿಸಲು ಹಾಗೂ ನಿರ್ಬಂಧ ಮತ್ತು ಭೌಗೋಳಿಕ, ರಾಜಕೀಯ ಅಡ್ಡಿಗೆ ಒಳಗಾಗುವ ಬಲವಾದ ಪೂರೈಕೆ ಸರಪಳಿ ಮತ್ತು ಪರ್ಯಾಯ ವ್ಯಾಪಾರ ಮಾರ್ಗಗಳನ್ನು ರೂಪಿಸಲು ಈ ಸಂದರ್ಭದಲ್ಲಿ ಕರೆ ನೀಡಿದರು.

ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ನಿರ್ಬಂಧ, ಸುಂಕಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ವ್ಯಾಪಾರ ವಹಿವಾಟುಗಳನ್ನು ಮರುರೂಪಿಸುತ್ತಿರುವ ಅವಶ್ಯಕತೆ ಇದೆ. ಈ ಸಮಯದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಬೆಳೆಯುತ್ತಿರುವ ಸ್ವಾವಲಂಬನೆಯ ಲಾಭ ಪಡೆಯಲು ಮುಂದಾಗಿವೆ.

ಬ್ರಿಕ್ಸ್‌ ನಾಯಕರಿಗೆ ಭರ್ಜರಿ ಶಾಖಾಹಾರಿ ಔತಣ; ಮೆನುವಿನಲ್ಲಿ ಮಿಲ್ಲೆಟ್ ಪಲಾವ್‌, ಬೀಟ್‌ರೂಟ್‌ ರಾಯ್ತ ಸೇರಿ ಏನೇನಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಆಹಾರ, ಇಂಧನ, ವಿರಳ ಭೂ ಖನಿಜಗಳು, ಸಮುದ್ರ ಮಾರ್ಗಗಳು ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದರಿಂದ ಆಗಾಗ್ಗೆ ತೊಂದರೆಗಳು ಉಂಟಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ತಮ್ಮ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಬ್ರಿಕ್ಸ್ ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.

ವಿರಳ ಭೂ ಖನಿಜ

ಸ್ವಚ್ಛ ಇಂಧನ, ಸುಧಾರಿತ ಉತ್ಪಾದನಾ ವಲಯದತ್ತ ಪ್ರಪಂಚ ವೇಗವಾಗಿ ಸಾಗುತ್ತಿರುವ ಈ ಸಂದರ್ಭದಲ್ಲಿ ವಿರಳ ಭೂ ಖನಿಜಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಈ ಖನಿಜಗಳು ಎಲೆಕ್ಟ್ರಿಕ್ ವಾಹನಗಳು, ಪವನ ಟರ್ಬೈನ್‌ಗಳು, ಸ್ಮಾರ್ಟ್‌ಫೋನ್‌ಗಳು, ಸೆಮಿಕಂಡಕ್ಟರ್‌ಗಳು ಮತ್ತು ರಕ್ಷಣಾ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಎಲ್ಲಾ ಆಧುನಿಕ ತಂತ್ರಜ್ಞಾನದ ಮೂಲಾಧಾರಗಳಾಗಿವೆ.

ಬ್ರಿಕ್ಸ್ ದೇಶಗಳು ಪ್ರಪಂಚದ ವಿರಳ ಭೂ ಖನಿಜಗಳ ಸಂಗ್ರಹದ ಶೇಕಡಾ 85ರಷ್ಟು ಪಾಲನ್ನು ಹೊಂದಿದೆ. ಇದರಲ್ಲಿ ಚೀನಾ ಮಾತ್ರ ಜಾಗತಿಕ ಒಟ್ಟು ಮೊತ್ತದ ಅರ್ಧದಷ್ಟು ಪಾಲನ್ನು ಹೊಂದಿದೆ. ಯುಎಸ್ ಜಿಯಾಲಾಜಿಕಲ್ ಸರ್ವೆಯ 2025ರ ದತ್ತಾಂಶದ ಪ್ರಕಾರ ಚೀನಾ ಜಾಗತಿಕ ವಿರಳ ಭೂ ಖನಿಜಗಳ ಸಂಗ್ರಹದ ಶೇಕಡಾ 48.9, ಬ್ರೆಜಿಲ್ ಶೇಕಡಾ 23.3, ಭಾರತ ಶೇಕಡಾ 7.7, ರಷ್ಯಾ ಶೇಕಡಾ 4.2, ದಕ್ಷಿಣ ಆಫ್ರಿಕಾ ಶೇಕಡಾ 1ರಷ್ಟು ಪಾಲನ್ನು ಹೊಂದಿವೆ. ಇದರಲ್ಲಿ ಕೇಂದ್ರೀಕರಣವು ಜಾಗತಿಕ ಸ್ಪರ್ಧೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.

