ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Afghanistan earthquake: ಭಾರೀ ಭೂಕಂಪ; 250 ಬಲಿ- 400ಕ್ಕೂ ಹೆಚ್ಚು ಜನರಿಗೆ ಗಾಯ

ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Afghanistan earthquake: ಭಾರೀ ಭೂಕಂಪ; 250 ಬಲಿ- 400ಕ್ಕೂ ಹೆಚ್ಚು ಜನರಿಗೆ ಗಾಯ

-

Rakshita Karkera Rakshita Karkera Sep 1, 2025 11:06 AM

ಕಾಬೂಲ್‌: ಸೋಮವಾರ ಬೆಳಗಿನ ಜಾವ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ(Afghanistan earthquake) ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆಯ ಕಂಪನವು ಬೆಳಗಿನ ಜಾವ 12:27 ಕ್ಕೆ (IST) ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಭೂಕಂಪದಿಂದಾಗಿ ಮನೆಯ ಛಾವಣಿ ಕುಸಿದು ಜನ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಹಲವಾರು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಕೆಲವು ಸೆಕೆಂಡುಗಳ ಕಾಲ ಕಟ್ಟಡಗಳು ಕಂಪಿಸಿದವು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸುಮಾರು 370 ಕಿ.ಮೀ ದೂರದಲ್ಲಿ ಕಂಪನದ ಅನುಭವವಾಯಿತು ಎಂದು ಪತ್ರಕರ್ತರು ತಿಳಿಸಿದ್ದಾರೆ.

ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್ ಬಳಿ, ವಿಶೇಷವಾಗಿ ಹಿಂದೂ ಕುಶ್ ಪ್ರದೇಶದಲ್ಲಿ ಅಫ್ಘಾನಿಸ್ತಾನ ಇರುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತದೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಭಾರೀ ಪ್ರವಾಹ ಉಂಟಾಗಿ ಐದು ಜನರು ಸಾವನ್ನಪ್ಪಿ, ಬೆಳೆಗಳು ಮತ್ತು ಆಸ್ತಿಪಾಸ್ತಿಗಳು ನಾಶವಾದ ಕೆಲವೇ ದಿನಗಳ ನಂತರ ಈ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ-ಎನ್ಸಿಆರ್ ಸೇರಿದಂತೆ ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಕಟ್ಟಡಗಳು ನಡುಗಿದ್ದು, ಜನರು ಹೊರಗೆ ಓಡಿ ಬಂದಿದ್ದಾರೆ. ಭಾರತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಭೂಮಿಯ ಮೇಲ್ಮೈಗೆ ಹತ್ತಿರ ಅಥವಾ ಮಧ್ಯಮ ಆಳದ ಭೂಕಂಪಗಳು ಆಳವಾದ ಭೂಕಂಪಗಳಿಗಿಂತ ಸಾಮಾನ್ಯವಾಗಿ ಹೆಚ್ಚು ಅಪಾಯಕಾರಿ. ಏಕೆಂದರೆ ಇವುಗಳ ಕಂಪನ ತರಂಗಗಳು ಮೇಲ್ಮೈಗೆ ತಲುಪಲು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತವೆ. ಇದರಿಂದ ನೆಲದ ಕಂಪನಗಳು ಹೆಚ್ಚು ತೀವ್ರವಾಗಿರುತ್ತವೆ ಮತ್ತು ಇದು ಕಟ್ಟಡಗಳಿಗೆ ಹೆಚ್ಚು ಹಾನಿ ಹಾಗೂ ಹೆಚ್ಚು ಸಾವು-ನೋವುಗಳಿಗೆ ಕಾರಣವಾಗಬಹುದು.

ಈ ಸುದ್ದಿಯನ್ನೂ ಓದಿ: Baba Vanga Prediction: ರಷ್ಯಾದಲ್ಲಿ ಭೂಕಂಪ, ಜಪಾನಿನಲ್ಲಿ ಸುನಾಮಿ... ಮತ್ತೆ ನಿಜವಾಗಿದೆ ವಂಗಾ ಭವಿಷ್ಯವಾಣಿ!

ರೆಡ್ ಕ್ರಾಸ್ ಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನವು ಹಿಂದೆ ಅನೇಕ ಪ್ರಬಲ ಭೂಕಂಪಗಳನ್ನು ಅನುಭವಿಸಿದೆ. ಮತ್ತು ಹಿಂದೂ ಕುಶ್ ಪರ್ವತ ಶ್ರೇಣಿಯು ಭೌಗೋಳಿಕವಾಗಿ ಸಕ್ರಿಯವಾಗಿದ್ದು, ಪ್ರತಿ ವರ್ಷವೂ ಭೂಕಂಪಗಳು ಸಂಭವಿಸುತ್ತವೆ.