ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: 125 ವರ್ಷಗಳಷ್ಟು ಹಳೆಯ ಒಪ್ಪಂದ ಬಳಸಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ ಭಾರತ

ಕೋಟ್ಯಂತರ ರೂ. ವಂಚಿಸಿ ವಿದೇಶದಲ್ಲಿ ಹೋಗಿ ನೆಲೆಸಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಮರಳಿ ಕರೆತರುವ ಸಾಧ್ಯತೆ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ.ಗಿಂತ ಹೆಚ್ಚು ವಂಚನೆ ಮಾಡಿದ್ದ ಚೋಕ್ಸಿ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತೀಯ ಸಂಸ್ಥೆಗಳು ನಿರಂತರ ಏಳು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಇದೀಗ ಆತನ ಗಡಿಪಾರಿಗೆ ಬೆಲ್ಜಿಯಂ ಒಪ್ಪಿಕೊಂಡಿದೆ.

ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಗಡಿಪಾರಿಗೆ ಬೆಲ್ಜಿಯಂ ಒಪ್ಪಿಗೆ

ನವದೆಹಲಿ: ಕೋಟ್ಯಂತರ ರೂ. ವಂಚಿಸಿ (Fraud Case) ವಿದೇಶದಲ್ಲಿ ಹೋಗಿ ನೆಲೆಸಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಭಾರತಕ್ಕೆ ಮರಳಿ ಕರೆತರಲು ಸಿದ್ದತೆ ನಡೆಸಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (Punjab National Bank) 13,500 ಕೋಟಿ ರೂ. ವಂಚನೆ ಮಾಡಿದ್ದ ಚೋಕ್ಸಿ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತೀಯ ಸಂಸ್ಥೆಗಳುನಿರಂತರ ಏಳು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಇದೀಗ ಆತನ ಗಡಿಪಾರಿಗೆ ಬೆಲ್ಜಿಯಂ (Belgium) ಒಪ್ಪಿಕೊಂಡಿದ್ದರಿಂದ ಅಲ್ಲಿ ಆತನನ್ನು ಬಂಧಿಸಲಾಗಿದೆ. ವೈದ್ಯಕೀಯ ಕಾರಣ ನೀಡಿ ಅಲ್ಲಿಂದ ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಆತನನ್ನು ಬಂಧಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ. ಗೂ ಹೆಚ್ಚು ವಂಚನೆ ಮಾಡಿರುವ ಆರೋಪದ ಮೇರೆಗೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಶನಿವಾರ (ಏ. 12) ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳಾದ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳ (ಇಡಿ) ಕೋರಿಕೆ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ಆತನನ್ನು ಶೀಘ್ರದಲ್ಲಿ ಬಂಧಿಸಿದ್ದಾರೆ.

ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಭಾರತೀಯ ಅಧಿಕಾರಿಗಳು ಭಾರತ ಮತ್ತು ಬೆಲ್ಜಿಯಂ ನಡುವಿನ ಸುಮಾರು 125 ವರ್ಷಗಳಷ್ಟು ಹಳೆಯದಾದ ಹಸ್ತಾಂತರ ಒಪ್ಪಂದವನ್ನು ಬಳಸಿಕೊಂಡಿವೆ.

ಏನಿದು ಭಾರತ-ಬೆಲ್ಜಿಯಂ ಹಸ್ತಾಂತರ ಒಪ್ಪಂದ ?

ಬ್ರಿಟಿಷರು ಭಾರತವನ್ನು ಅಳುತ್ತಿದ್ದ ಸಮಯವದು. ಅಂದರೆ 1901ರ ಅಕ್ಟೋಬರ್ 29ರಂದು ಭಾರತವನ್ನು ಅಳುತ್ತಿದ್ದ ಬ್ರಿಟಿಷರು ಮತ್ತು ಬೆಲ್ಜಿಯಂ ನಡುವೆ ಹಸ್ತಾಂತರ ಒಪ್ಪಂದ ಮಾಡಿಕೊಳ್ಳಲಾಯಿತು. 1907, 1911 ಮತ್ತು 1958ರಲ್ಲಿ ತಿದ್ದುಪಡಿಗಳನ್ನು ಮಾಡಿ ಎರಡು ದೇಶಗಳ ನಡುವೆ ಈ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಲಾಗಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕವೂ ಅಂದರೆ 954ರಲ್ಲಿ ಪತ್ರಗಳ ವಿನಿಮಯದ ಮೂಲಕ ಒಪ್ಪಂದವನ್ನು ಮುಂದುವರಿಸಲಾಗಿದೆ.

ಈ ಒಪ್ಪಂದದ ಪ್ರಕಾರ ಗಂಭೀರ ಅಪರಾಧಗಳನ್ನುನಡೆಸಿರುವ ಆರೋಪಿಗಳನ್ನು ಗಡಿಪಾರು ಮಾಡಲು ಒಪ್ಪಿಗೆ, ಕೊಲೆ, ನಕಲಿ ಅಥವಾ ಹಣದ ನಕಲಿ ಚಲಾವಣೆ, ವಂಚನೆ, ಅತ್ಯಾಚಾರ, ಸುಲಿಗೆ, ಅಕ್ರಮ ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಇನ್ನು ಹಲವು ಗಂಭೀರ ಅಪರಾಧಗಳಿಗಾಗಿ ಆರೋಪಿಗಳನ್ನು ಭಾರತ ಮತ್ತು ಬೆಲ್ಜಿಯಂ ನಡುವೆ ಹಸ್ತಾಂತರಿಸಬಹುದಾಗಿದೆ.