ತೈಲ ಸಂಪನ್ಮೂಲ

ಯುದ್ಧದ ಕಾರಣದಿಂದ ಜಾಗತಿಕ ಬೆಲೆ ಏರಿಕೆಗೆ ಇಂಧನ ಮೇಲಿನ ಹೆಚ್ಚಿನ ಅವಲಂಬನೆಯೂ ಕಾರಣವಾಗುತ್ತದೆ. ಇರಾನ್, ವೆನೆಜುವೆಲಾ ಮೇಲೆ ಯುಎಸ್ ನಿರ್ಬಂಧ ವಿಧಿಸಿದ ಬಳಿಕ ಜಗತ್ತಿನಾದ್ಯಂತ ಕೈಗಾರಿಕಾ ಚಟುವಟಿಕೆ, ವ್ಯಾಪಾರಕ್ಕೆ ಅಡ್ಡಿಯಾಗಿದೆ. ಸೌದಿ ಅರೇಬಿಯಾ, ಇರಾನ್, ಯುಎಇ ಮತ್ತು ರಷ್ಯಾ ಮಾತ್ರ ಜಾಗತಿಕ ತೈಲ ನಿಕ್ಷೇಪಗಳ ಶೇಕಡಾ 37.8ರಷ್ಟು ಪಾಲನ್ನು ಹೊಂದಿವೆ. ಬ್ರಿಕ್ಸ್ ದೇಶಗಳು ಒಟ್ಟು ಪ್ರಪಂಚದ ತೈಲ ನಿಕ್ಷೇಪಗಳ ಸುಮಾರು ಶೇಕಡಾ 40.7ರಷ್ಟು ಪಾಲನ್ನು ಹೊಂದಿವೆ.

ಆಹಾರ ಸಂಪನ್ಮೂಲ

ಆಹಾರ ಸ್ವಾವಲಂಬನೆಯು ದೇಶವೊಂದರ ಪ್ರಮುಖ ರಕ್ಷಣಾ ಕವಚವಾಗಿದೆ. ಇದರಲ್ಲಿ ಬ್ರಿಕ್ಸ್ ರಾಷ್ಟ್ರಗಳು ಬಲವಾದ ಸ್ಥಾನವನ್ನು ಹೊಂದಿದೆ. ಜಾಗತಿಕ ಆಹಾರ ಉತ್ಪಾದನೆಯ ಶೇ. 57.4 ರಷ್ಟನ್ನು ಬ್ರಿಕ್ಸ್ ರಾಷ್ಟ್ರಗಳು ಇದರಲ್ಲಿ ಚೀನಾ ಮತ್ತು ಭಾರತಗಳು ಒಟ್ಟಾಗಿ ವಿಶ್ವದ ಒಟ್ಟು ಆಹಾರ ಉತ್ಪಾದನೆಯ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿವೆ. ಆಹಾರ ಉತ್ಪಾದನೆಯಲ್ಲಿನ ಸ್ವಾಲಂಬನೆಯೂ ದೇಶೀಯ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ. ಹಣದುಬ್ಬರದ ಒತ್ತಡವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

BRICS Summit 2026: ಭಾರತ–ಚೀನಾ ನಡುವಿನ ತೆರೆ ಸರಿಯುತ್ತಿದೆ; 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಕ್ಷಿ ಜಿನ್‌ಪಿಂಗ್‌ ಜತೆ ನರೇಂದ್ರ ಮೋದಿ ಚರ್ಚೆ

ಪರ್ಯಾಯ ಸಮುದ್ರ ಮಾರ್ಗಗಳು

ಇರಾನ್ ಯುದ್ಧದಿಂದ ಸಮುದ್ರ ಮಾರ್ಗ ಸಂಚಾರದಲ್ಲಿ ಉಂಟಾಗಿರುವ ಅಡ್ಡಿಯಿಂದ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಇದು ತೈಲ, ಅನಿಲ ಮತ್ತು ಸರಕು ಸಾಗಣೆ ವೆಚ್ಚಗಳನ್ನು ಹೆಚ್ಚಿಸಿದ್ದು, ಜಾಗತಿಕ ಮಟ್ಟದಲ್ಲಿ ಹಣದುಬ್ಬರಕ್ಕೆ ಕಾರಣವಾಗಿದೆ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ವ್ಯಾಪಾರ ಕಾರಿಡಾರ್‌, ಸಮುದ್ರ ಮಾರ್ಗಗಳನ್ನು ಬ್ರಿಕ್ಸ್ ದೇಶಗಳು ಅನ್ವೇಷಿಸುತ್ತಿವೆ. ಇದರಲ್ಲಿ ಉತ್ತರ- ದಕ್ಷಿಣ ಸಾರಿಗೆ ಕಾರಿಡಾರ್ ಮತ್ತು ರಷ್ಯಾದ ಪ್ರಸ್ತಾವಿತ ಪೂರ್ವ ಮತ್ತು ಆರ್ಕ್ಟಿಕ್ ನೌಕಾಯಾನ ಮಾರ್ಗಗಳು ಸೇರಿವೆ. ಇದು ಕಿರಿದಾದ ಮಾರ್ಗಗಳು, ಸಾರಿಗೆ ವೆಚ್ಚವನ್ನು ತಗ್ಗಿಸುವ ಗುರಿಯನ್ನು ಹೊಂದಿವೆ.