Dire wolves: 12,000 ವರ್ಷಗಳ ಹಿಂದೆ ಅಳಿದು ಹೋಗಿದ್ದ ಡೇಂಜರಸ್ ತೋಳಗಳ ಮರುಸೃಷ್ಟಿ
Dire wolves: ಟೆಕ್ಸಾಸ್ ಮೂಲದ ಕೊಲೊಸಲ್ ಬಯೋಸೈನ್ಸ್‌ನ ಸಂಶೋಧಕರು ಹಿಮಯುಗದ ಮೂರು ತೋಳ ಮರಿಗಳನ್ನು ಸೃಷ್ಟಿಸಿದ್ದು, ಅವು ಸುಮಾರು 12,500 ವರ್ಷಗಳ ಹಿಂದೆ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತಿದ್ದವು. ಅಳಿವಿನಂಚಿನಲ್ಲಿದ್ದ ಡೈರ್ ವುಲ್ಫ್ ಎಂಬ ಜಾತಿಯ ಎರಡು ತೋಳಗಳನ್ನು ವಿಜ್ಞಾನಿಗಳು ಜೆನೆಟಿಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ್ದಾರೆ. ಮೂರರಿಂದ ಆರು ತಿಂಗಳ ವಯಸ್ಸಿನ ಈ ಮರಿಗಳಿಗೆ ರೊಮುಲಸ್ ಮತ್ತು ರೆಮಸ್ ಎಂದು ಹೆಸರಿಡಲಾಗಿದೆ.


ಟೆಕ್ಸಾಸ್: ಸುಮಾರು 12,000 ವರ್ಷಗಳ ಹಿಂದೆ ಅಳಿವಿನಂಚಿನಲ್ಲಿದ್ದ ಡೈರ್ ತೋಳಗಳ (Dire wolves) ಕೂಗು ಮತ್ತೆ ಕೇಳುತ್ತದೆ ಎಂದು ಉದ್ಯಮಿ ಎಲೋನ್ ಮಸ್ಕ್ (Elon Musk) ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಟ್ವಿಟ್ ಮಾಡಿದ್ದಾರೆ. ಡೈರ್ ವುಲ್ಫ್ (Dire wolves) ಎಂಬ ಜಾತಿಯ ತೋಳಗಳು ಇದಾಗಿವೆ. ವಿಜ್ಞಾನಿಗಳು (Scientist) ಇದನ್ನುಆಧುನಿಕ ತಂತ್ರಜ್ಞಾನದ ಮೂಲಕ ಮರುಸೃಷ್ಟಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಟೆಕ್ಸಾಸ್ ಮೂಲದ ಕೊಲೊಸಲ್ ಬಯೋಸೈನ್ಸ್‌ನ ಸಂಶೋಧಕರು ಹಿಮಯುಗದ ಮೂರು ತೋಳ ಮರಿಗಳನ್ನು ಸೃಷ್ಠಿಸಿದ್ದು, ಆ ಜಾತಿಯ ಡೇಂಜರಸ್ ತೋಳಗಳು ಸುಮಾರು 12,500 ವರ್ಷಗಳ ಹಿಂದೆ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತಿದ್ದವು ಎನ್ನಲಾಗಿದೆ.
ಅಳಿದು ಹೋಗಿದ್ದ ಡೈರ್ ವುಲ್ಫ್ ಎಂಬ ಜಾತಿಯ ಎರಡು ತೋಳಗಳನ್ನು ವಿಜ್ಞಾನಿಗಳು ಜೆನೆಟಿಕ್ ತಂತ್ರಜ್ಞಾನದ ಮೂಲಕ ಮರುಸೃಷ್ಟಿಸಿದ್ದಾರೆ. ಮೂರರಿಂದ ಆರು ತಿಂಗಳ ವಯಸ್ಸಿನ ಈ ಮರಿಗಳಿಗೆ ರೊಮುಲಸ್ ಮತ್ತು ರೆಮಸ್ ಎಂದು ಹೆಸರಿಡಲಾಗಿದೆ. ಅವು ಈಗಾಗಲೇ ಸುಮಾರು ನಾಲ್ಕು ಅಡಿ ಉದ್ದ ಮತ್ತು 36 ಕೆ.ಜಿ. ಗಿಂತ ಹೆಚ್ಚು ತೂಕ ಹೊಂದಿವೆ. ಡೈರ್ ವುಲ್ಫ್ ಎಂಬ ಜಾತಿಯ ಈ ಎರಡು ತೋಳದ ಮರಿಗಳನ್ನು ಅಮೆರಿಕದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಇವು ಭಯಾನಕ ತೋಳಗಳ ಜಾತಿಗೆ ಸೇರಿದ್ದು ಈಗ ಕಂಡು ಬರುವ ಬೂದು ತೋಳಗಳಿಗಿಂತ ದೊಡ್ಡದಾಗಿದ್ದವು ಮತ್ತು ಬಲಶಾಲಿಯಾಗಿದ್ದವು. ಸ್ವಲ್ಪ ದಪ್ಪವಾದ ತುಪ್ಪಳ ಮತ್ತು ಬಲವಾದ ದವಡೆಯನ್ನು ಹೊಂದಿದ್ದವು.