ಈ ಒಪ್ಪಂದದ ಪ್ರಕಾರ ಹಸ್ತಾಂತರಕ್ಕೆ ಕೋರುವ ಆರೋಪ ಹೊತ್ತಿರುವ ಅಪರಾಧವು ಎರಡೂ ದೇಶಗಳಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಪರಾಧದ ಕುರಿತು ಪುರಾವೆಗಳನ್ನು ಹಸ್ತಾಂತರ ಕೋರುವ ದೇಶವು ಪ್ರಸ್ತುತಪಡಿಸಬೇಕು. ಯಾವುದೇ ದೇಶವು ತನ್ನ ಪ್ರಜೆಗಳನ್ನು ಹಸ್ತಾಂತರಿಸಲು ಸಾಧ್ಯವಿಲ್ಲ. ರಾಜಕೀಯ ಅಪರಾಧಗಳಿಗಾಗಿ ಹಸ್ತಾಂತರ ವಿನಂತಿ ನಿರಾಕರಿಸಬಹುದು. ಅಪರಾಧಿಯನ್ನು ಹಸ್ತಾಂತರಿಸಬೇಕೆಂದು ಕೋರುವ ದೇಶವು ಆ ವ್ಯಕ್ತಿಯನ್ನು ಬಂಧಿಸಿದ 14 ದಿನಗಳೊಳಗಾಗಿ ಔಪಚಾರಿಕ ವಿನಂತಿ ಮಾಡದೇ ಇದ್ದರೆ ಅಥವಾ ಬಂಧನವಾದ ಎರಡು ತಿಂಗಳೊಳಗೆ ಪುರಾವೆಗಳನ್ನು ಪ್ರಸ್ತುತಪಡಿಸದಿದ್ದರೆ ಬಿಡುಗಡೆ ಮಾಡಬಹುದು.

ಇದನ್ನೂ ಓದಿ: Controversy: ಮೊದಲು ಶರಿಯತ್ ಬಳಿಕ ಸಂವಿಧಾನ ಎಂದ ಜಾರ್ಖಂಡ್ ಸಚಿವ; ಭುಗಿಲೆದ್ದ ವಿವಾದ

ಹಸ್ತಾಂತರಿಸಲಾದ ವ್ಯಕ್ತಿ ಬಳಿಕ ಯಾವುದೇ ಹೊಸ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸುವಂತಿಲ್ಲ. ಮರಳಿ ಹಿಂತಿರುಗಲು ಅವಕಾಶ ಪಡೆಯದ ಹೊರತು ಆ ವ್ಯಕ್ತಿ ತನ್ನ ತಾಯ್ನಾಡಿನ ಹೊರಗೆ ಅನುಮತಿಯಿಲ್ಲದೆ ಹೋಗುವಂತಿಲ್ಲ.

ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಕೋರಿಕೆ

ಸಿಬಿಐಯ ಜಾಗತಿಕ ಕಾರ್ಯಾಚರಣೆ ಕೇಂದ್ರವು 2024ರ ಆಗಸ್ಟ್‌ನಲ್ಲಿ ಮೆಹುಲ್ ಚೋಕ್ಸಿಯನ್ನು ಆಂಟ್‌ವೆರ್ಪ್‌ನಲ್ಲಿ ಪತ್ತೆಹಚ್ಚಿದ್ದು, ತಕ್ಷಣ ಬೆಲ್ಜಿಯಂಗೆ ಆತನ ಹಸ್ತಾಂತರಕ್ಕೆ ಕೋರಿಕೆ ಸಲ್ಲಿಸಿತ್ತು. ಇದೀಗ ಆತನನ್ನು ಬಂಧಿಸಲಾಗಿದ್ದು, ಭಾರತೀಯ ಏಜೆನ್ಸಿಗಳು ಭಾರತೀಯ ದಂಡ ಸಂಹಿತೆಯ ಹಲವಾರು ವಿಭಾಗಗಳ ಅಡಿಯಲ್ಲಿ ಚೋಕ್ಸಿಯನ್ನು ಹಸ್ತಾಂತರಿಸಲು ಬೆಲ್ಜಿಯಂಗೆ ಔಪಚಾರಿಕ ಮನವಿ ಸಲ್ಲಿಸಿದೆ.

ಬೆಲ್ಜಿಯಂ ಸರ್ಕಾರವು ನಮ್ಮ ತನಿಖೆಯನ್ನು ಮನವರಿಕೆ ಮಾಡಿಕೊಂಡಿದೆ. ಭಾರತೀಯ ಆರೋಪಗಳು ಬೆಲ್ಜಿಯಂನಲ್ಲಿಯೂ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಅವರು ಪ್ರಮಾಣೀಕರಿಸಿದ್ದಾರೆ. ಹೀಗಾಗಿ ಚೋಕ್ಸಿಯ ಹಸ್ತಾಂತರಕ್ಕೆ ಅವರು ಒಪ್ಪಿಗೆ ನೀಡಿ ಬಂಧಿಸಿದ್ದಾರೆ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.