ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಿಸ್ ವರ್ಲ್ಡ್ 2026 ಕಿರೀಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್‌ನ ಜೋಹೆರಿ ಮೊಲಾ

Joheirry Mola: ಡೊಮಿನಿಕನ್ ಗಣರಾಜ್ಯದ ಜೋಹೆರಿ ಮೋಲಾ ಡೊಮಿಂಗ್ಯೂಜ್ 73 ನೇ ವಿಶ್ವ ಸುಂದರಿ 2026 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪೇನ್‌ನ ಎಲಿಸಬೆತ್ ರೇನೆಸ್ ಅವರನ್ನು ಮೊದಲ ರನ್ನರ್ ಅಪ್ ಆಗಿ ಮತ್ತು ಮಲೇಷ್ಯಾದ ತನುಸಿಯಾ ಚೆಟ್ಟಿ ಅವರನ್ನು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಮಿಸ್ ವರ್ಲ್ಡ್ 2026 ಕಿರೀಟ ಮುಡಿಗೇರಿಸಿಕೊಂಡ ಜೋಹೆರಿ ಮೊಲಾ

ಡೊಮಿನಿಕನ್ ರಿಪಬ್ಲಿಕ್‌ನ ಜೋಹೆರಿ ಮೊಲಾ -

Vishakha Bhat Heggar
Vishakha Bhat Heggar Sep 6, 2026 9:26 AM

ಟ್ರಂಗ್: ಡೊಮಿನಿಕನ್ ಗಣರಾಜ್ಯದ ಜೋಹೆರಿ ಮೋಲಾ ಡೊಮಿಂಗ್ಯೂಜ್ (Joheirry Mola) 73 ನೇ ವಿಶ್ವ ಸುಂದರಿ (Miss World 2026) 2026 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪೇನ್‌ನ ಎಲಿಸಬೆತ್ ರೇನೆಸ್ ಅವರನ್ನು ಮೊದಲ ರನ್ನರ್ ಅಪ್ ಆಗಿ ಮತ್ತು ಮಲೇಷ್ಯಾದ ತನುಸಿಯಾ ಚೆಟ್ಟಿ ಅವರನ್ನು ಎರಡನೇ ರನ್ನರ್ ಅಪ್ ಆಗಿದ್ದಾರೆ. ಸೆಪ್ಟೆಂಬರ್ 5ರಂದು ವಿಯೆಟ್ನಾಂನಲ್ಲಿ ಫೈನಲ್‌ ಕಾರ್ಯಕ್ರಮ ನಡೆದಿತ್ತು.

ವಿಯೆಟ್ನಾಮ್‌ನ ನಾ ಟ್ರಂಗ್ ನಗರದಲ್ಲಿ ಶನಿವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಿಂದಿನ ಮಿಸ್ ವರ್ಲ್ಡ್ ವಿಜೇತೆ ಥಾಯ್ಲೆಂಡ್‌ನ ಓಪಲ್ ಸುಚಾತ ಚುವಾಂಗ್‌ಶ್ರೀ ಅವರು ಜೋಹೆರಿ ಮೊಲಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ತೊಡಿಸಿ ಗೌರವಿಸಿದರು. ಡೊಮಿನಿಕನ್ ರಿಪಬ್ಲಿಕ್ ದೇಶಕ್ಕೆ ಈ ಕಿರೀಟ ಒಲಿದಿರುವುದು ಇದು ಎರಡನೇ ಬಾರಿಯಾಗಿದ್ದು, ಇದಕ್ಕೂ ಮುನ್ನ 1982 ರಲ್ಲಿ ಮರಿಯಾಸೆಲಾ ಅಲ್ವಾರೆಜ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಅಂತಿಮ ಟಾಪ್ 6 ಹಂತಕ್ಕೆ ಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ವಿಯೆಟ್ನಾಮ್, ಎರಿಟ್ರಿಯಾ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಭಾರತದ ನಿಖಿತಾ ಪೊರ್ವಾಲ್‌ಗೆ ನಿರಾಸೆ

ಈ ಬಾರಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫೆಮಿನಾ ಮಿಸ್ ಇಂಡಿಯಾ ವಿಜೇತೆ, ಮಧ್ಯಪ್ರದೇಶದ ಉಜ್ಜಯಿನಿಯ ನಿಖಿತಾ ಪೊರ್ವಾಲ್ (Nikita Porwal) ಅವರ ಪಯಣ ಟಾಪ್ 40 ಹಂತಕ್ಕೆ ಮುಕ್ತಾಯಗೊಂಡಿತು. ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನಿಖಿತಾ ಪೊರ್ವಾಲ್ ಅವರು ಸಾಂಪ್ರದಾಯಿಕ ಭಾರತೀಯ ಶೈಲಿಯ ಕೈಯಿಂದ ಕಸೂತಿ ಮಾಡಿದ ಅದ್ಭುತವಾದ ಗುಲಾಬಿ ಬಣ್ಣದ ಗೌನ್ ಧರಿಸಿ ಜಾಗತಿಕ ವೇದಿಕೆಯಲ್ಲಿ ಭಾರತದ ಹಿರಿಮೆಯನ್ನು ಪ್ರದರ್ಶಿಸಿದರು.

ಜೊತೆಗೆ ಆತಿಥೇಯ ದೇಶವಾದ ವಿಯೆಟ್ನಾಮ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅಲ್ಲಿನ ಸಾಂಪ್ರದಾಯಿಕ 'Ao Dai' ಉಡುಪನ್ನು ಧರಿಸಿ ಸಾಂಸ್ಕೃತಿಕ ವಿನಿಮಯದ ಸಂದೇಶ ಸಾರಿದರು. ಸ್ಪರ್ಧೆಯ ಭಾಗವಾಗಿ ಅವರು ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಸುಧಾರಣೆಗಾಗಿ ಹಮ್ಮಿಕೊಂಡಿರುವ ತಮ್ಮ ಸಾಮಾಜಿಕ ಕಾರ್ಯದ 'ಪ್ರಾಜೆಕ್ಟ್ ಮಾಟಿ' (Project MAATI) ಅನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದರು.