ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sheikh Hasina: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಜೀವ ಉಳಿಸಿದ್ದು ಭಾರತದಿಂದ ಹೋದ ಒಂದು ಫೋನ್ ಕಾಲ್...!

Bangladesh: 2024ರಲ್ಲಿ ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ, ಭಾರತದಲ್ಲಿ ಯಾವುದೇ ತೊಂದರೆಯಿಲ್ಲದೇ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇವತ್ತು ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಅವರಿಗೆ ಅಂದು ಭಾರತದ ಒಂದು ಫೋನ್ ಕಾಲ್. ಹಾಗಾದ್ರೆ ಫೋನ್ ಮಾಡಿದ್ದು ಯಾರು..? ಆ ವ್ಯಕ್ತಿ ಕರೆ ಮಾಡಿ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಒಂದು ಕರೆ

ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ(ಸಂಗ್ರಹ ಚಿತ್ರ) -

Profile
Sushmitha Jain Nov 8, 2025 10:52 AM

ನವದೆಹಲಿ: 2024ರಲ್ಲಿ ಬಾಂಗ್ಲಾದೇಶದಿಂದ(Bangladesh) ತಪ್ಪಿಸಿಕೊಂಡು ಬಂದು ಭಾರತ(India)ದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ(Sheikh Hasina), ಭಾರತದಲ್ಲಿ ಯಾವುದೇ ತೊಂದರೆಗಳಿಲ್ಲದೇ ಜೀವನ ನಡೆಸುತ್ತಿದ್ದಾರೆ. ಆದ್ರೆ ಅವರು ಇಂದು ಇಲ್ಲಿ ನೆಮ್ಮದಿಯಾಗಿ, ಜೀವಂತವಾಗಿ ಬದುಕು ಸಾಗಿಸುತ್ತಿದ್ದಾರೆ ಎಂದರೆ ಅಂದು ಭಾರತದಿಂದ ಅವರಿಗೆ ಹೋದ ಒಂದು ಪೋನ್ ಕರೆಯೇ ಕಾರಣ.

ಹೌದು ಆಗಸ್ಟ್ 2024 ರಲ್ಲಿ ಬಾಂಗ್ಲಾ ದೇಶದಾದ್ಯಂತ ವಾರಗಟ್ಟಲೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಹಸೀನಾ ಅವರ ಸರ್ಕಾರ ಪತನಗೊಂಡಿತು. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಿರೋಧ ಪಕ್ಷಗಳನ್ನು ಹತ್ತಿಕ್ಕಿದ ಆರೋಪಗಳ ನಂತರ ಈ ಅಶಾಂತಿ ಆರಂಭವಾಯಿತು. ವಿದ್ಯಾರ್ಥಿ ಗುಂಪುಗಳು ಮತ್ತು ನಾಗರಿಕ ಸಮಾಜದ ಕೆಲವು ವರ್ಗಗಳು ನಡೆಸಿದ ಬೃಹತ್ ಪ್ರತಿಭಟನೆಗಳು ಅವರ ರಾಜೀನಾಮೆ ಮತ್ತು ತಟಸ್ಥ ಹಂಗಾಮಿ ಸರ್ಕಾರದ ರಚನೆಗೆ ಒತ್ತಾಯಿಸಿದ್ದವು. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ಹೆಚ್ಚಾದಾಗ, ಹಸೀನಾ ಅವರ ಆಡಳಿತ ಅಂತಿಮವಾಗಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಇಷ್ಟಾದರೂ ಪರಿಸ್ಥಿತಿ ತಣಿಯಲಿಲ್ಲ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಡುವೆ ಜನಸಮೂಹವು ಬಾಂಗ್ಲಾದ ಢಾಕಾದಲ್ಲಿರುವ ಅವರ ಅರಮನೆಗೆ ನುಗ್ಗಿದ್ದರು. ದಾಂಧಲೆ ನಡೆಸಿದ್ದರು ಆದರೂ ತಮ್ಮ ಮಾತೃಭೂಮಿಯನ್ನು ತೊರೆಯಲು ಹಸೀನಾ ಒಪ್ಪಿರಲಿಲ್ಲ.

ಸಹೋದರಿ - ಮಗ ಹೇಳಿದ್ದರೂ ಪಟ್ಟು ಬಿಡದ ಹಸೀನಾ

ಬಾಂಗ್ಲಾದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಹಸೀನಾ ಅವರ ಸಹೋದರಿ ಶೇಖ್ ರಿಹಾನಾ ಮತ್ತು ಮಗ ಸಜೀಬ್ ವಾಜೀದ್ ಅವರನ್ನು ಸಂಪರ್ಕಿಸಿದ್ದರು. ಅಮೆರಿಕದಲ್ಲಿ ವಾಸಿಸುತ್ತಿರುವ ಸಜೀಬ್ ಕೂಡ ತಮ್ಮ ತಾಯಿಗೆ, ನೀವು ತಕ್ಷಣ ಬಾಂಗ್ಲಾದಿಂದ ಪಲಾಯನ ಮಾಡುವಂತೆ ಕೇಳಿಕೊಂಡರು. ಮಗನ ವಿನಂತಿಗೂ ಜಗದ ಹಸೀನಾ, "ನನ್ನ ದೇಶದಿಂದ ಪಲಾಯನ ಮಾಡುವ ಬದಲು ನಾನು ಸಾಯುವುದೇ ಮೇಲು" ಎಂದು ಹೇಳಿದರು.

