ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್‌ಫಾರ್ಮ್‌ ಬ್ಯಾಟರ್‌ನ ಹೇಗೆ ಕೈಬಿಡುತ್ತೀರಿ? ವೈಭವ್‌ಗೆ ಕೊಕ್‌ ನೀಡಿದ್ದಕ್ಕೆ ಮೊಹಮ್ಮದ್‌ ಕೈಫ್‌ ಆಕ್ರೋಶ!

Mohammad kaif on Sanju samson's Selection: ಅಫ್ಘಾನಿಸ್ತಾನ ವಿರುದ್ದದ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿ, ವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿದಿದ್ದಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಳೆದ ಸರಣಿಯಲ್ಲಿ ತಂಡದಿಂದ ಹೊರಗೆ ಉಳಿದಿದ್ದ ಸಂಜುಗೆ ನೇರವಾಗಿ ಆಡುವ ಬಳಗದಲ್ಲಿ ಸ್ಥಾನ ನೀಡಿದ್ದರ ಬಗ್ಗೆ ಕೈಫ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಚಾನ್ಸ್‌ ನೀಡಿದ್ದಕ್ಕೆ ಮೊಹಮ್ಮದ್‌ ಕೈಫ್‌ ಆಕ್ರೋಶ!

ಸಂಜು ಸ್ಯಾಮ್ಸನ್‌ ಆಯ್ಕೆಯನ್ನು ಪ್ರಶ್ನಿಸಿದ ಮೊಹಮ್ಮದ್‌ ಕೈಫ್‌. -

Profile
Ramesh Kote Sep 14, 2026 2:14 PM

ನವದೆಹಲಿ: ಅಪ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs AFG) ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಸ್ಥಾನ ನೀಡದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad kaif) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಕಾಲ ಸಂಜು ಸ್ಯಾಮ್ಸನ್‌ಗೆ ಭಾರತ ತಂಡದಿಂದ ಕೈ ಬಿಡಲಾಗಿತ್ತು. ಆದರೆ, ಇದೀಗ ಅವರನ್ನು ತ್ವರಿತವಾಗಿ ಮೊದಲನೇ ಟಿ20ಐ ಪಂದ್ಯದ ಪ್ಲೇಯಿಂಗ್‌ XIನಲ್ಲಿ ಸ್ಥಾನವನ್ನು ನೀಡಲಾಗಿದೆ. ಸಿಕ್ಕ ಅವಕಾಶದಲ್ಲಿ ಸಂಜು ಪಂದ್ಯದಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾದರು. ಅವರು 8 ಎಸೆತಗಳಲ್ಲಿ 10 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದು ಬೀಗಿತು.

ಈ ಸರಣಿಗೂ ಆರಂಭಕ್ಕೂ ಮುನ್ನ ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿತ್ತು. ಏಕೆಂದರೆ, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಸಂಜು ಮರಳಿದ್ದರಿಂದ ತಂಡದ ಪ್ಲೇಯಿಂಗ್‌ XIನಲ್ಲಿ ಅದರಲ್ಲಿಯೂ ವಿಶೇಷವಾಗಿ ಆರಂಭಿಕ ಸ್ಥಾನಕ್ಕೆ ಅಭಿಷೇಕ್‌ ಶರ್ಮಾ, ವೈಭವ್‌ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್‌ ನಡುವೆ ತೀವ್ರ ಪೈಪೋಟಿ ಇತ್ತು. ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿಯೂ ಈ ಮಾತನ್ನು ನಾಯಕ ಶ್ರೇಯಸ್‌ ಅಯ್ಯರ್‌ ಒಪ್ಪಿಕೊಂಡಿದ್ದರು.

IND vs AFG: ಅಭಿಷೇಕ್‌ ಶರ್ಮಾ ಅಬ್ಬರ, ಆಫ್ಘನ್‌ ಎದುರು ಭಾರತಕ್ಕೆ 7 ವಿಕೆಟ್‌ ಜಯ!

