ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mexico supermarket Blast: ಸೂಪರ್‌ ಮಾರ್ಕೆಟ್‌ನಲ್ಲಿ ಭಾರೀ ಸ್ಫೋಟ; ಮಕ್ಕಳು ಸೇರಿ 23 ಜನ ಮಾರಣಹೋಮ

Massive explosion in Mexico:ವಾಯುವ್ಯ ಮೆಕ್ಸಿಕೋದ ಹರ್ಮೊಸಿಲ್ಲೊ ನಗರದ ಮಧ್ಯಭಾಗದಲ್ಲಿರುವ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಕ್ಸಿಕೋ ಈ ವಾರಾಂತ್ಯದಲ್ಲಿ ವರ್ಣರಂಜಿತ ಹಬ್ಬಗಳನ್ನು ಆಚರಿಸುತ್ತಿದೆ. ಆದರೆ ಸತ್ತವರ ದಿನವನ್ನು ಆಚರಿಸುತ್ತಿದೆ. ಆದರೆ ನಿನ್ನೆ ಸಂಭವಿಸಿದ ದುರಂತದಿಂದಾಗಿ ಕರಾಳ ದಿನ ಆಚರಿಸುವಂತಾಗಿದೆ.

ಭಾರೀ ಸ್ಫೋಟ; ಮಕ್ಕಳು ಸೇರಿ 23 ಜನ ಮಾರಣಹೋಮ

-

Rakshita Karkera Rakshita Karkera Nov 2, 2025 11:47 AM

ಮೆಕ್ಸಿಕೋ: ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಶನಿವಾರ ಭಾರೀ ಪ್ರಮಾಣದ ಸ್ಫೋಟವೊಂದು(Mexico supermarket Blast) ಸಂಭವಿಸಿದ್ದು, ಬರೋಬ್ಬರಿ 23 ಜನ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ವಾಯುವ್ಯ ಮೆಕ್ಸಿಕೋದ ಹರ್ಮೊಸಿಲ್ಲೊ ನಗರದ ಮಧ್ಯಭಾಗದಲ್ಲಿರುವ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಕ್ಸಿಕೋ ಈ ವಾರಾಂತ್ಯದಲ್ಲಿ ವರ್ಣರಂಜಿತ ಹಬ್ಬಗಳನ್ನು ಆಚರಿಸುತ್ತಿದೆ. ಆದರೆ ಸತ್ತವರ ದಿನವನ್ನು ಆಚರಿಸುತ್ತಿದೆ. ಆದರೆ ನಿನ್ನೆ ಸಂಭವಿಸಿದ ದುರಂತದಿಂದಾಗಿ ಕರಾಳ ದಿನ ಆಚರಿಸುವಂತಾಗಿದೆ. ಘಟನೆ ಬಗ್ಗೆ ಸೊನೊರಾ ರಾಜ್ಯದ ಗವರ್ನರ್ ಅಲ್ಫೊನ್ಸೊ ಡುರಾಜೊ ಪ್ರತಿಕ್ರಿಯಿಸಿದ್ದು, ಅಪಘಾತದ ಕಾರಣಗಳನ್ನು ಸ್ಪಷ್ಟಪಡಿಸಲು ನಾನು ಸಂಪೂರ್ಣ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಿದ್ದೇನೆ. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚಿನ ಸಾವುಗಳು ವಿಷಕಾರಿ ಅನಿಲಗಳನ್ನು ಉಸಿರಾಡುವುದರಿಂದ ಸಂಭವಿಸಿವೆ ಎಂದು ರಾಜ್ಯದ ಅಟಾರ್ನಿ ಜನರಲ್ ಗುಸ್ಟಾವೊ ಸಲಾಸ್ ಹೇಳಿದರು.

ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ: ಕಾಬೂಲ್ ಸ್ಫೋಟ: ಮಾನವ ಬಾಂಬರ್‌ನಿಂದ 25 ಪೌಂಡ್ ಸ್ಫೋಟಕ ಬಳಕೆ !

ಪ್ರಾಣ ಕಳೆದುಕೊಂಡವರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಂತ್ರಸ್ತ ಕುಟುಂಬಗಳು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಬೆಂಬಲ ತಂಡಗಳನ್ನು ಕಳುಹಿಸಲು ಅವರು ನಿರ್ದೇಶಿಸಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು, ವಿದ್ಯುತ್ ವೈಫಲ್ಯವೇ ಈ ದುರಂತಕ್ಕೆ ಕಾರಣವೆಂದು ದೂಷಿಸಲಾಗಿದೆ. ಆದರೆ ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರದ ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.

ರೈಲ್ವೇ ಹಳಿಯಲ್ಲಿ ಐಇಡಿ ಸ್ಫೋಟ

ಕೆಲವು ದಿನಗಳ ಹಿಂದೆಯಷ್ಟೇ ರೈಲ್ವೇ ಹಳಿಯಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ಗುರುವಾರ (ಅಕ್ಟೋಬರ್‌ 23) ಬೆಳಗಿನ ಜಾವ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ (IED Blast) ಸಂಭವಿಸಿದೆ. ಇದರಿಂದ ಮೂರು ಅಡಿ ಉದ್ದದ ಹಳಿಗೆ ಹಾನಿಯಾಗಿದ್ದು, ರೈಲು ಸೇವೆಗಳು ಕೆಲಕಾಲ ಸ್ಥಗಿತಗೊಂಡವು. ಸದ್ಯ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ. ಕೊಕ್ರಜಾರ್ ರೈಲು ನಿಲ್ದಾಣದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ರೈಲು ಹಳಿತಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮವಾಗಿ ದುರಸ್ತಿ ಕಾರ್ಯ ಮತ್ತು ಪರಿಶೀಲನೆಗಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ."ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಯುಪಿ ಅಜರಾ ಶುಗರ್ ಗೂಡ್ಸ್‌ ರೈಲು ಸಲಕತಿ ಮತ್ತು ಕೊಕ್ರಝಾರ್ ನಡುವೆ ಹಾದುಹೋಗುತ್ತಿದ್ದಾಗ ಸಮಸ್ಯೆ ಕಂಡುಬಂತು. ಕೂಡಲೇ ರೈಲನ್ನು ನಿಲ್ಲಿಸಿ ಪರಿಶೀಲಿಸಿದಾಗ ಶಂಕಿತ ಬಾಂಬ್ ಸ್ಫೋಟದಿಂದಾಗಿ ಹಳಿಗೆ ಹಾನಿಯಾಗಿರುವುದು ಗೊತ್ತಾಯಿತು" ಎಂದು ಈಶಾನ್ಯ ಗಡಿನಾಡು ರೈಲ್ವೆ (NFR) ತಿಳಿಸಿದೆ.