ಈ ಸುದ್ದಿಯನ್ನು ಓದಿ: Viral Post: ಬಿಹಾರದಲ್ಲಿಯೂ ವೋಟ್‌ ಮಾಡಿದ ಪುಣೆ ಮಹಿಳೆ; ರಾಹುಲ್‌ ಹೇಳ್ತಿರೋ ವೋಟ್‌ ಚೋರಿಗೆ ಇದೇ ಸಾಕ್ಷಿ ಎಂದ ಕಾಂಗ್ರೆಸ್‌

ಜೀವ ಉಳಿಸಿದ ಒಂದು ಫೋನ್ ಕಾಲ್

ಆದರೆ ಮೊದ ಮೊದಲಿಗೆ ಬಾಂಗ್ಲಾವನ್ನು ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದ ಹಸೀನಾ, ಅವರ ಮನಸ್ಸು ಬದಲಾಯಿಸುವಂತೆ ಮಾಡಿದ್ದು ಒಂದು ಫೋನ್ ಕಾಲ್. ಅಂದು ಆ ಕರೆ ಬಂದ ಬಳಿಕ ಅವರು ತೆಗೆದುಕೊಂಡ ಒಂದು ನಿರ್ಧಾರ ಅವರನ್ನು ಹಿಂದೂ ಜೀವಂತವಾಗಿ ಇರುವಂತೆ ಮಾಡಿದ್ದು, ಅದಕ್ಕೆ ಕಾರಣ ನಮ್ಮ ದೇಶದಿಂದ ಬಾಂಗ್ಲಾಕ್ಕೆ ಹೋದ ಒಂದು ಫೋನ್ ಕರೆ ಎನ್ನಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ "ಇನ್ಶಾಲ್ಲಾ ಬಾಂಗ್ಲಾದೇಶ: ದಿ ಸ್ಟೋರಿ ಆಫ್ ಆನ್ ಅನ್‌ಫಿನಿಶ್ಡ್ ರೆವಲ್ಯೂಷನ್" ಪುಸ್ತಕದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಈ ಪುಸ್ತಕವನ್ನು ದೀಪ್ ಹಾಲ್ಡರ್, ಜಯದೀಪ್ ಮಜುಂದಾರ್ ಮತ್ತು ಸಹಿದುಲ್ ಹಸನ್ ಖೋಕನ್ ಬರೆದು ಜಗ್ಗರ್‌ನಾಟ್ ಎಂಬುವರು ಬರೆದಿದ್ದಾರೆ.

ಕರೆ ಮಾಡಿದ್ದು ಯಾರು...?

ಇನ್ನು ಅಂದು ಹಸೀನಾ ಅವರಿಗೆ ಕರೆ ಮಾಡಿದವರು ಯಾರು ಎಂಬುದನ್ನು ಪುಸ್ತಕದಲ್ಲಿ ಬಹಿರಂಗಪಡಿಸಿಲ್ಲ, ಆದರೆ ವರದಿಗಳ ಪ್ರಕಾರ ಹಸೀನಾ ಅವರಿಗೆ ಪರಿಚಿತರಾದ ಭಾರತದ ಉನ್ನತ ಅಧಿಕಾರಿಯೊಬ್ಬರು ಕರೆ ಮಾಡಿದ್ದು, ನಿಮ್ಮ ಬಳಿ ಕಡಿಮೆ ಸಮಯವಿದೆ. ಪರಿಸ್ಥಿತಿ ಕೈ ತಪ್ಪುವ ಮುಂಚೆ ನೀವು ಅಲ್ಲಿಂದ ಗಣಭಬನ್. ಇಲ್ಲದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ನೀವು ಜೀವಂತವಾಗಿರಬೇಕು -ಹೋರಾಟ ಇನ್ನೂ ಮುಗಿದಿಲ್ಲ ಎಂಬ ಎಚ್ಚರವನ್ನು ನೀಡಿದ್ದರು ಎನ್ನಲಾಗಿದೆ. ಕೇವಲ ಒಂದೆರೆದು ನಿಮಿಷಗಳ ಕಾಲ ಮಾತ್ರ ಹಸೀನಾ ಮತ್ತು ಆ ಅಧಿಕಾರಿ ಸಂಭಾಷಣೆ ನಡೆಸಿದ್ದರೂ ಹಸೀನಾ ಅವರ ಮೇಲೆ ಗಾಢವಾದ ಪ್ರಭಾವ ಭೀರಿದೆ.

ಇನ್ನು ಇತ್ತೀಚೆಗೆ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ, ನಾನು ಭಾರತದ ರಾಜಧಾನಿ ಹೊಸದಿಲ್ಲಿಯಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇನೆ. ಇಲ್ಲಿ ನನಗೆ ಯಾವ ತೊಂದರೆಗಳೂ ಇಲ್ಲ. ಆದರೆ ನನ್ನ ಮಾತೃಭೂಮಿ ಬಾಂಗ್ಲಾದೇಶಕ್ಕೆ ಮರಳಬೇಕು, ಅಲ್ಲಿನ ಜನರ ನೋವಿಗೆ ಧ್ವನಿಯಾಗಬೇಕು, ಬಾಂಗ್ಲಾದೇಶವನ್ನು ದುಷ್ಟ ಶಕ್ತಿಗಳ ಕಪಿಮುಷ್ಠಿಯಿಂದ ರಕ್ಷಿಸಬೇಕು ಎಂಬುದು ನನ್ನ ಮನದಾಸೆಯಾಗಿದೆ" ಎಂದು ತಮ್ಮ ಮನದ ಹಿಂಗಿತವನ್ನು ಶೇಖ್‌ ಹಸೀನಾ ಹೊರಹಾಕಿದ್ದರು.