ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The oldest Person: ಈತನ ವಯಸ್ಸು 144 ವರ್ಷ! ಜಪಾನ್‌ನ ಅತ್ಯಂತ ಹಿರಿಯ ವ್ಯಕ್ತಿಯ ದೀರ್ಘಾಯುಷ್ಯದ ಗುಟ್ಟೇನು ಗೊತ್ತೇ?

Secret of Long Life: 114ನೇ ವಯಸ್ಸಿನಲ್ಲಿ ಟೋಕಿಯೊ ಕ್ರೀಡಾಕೂಟದ ರಿಲೇ ವೇಳೆ ಒಲಿಂಪಿಕ್ ಜ್ಯೋತಿಯನ್ನು ಹೊತ್ತ ನಿವೃತ್ತ ವೈದ್ಯೆ, ಜಪಾನ್ ನ ಅತ್ಯಂತ ಹಿರಿಯ ವ್ಯಕ್ತಿ ಶಿಗೆಕೊ ಕಗಾವಾ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರಿಗೆ 114 ವರ್ಷವಾಗಿತ್ತು. ಅತ್ಯಂತ ಸರಳ ಮತ್ತು ಸ್ಫೂರ್ತಿದಾಯಕ ಜೀವನ ನಡೆಸಿದ ಇವರ ದೀರ್ಘಾಯುಷ್ಯದ ರಹಸ್ಯವೇನು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.

ಶತಾಯುಷಿ ಅಜ್ಜನ ‌ದೀರ್ಘಾಯುಷ್ಯದ ಸೀಕ್ರೆಟ್‌ ಇದಂತೆ!

-

ಟೋಕಿಯೋ: ನಿವೃತ್ತ ವೈದ್ಯೆ, ಜಪಾನ್ (Japan) ನ ಅತ್ಯಂತ ಹಿರಿಯ ವ್ಯಕ್ತಿ (Oldest person) ಶಿಗೆಕೊ ಕಗಾವಾ (Shigeko Kagawa) ಅವರು 114ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ ಎಂದು ಜಪಾನ್‌ನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಘೋಷಣೆ ಮಾಡಿದೆ. ಶಿಗೆಕೊ ಕಗಾವಾ ಅವರು ಜಪಾನ್ ನಲ್ಲಿ ಈ ಹಿಂದೆ ಇದ್ದ ಅತ್ಯಂತ ಹಿರಿಯ ವ್ಯಕ್ತಿ ಮಿಯೋಕೊ ಹಿರೋಯಾಸು (Miyoko Hiroyasu) ಅವರಂತೆಯೇ ಬದುಕಿದರು. ಇದುವೇ ಅವರ ದೀರ್ಘಾಯುಷ್ಯದ ರಹಸ್ಯವಾಗಿತ್ತು. ಅತ್ಯಂತ ಸರಳ ಮತ್ತು ಸ್ಫೂರ್ತಿದಾಯಕ ಜೀವನ ನಡೆಸಿದ ಅವರ ದಿನಚರಿ ಹೇಗಿತ್ತು ಗೊತ್ತೇ?

2021ರಲ್ಲಿ ಶಿಗೆಕೊ ಕಗಾವಾ ಅವರಿಗೆ 109 ವರ್ಷ. ಈ ವಯಸ್ಸಿನಲ್ಲಿ ಅವರು ಟೋಕಿಯೊ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ರಿಲೇ ಸಮಯದಲ್ಲಿ ಒಲಿಂಪಿಕ್ ಜ್ಯೋತಿಯನ್ನು ಹೊತ್ತ ಅತ್ಯಂತ ಹಿರಿಯ ವ್ಯಕ್ತಿ ಎನ್ನುವ ಖ್ಯಾತಿಗೂ ಪಾತ್ರರಾದರು. ವೈದ್ಯೆಯಾಗಿ ಜೀವನ ನಡೆಸಿದ ಇವರ ವೃತ್ತಿ ಕ್ಷೇತ್ರದಲ್ಲಿ ಸಮರ್ಪಣೆ, ಆರೋಗ್ಯಕರ ಜೀವನಶೈಲಿ ಅವರನ್ನು ಜಪಾನ್‌ನಲ್ಲಿ ದೀರ್ಘಾಯುಷ್ಯದ ವ್ಯಕ್ತಿಯನ್ನಾಗಿ ಮಾಡಿದೆ.

ಕಗಾವಾ ಅವರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದರು. ಎರಡನೇ ಮಹಾಯುದ್ಧದ ಮೊದಲೇ ಅವರು ವೈದ್ಯಕೀಯ ಶಿಕ್ಷಣ ಪದವಿ ಪಡೆದರು. ಯುದ್ಧದ ಸಮಯದಲ್ಲಿ ವೃತ್ತಿ ಬದುಕನ್ನು ಆರಂಭಿಸಿದ್ದರು. ಅನಂತರ ತಮ್ಮ ಕುಟುಂಬದ ಚಿಕಿತ್ಸಾಲಯದ ಜವಾಬ್ದಾರಿ ತೆಗೆದುಕೊಂಡರು. 86ನೇ ವಯಸ್ಸಿನಲ್ಲಿ ವೃತ್ತಿ ಬದುಕಿನಿಂದ ನಿವೃತ್ತಿ ಪಡೆದರು.