ಕೊಲೊಸಲ್ ಬಯೋಸೈನ್ಸಸ್ ಪ್ರಾಚೀನ ಡಿಎನ್‌ಎ, ಕ್ಲೋನಿಂಗ್ ಮತ್ತು ಜೀನ್ ಎಡಿಟಿಂಗ್ ಬಳಸಿ ಡೈರ್ ವುಲ್ಫ್ ಮರಿಗಳನ್ನು ರಚಿಸಿದೆ. ಡೈರ್ ವುಲ್ಫ್ ಅನ್ನು ಎಚ್ ಬಿಒ ಸರಣಿ 'ಗೇಮ್ ಆಫ್ ಥ್ರೋನ್ಸ್' ಜನಪ್ರಿಯಗೊಳಿಸಿತ್ತು. ಡೈರ್ ವುಲ್ಫ್ ನ ಹತ್ತಿರದ ಸಂಬಂಧಿಯಾದ ಬೂದು ತೋಳದ ಡಿಎನ್‌ಎಯನ್ನು ವಿಜ್ಞಾನಿಗಳು ಅಧ್ಯಯನಕ್ಕಾಗಿ ಬಳಸಿದ್ದರು. ಡೈರ್ ವುಲ್ಫ್ ಒಂದು ಕಾಲದಲ್ಲಿ ಉತ್ತರ ಅಮೆರಿಕಾದಲ್ಲಿ ಅಲೆದಾಡುತ್ತಿದ್ದ ಪ್ರಮುಖ ಪರಭಕ್ಷಕ ಪ್ರಾಣಿಯಾಗಿತ್ತು.
ಇಂದೊಂದು ಅತ್ಯಂತ ಮಹತ್ವದ ಬೆಳವಣಿಗೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಎರಡರಲ್ಲೂ ಕೊಲೊಸಲ್ ಸಹ-ಸಂಸ್ಥಾಪಕ ಮತ್ತು ತಳಿಶಾಸ್ತ್ರದ ಪ್ರಾಧ್ಯಾಪಕ ಜಾರ್ಜ್ ಚರ್ಚ್ ತಿಳಿಸಿದ್ದಾರೆ.
Please make a miniature pet wooly mammoth https://t.co/UxoIWmzq6h
— Elon Musk (@elonmusk) April 7, 2025
ಇದಕ್ಕೆ ಪ್ರತಿಕ್ರಿಯಿಸಿರುವ ಬಿಲಿಯನೇರ್ ಎಲಾನ್ ಮಸ್ಕ್, ದಯವಿಟ್ಟು ಒಂದು ಚಿಕಣಿ ಸಾಕುಪ್ರಾಣಿ ಉಣ್ಣೆಯ ಮ್ಯಾಮತ್ ಅನ್ನು ಸೃಷ್ಟಿ ಮಾಡಿ ಎಂದು ಹೇಳಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಡೈರ್ ವುಲ್ಫ್ ಮರಿಗಳು ಜನನದ ಬಳಿಕ ಆಹಾರ ತಿನ್ನಲು ಪ್ರಾರಂಭಿಸಿವೆ. ಅವು ಈಗ ಆರೋಗ್ಯಕರವಾಗಿವೆ ಸಂಸ್ಥೆ ಹೇಳಿದೆ.
SOUND ON. You’re hearing the first howl of a dire wolf in over 10,000 years. Meet Romulus and Remus—the world’s first de-extinct animals, born on October 1, 2024.