ಸಂಜು ಸ್ಯಾಮ್ಸನ್‌ ಆಯ್ಕೆಯ ಬಗ್ಗೆ ಮೊಹಮ್ಮದ್‌ ಕೈಫ್‌ ಪ್ರತಿಕ್ರಿಯೆ

"ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್‌ ಇಷ್ಟು ಬೇಗ ಏನು ಮಾಡಿದರು? ಸಾಮಾನ್ಯವಾಗಿ ನೀವು ತಂಡದಿಂದ ಕೈಬಿಟ್ಟಾಗ, ನೀವು ಫಾರ್ಮ್‌ಗೆ ಮರಳಿದ ಬಳಿಕ ತಂಡದ ಆಡುವ ಬಳಗದಲ್ಲಿ ಆಡಬೇಕಾಗುತ್ತದೆ. ಆದರೆ, ಸಂಜು ವಿಷಯದಲ್ಲಿ ಇದು ಯಾವುದೂ ನಡೆದಿಲ್ಲ. ಅವರಿಗೆ ಹೇಗೆ ಅವಕಾಶ ಸಿಕ್ಕಿತು? ಇದು ದೊಡ್ಡ ಪ್ರಶ್ನೆ. ಜಿಂಬಾಬ್ವೆಯಲ್ಲಿ ವೈಭವ್‌ ಸೂರ್ಯವಂಶಿ ಅವರೊಂದಿಗೆ ಆಡಿಸಿದ್ದ ಅದೇ ಸಂಯೋಜನೆಯನ್ನು ನೀವು ಏಕೆ ಆಡಿಸಿಲ್ಲ? ಇದು ಮತ್ತೊಂದು ಪ್ರಶ್ನೆ," ಎಂದು ಮೊಹಮ್ಮದ್‌ ಕೈಫ್‌ ಕ್ರಿಕ್‌ಬಝ್‌ನಲ್ಲಿ ಮಾತನಾಡುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವೈಭವ್‌ ಸೂರ್ಯವಂಶಿಗೆ ಕೈಫ್‌ ಬೆಂಬಲ

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದರೂ, ತಂಡದ ಆರಂಭಿಕ ಜೋಡಿ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ತನ್ನ ಅತ್ಯುತ್ತಮ ಆರಂಭಿಕ ಸಂಯೋಜನೆ ಯಾವುದು ಎಂಬುದರ ಬಗ್ಗೆ ಇನ್ನೂ ಗೊಂದಲದಲ್ಲಿದೆ ಎಂದು ಕೈಫ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ, “ನಾನು ಏನು ತಪ್ಪು ಮಾಡಿದೆ?” ಎಂದು ಯೋಚಿಸುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Women's Asia cup: ಮತ್ತೊಮ್ಮೆ ಪಾಕಿಸ್ತಾನದ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!

“ನನ್ನ ಪ್ರಕಾರ, ಅವರು ಸ್ವಲ್ಪ ಹಿಂಜರಿಯುತ್ತಿದ್ದಾರೆ. ತಮ್ಮ ಅತ್ಯುತ್ತಮ ಆರಂಭಿಕ ಜೋಡಿ ಯಾವುದು ಎಂಬುದರ ಬಗ್ಗೆ ಅವರಿಗೆ ಖಚಿತತೆ ಇಲ್ಲ. ಭಾರತ ತಂಡ ಇನ್ನೂ ಅದರ ಬಗ್ಗೆ ಯೋಚಿಸುತ್ತಿದೆ. ವೈಭವ್, ‘ನಾನು ಏನು ತಪ್ಪು ಮಾಡಿದೆ?’ ಎಂದು ಹೇಳಿಕೊಳ್ಳುತ್ತಿರಬಹುದು,” ಎಂದು ಕೈಫ್ ಹೇಳಿದ್ದಾರೆ.

ಇದೇ ವೇಳೆ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ವೇಗಿ ಅರ್ಷದೀಪ್ ಸಿಂಗ್ ತಮ್ಮ ನಿಖರ ಹಾಗೂ ವೈವಿಧ್ಯಮಯ ಬೌಲಿಂಗ್‌ನಿಂದ ಮಿಂಚಿದರೆ, ಅಭಿಷೇಕ್ ಶರ್ಮಾ ಸ್ಫೋಟಕ 82 ರನ್‌ಗಳ ಮೂಲಕ ಭಾರತದ ಗೆಲುವನ್ನು ಸುಲಭಗೊಳಿಸಿದರು.