ಹಗಲು ರಾತ್ರಿ ಎನ್ನದೆ ರೋಗಿಗಳ ಕರೆಗೆ ತಕ್ಷಣ ಸ್ಪಂದಿಸುತ್ತಿದ್ದ ಶಿಗೆಕೊ ಕಗಾವಾ ನಿವೃತ್ತಿಯ ಬಳಿಕವೂ ಕೆಲವರಿಗೆ ಚಿಕಿತ್ಸೆ ನೀಡಿದ್ದರು. ವೃದ್ಧಾಪ್ಯದಲ್ಲೂ ಮಾನಸಿಕವಾಗಿ ಸಕ್ರಿಯರಾಗಿದ್ದ ಶಿಗೆಕೊ ಕಗಾವಾ ಅವರು ತಮ್ಮ ಮನಸ್ಸನ್ನು ಚುರುಕಾಗಿಡಲು ಭೂತಗನ್ನಡಿಯನ್ನು ಬಳಸಿ ಪ್ರತಿ ದಿನ ಪತ್ರಿಕೆ ಓದುತ್ತಿದ್ದರು.

ಆರೋಗ್ಯವಾಗಿರಲು ಕಗಾವಾ ವಿಶೇಷವಾಗಿ ಏನೂ ಮಾಡುತ್ತಿರಲಿಲ್ಲ. ಅವರು ನಿಗದಿತ ದಿನಚರಿಯನ್ನು ಅನುಸರಿಸುತ್ತಿದ್ದರು. ಸರಿಯಾದ ಸಮಯದಲ್ಲಿ ದಿನಕ್ಕೆ ಮೂರು ಸಣ್ಣ ಪ್ರಮಾಣದಲ್ಲಿ ಊಟ ಮಾಡುತ್ತಿದ್ದರು. ದೇಹದ ವಿಶ್ರಾಂತಿಗೂ ನಿಗದಿತ ಸಮಯವನ್ನು ಇಷ್ಟಪಡುತ್ತಿದ್ದರು ಎನ್ನುತ್ತಾರೆ ಅವರ ಕುಟುಂಬಸ್ಥರು.

ತಾನು ವೈದ್ಯೆಯಾಗಿದ್ದಾಗ ಈಗಿನಂತೆ ಕಾರುಗಳು ಇರಲಿಲ್ಲ. ಹೀಗಾಗಿ ರೋಗಿಗಳನ್ನು ನೋಡಲು ಹೆಚ್ಚಿನ ನಡಿಗೆಯನ್ನು ಮಾಡುತ್ತಿದ್ದೆ. ಬಹಳಷ್ಟು ನಡೆಯುತ್ತಿದ್ದುದರಿಂದ ನಾನು ಹೆಚ್ಚು ಬಲಶಾಲಿ ಮತ್ತು ಆರೋಗ್ಯವಾಗಿದ್ದೇನೆ ಎಂದು ಕಗಾವಾ ಅವರು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: Cyber Crime: ಕಾಲ್‌ ಗರ್ಲ್‌ ಎಂದು ಬೆಂಗಳೂರಿನ ಟಿಕ್ಕಿಗೆ ಆಮಿಷ; ಲಕ್ಷಾಂತರ ರೂ. ಪಂಗನಾಮ ಹಾಕಿ ಮಾಯ

ನನ್ನ ಶಕ್ತಿಯೇ ನನ್ನ ದೊಡ್ಡ ಆಸ್ತಿ ಎನ್ನುತ್ತಿದ್ದ ಕಗಾವಾ ಪ್ರತಿದಿನ ಆಡಲು ಸಮಯ ಮೀಸಲು ಇಡುತ್ತಿದ್ದರು. ಇಷ್ಟವಾದ ಸ್ಥಳಕ್ಕೆ ಹೂಗುವುದು, ಬೇಕಾದುದನ್ನು ತಿನ್ನುವುದು, ಮಾಡುವುದು ಅವರಿಗೆ ಖುಷಿ ಕೊಡುತ್ತಿತ್ತು. ನಮಗೆ ಬೇಕಿರುವುದು ಸ್ವತಂತ್ರ ಎನ್ನುತ್ತಿದ್ದರು ಅವರು. ಕಗಾವಾ ಅವರ ಜೀವನ ಜಪಾನಿನ ಹಿರಿಯ ನಾಗರಿಕ ಮಿಯೋಕೊ ಹಿರೋಯಾಸು ಅವರ ಕಥೆಯನ್ನು ಹೋಲುತ್ತದೆ. ಶಿಕ್ಷಕಿ ಮತ್ತು ಕಲಾವಿದೆಯಾಗಿದ್ದ ಮೀಯೊಕೊ ತಮ್ಮ ವೃದ್ದಾಪ್ಯದಲ್ಲಿ ಓದುವುದು, ಚಿತ್ರ ಬರೆಯುವುದು, ಕಾರ್ಡ್‌ಗಳನ್ನು ಆಡುತ್ತಾ ದಿನ ಕಳೆಯುತ್ತಿದ್ದರು.