— Colossal Biosciences® (@colossal) April 7, 2025
The dire wolf has been extinct for over 10,000 years. These two wolves were brought back from extinction using… pic.twitter.com/wY4rdOVFRH
ಏನಿದರ ವಿಶೇಷತೆ?
ಮರಿಗಳ ನಡವಳಿಕೆಯು ಅಸ್ತಿತ್ವದಲ್ಲಿರುವ ಇತರ ತೋಳ ಜಾತಿಗಳಿಗಿಂತ ಭಿನ್ನವಾಗಿದೆ. ಇವು ಸಾಕು ನಾಯಿಯಂತೆ ವರ್ತಿಸುತ್ತಿವೆ. ನಿರ್ವಾಹಕನೊಬ್ಬನು ಹತ್ತಿರ ಬಂದಾಗ ರೊಮುಲಸ್ ಮತ್ತು ರೆಮಸ್ ತಮ್ಮ ಅಂತರವನ್ನು ಕಾಯ್ದುಕೊಳ್ಳುತ್ತವೆ. ಈ ನಡವಳಿಕೆಯು ಭಯಾನಕ ತೋಳಗಳ ವಿಶಿಷ್ಟ ಲಕ್ಷಣವಾಗಿದೆ ಎನ್ನಲಾಗಿದೆ. ಕೇವಲ ಡೈರ್ ವುಲ್ಫ್ ಮಾತ್ರವಲ್ಲ ಮಹಾಗಜ, ಡೋಡೋ ಮತ್ತು ಟ್ಯಾಸ್ಮೇನಿಯನ್ ಹುಲಿಗಳನ್ನು ಸೃಷ್ಠಿಸಲು ಕೊಲೊಸಲ್‌ನ ವಿಜ್ಞಾನಿಗಳು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: Ram Navami 2025: ಕಲ್ಪತರು ನಾಡಲ್ಲಿ ಮೊಳಗಿದ ರಾಮ ನಾಮ ಜಪ; ದೇವಾಲಯಗಳಲ್ಲಿ ವಿಶೇಷ ಪೂಜೆ
ಇದೊಂದು ಮೈಲುಗಲ್ಲು ಎಂದು ಹೇಳಿರುವ ಕೊಲೊಸಲ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಬೆನ್ ಲ್ಯಾಮ್, ನಮ್ಮ ತಂಡವು 13,000 ವರ್ಷಗಳಿಗಿಂತಲೂ ಹಳೆಯದಾದ ಹಲ್ಲು ಮತ್ತು72,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯಿಂದ ಡಿಎನ್‌ಎ ತೆಗೆದುಕೊಂಡು ಆರೋಗ್ಯಕರ ಭಯಾನಕ ತೋಳಗಳನ್ನು ತಯಾರಿಸಿತು. ವಸ್ತು ಸಂಗ್ರಹಾಲಯ ಸಂಗ್ರಹಗಳಲ್ಲಿ ಸಂರಕ್ಷಿಸಲಾಗಿರುವ ಮಾದರಿಗಳು, ಸಂಶೋಧಕರಿಗೆ ಪ್ರಮುಖ ಆನುವಂಶಿಕ ಲಕ್ಷಣಗಳನ್ನು ಗುರುತಿಸಲು ಅವಕಾಶ ಮಾಡಿಕೊಟ್ಟಿವೆ.
ಒಟ್ಟು ಮೂರು ಮರಿಗಳ ಜನನವಾಗಿವೆ. 2024ರ ಅಕ್ಟೋಬರ್ 1ರಂದು ಎರಡು ಗಂಡು ಮರಿಗಳು ಮತ್ತು 2025ರ ಜನವರಿ 30ರಂದು ಒಂದು ಹೆಣ್ಣು ಮರಿ ಜನನವಾಗಿವೆ. ಎರಡು ಮರಿಗಳು 2,000 ಎಕರೆ ಸ್ಥಳದಲ್ಲಿ ವಾಸಿಸುತ್ತಿವೆ. ಅಲ್ಲಿ ಅವುಗಳನ್ನು ಭದ್ರತಾ ಸಿಬ್ಬಂದಿ, ಡ್ರೋನ್ ಮತ್ತು ಲೈವ್ ಕೆಮರಾಗಳಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಇಳಿಸಿದ್ದಾರೆ.