ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಪ್ಪನ್ನು ಪ್ರಶ್ನಿಸಿದ್ದೇ ತಪ್ಪಾಯ್ತಾ? ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ

Dalit Man Urinated: ಸರ್ಕಾರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಯೊಬ್ಬರ ಮೇಲೆ ಗ್ರಾಮದ ಸರಪಂಚ್ ಮೂತ್ರ ವಿಸರ್ಜಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. 36 ವರ್ಷದ ರಾಜ್‌ಕುಮಾರ್ ಚೌಧರಿ ಎಂಬುವವರ ಮೇಲೆ ಈ ಕೃತ್ಯ ಎಸಗಲಾಗಿದೆ.

ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ!

-

Priyanka P Priyanka P Oct 17, 2025 5:00 PM

ಇಂದೋರ್: ಸರ್ಕಾರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ (Madhya Pradesh) ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜ್ಯದ ಗ್ರಾಮೀಣ ಭಾಗದಲ್ಲಿ ಪುನರಾವರ್ತಿತ ಜಾತಿ ಆಧಾರಿತ ಹಿಂಸಾಚಾರದ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ (Viral News).

36 ವರ್ಷದ ರಾಜ್‌ಕುಮಾರ್ ಚೌಧರಿ ಎಂಬುವವರು ಹಲ್ಲೆಗೊಳಗಾದವರು. ಕಟ್ನಿ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ ದೂರಿನ ಪ್ರಕಾರ, ಅಕ್ಟೋಬರ್ 13ರ ಸಂಜೆ ತನ್ನ ಕೃಷಿ ಭೂಮಿಯ ಬಳಿಯ ರಾಮಗಢ ಬೆಟ್ಟದಿಂದ ಅಕ್ರಮವಾಗಿ ಜಲ್ಲಿಕಲ್ಲು ಅಗೆಯುವುದನ್ನು ವಿರೋಧಿಸಿದ್ದಾಗಿ ಹೇಳಿದ್ದಾರೆ. ಗ್ರಾಮದ ಸರಪಂಚ್ ರಾಮಾನುಜ್ ಪಾಂಡೆ ಮತ್ತು ಅವರ ಸಹಚರರ ಮೇಲ್ವಿಚಾರಣೆಯಲ್ಲಿ ಈ ಚಟುವಟಿಕೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಚೌಧರಿ ಧ್ವನಿ ಎತ್ತಿದಾಗ, ಅವರ ಮೇಲೆ ನಿಂದಿಸಿ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ಅವರು ಜಾತಿ ಬಗ್ಗೆ ನಿಂದನಾತ್ಮಕ ಮಾತುಗಳನ್ನಾಡಿದ್ಲಲ್ಲದೆ, ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಮನೆಗೆ ಹೋಗುವಾಗ ನನ್ನ ಮೇಲೆ ಹೊಂಚು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: Shilpa Shetty: 60 ಕೋಟಿ ರೂ. ವಂಚನೆ ಪ್ರಕರಣ; ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನಟಿ ಶಿಲ್ಪಾ ಶೆಟ್ಟಿ

ಗ್ರಾಮದ ಮುಕ್ತಿಧಾಮ್ ಪ್ರದೇಶದ ಬಳಿ, ಸರಪಂಚ ರಾಮಾನುಜ್ ಪಾಂಡೆ, ಅವರ ಮಗ ಪವನ್ ಪಾಂಡೆ, ಸೋದರಳಿಯ ಸತೀಶ್ ಪಾಂಡೆ ಮತ್ತು ಇತರರು ಅವರನ್ನು ತಡೆದು, ರಾಡ್ ಮತ್ತು ಕೋಲುಗಳಿಂದ ಹಲ್ಲೆ ನಡೆಸಿ, ಅವಮಾನಕರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನನ್ನ ತಾಯಿ ನನ್ನನ್ನು ಉಳಿಸಲು ಪ್ರಯತ್ನಿಸಿದಾಗ, ಅವರ ಕೂದಲನ್ನು ಎಳೆದು ಥಳಿಸಿದರು. ಅವರ ಮಗ ಪವನ್ ಪಾಂಡೆ ನನ್ನ ಮೇಲೆ ಮೂತ್ರ ವಿಸರ್ಜಿಸಿದರು. ಎಲ್ಲರ ಮುಂದೆ ನನಗೆ ಅವಮಾನವಾಯಿತು ಎಂದು ಚೌಧರಿ ಹೇಳಿದರು.

ದೂರು ಸ್ವೀಕರಿಸಿದ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಹಲ್ಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರರು ಚಿಕಿತ್ಸೆಯ ನಂತರ ನಮ್ಮ ಬಳಿಗೆ ಬಂದು ಈ ಬಗ್ಗೆ ಮಾಹಿತಿ ನೀಡಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಿವರವಾದ ತನಿಖೆ ನಡೆಯುತ್ತಿದೆ ಎಂದು ಎಎಸ್ಪಿ ಸಂತೋಷ್ ಡೆಹರಿಯಾ ಹೇಳಿದರು.

ಆದರೆ, ಈ ಎಲ್ಲಾ ಆರೋಪಗಳನ್ನು ಸರಪಂಚ ನಿರಾಕರಿಸಿದ್ದು, ಇವು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿರಲಿಲ್ಲ. ನಾವು ಪಂಚಾಯತ್ ಕಟ್ಟಡವನ್ನು ನವೀಕರಿಸುತ್ತಿದ್ದೆವು. ಅದಕ್ಕಾಗಿ ಜಲ್ಲಿಕಲ್ಲು ಬೇಕಾಗಿತ್ತು. ಈ ಹೇಳಿಕೆಗಳು ಸುಳ್ಳು ಮತ್ತು ನನ್ನ ಮಾನಹಾನಿ ಮಾಡಲು ಈ ಆರೋಪ ಮಾಡಲಾಗುತ್ತಿದೆ ಎಂದು ರಾಮಾನುಜ್ ಪಾಂಡೆ ಹೇಳಿದರು.

ಈ ಘಟನೆಯು ಜುಲೈ 2023 ರಲ್ಲಿ ಸಿಧಿಯಲ್ಲಿ ನಡೆದ ಇದೇ ರೀತಿಯ ಘಟನೆಯನ್ನು ನೆನಪಿಸುತ್ತದೆ. ಬಿಜೆಪಿ ಬೆಂಬಲಿತ ವ್ಯಕ್ತಿ ಪ್ರವೇಶ್ ಶುಕ್ಷ್ಲಾ ಎಂಬವರು, ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದರು. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿತ್ತು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2023 ರ ವರದಿಯ ಪ್ರಕಾರ, ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷ ಭಾರತದಾದ್ಯಂತ 57,789 ಪ್ರಕರಣಗಳು ದಾಖಲಾಗಿವೆ. 2022 ಕ್ಕೆ ಹೋಲಿಸಿದರೆ ಇದು ಹೆಚ್ಚಾಗಿದೆ. ಮಧ್ಯಪ್ರದೇಶ ಮಾತ್ರ ಇಂತಹ 8,232 ಪ್ರಕರಣಗಳನ್ನು ಹೊಂದಿದ್ದು, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ನಂತರ ಜಾತಿ ಸಂಬಂಧಿತ ಅಪರಾಧಗಳಲ್ಲಿ ಅಗ್ರ ಮೂರು ರಾಜ್ಯಗಳಲ್ಲಿ ಒಂದಾಗಿದೆ.