ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೀಕರ ದುರಂತ: ಏರ್‌ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ 8 ಪ್ರವಾಸಿಗರು ಸಜೀವ ದಹನ; ವಿಡಿಯೊ ವೈರಲ್‌

Viral News: ದಕ್ಷಿಣ ಬ್ರೆಜಿಲ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಏರ್‌ ಬಲೂನ್ ಹಾರಾಟದ ಮಧ್ಯೆಯೇ ಆಕಾಶದಲ್ಲಿ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಲ್ಲಿ ಎಂಟು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ವಿಡಿಯೊ ಸದ್ಯ ವೈರಲ್‌ ಆಗಿದೆ.

ಬ್ರೆಜಿಲ್‌ನಲ್ಲಿ ಏರ್ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಮಂದಿ ಸಾವು

ಬ್ರೆಜಿಲ್‌ನಲ್ಲಿ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೃತಪಟ್ಟ ಎಂಟು ಪ್ರವಾಸಿಗರು -

Profile
Pushpa Kumari Jun 23, 2026 9:19 PM

ಬ್ರೆಸಿಲಿಯಾ, ಜೂ. 23: ಇತ್ತೀಚೆಗೆ ಪ್ರವಾಸಿ ಸ್ಥಳಗಳಿಗೆ ಮೋಜು- ಮಸ್ತಿ ಮಾಡಲು ಹೋಗುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೋಟ್ ದುರಂತ, ವಿಮಾನ ಅಪಘಾತ ಹೀಗೆ ಅನೇಕ ದುರಂತಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ದಕ್ಷಿಣ ಬ್ರೆಜಿಲ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೃಹತ್‌ ಏರ್‌ ಬಲೂನ್ ಹಾರಾಟದ ಮಧ್ಯೆಯೇ ಆಕಾಶದಲ್ಲಿ ಭೀಕರ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಲ್ಲಿ (Viral News) ಎಂಟು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ ಘಟನೆ ನಡೆದಾಗ 21 ಜನರು ಈ ಬಲೂನ್‌ನಲ್ಲಿದ್ದರು. ಪೈಲಟ್ ಸೇರಿ ಹದಿಮೂರು ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬದುಕುಳಿದವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

ವಿಡಿಯೊ ನೋಡಿ:



ಹಾರಾಟದ ಮಧ್ಯೆಯೇ ಬಲೂನ್ ಆಕಾಶದಲ್ಲಿ ಭೀಕರವಾಗಿ ಹೊತ್ತಿ ಉರಿದು ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಬಲೂನ್ ಸವಾರಿ ಮತ್ತು ಕಣಿವೆಯ ಸುಂದರ ತಾಣಗಳಿಗೆ ಹೆಸರು ವಾಸಿಯಾದ ಸಾಂಟಾಕ್ಯಾಟ ರೀನಾ ರಾಜ್ಯದ ಜನಪ್ರಿಯ ಪ್ರವಾಸಿ ತಾಣ ಪ್ರಿಯಾ ಗ್ರಾಂಡೆ ಬಳಿ ಈ ಅಪಘಾತ ಸಂಭವಿಸಿದೆ. ಬಲೂನ್ ಅಂದಾಜು 1,000 ಮೀಟರ್ ಎತ್ತರದಲ್ಲಿದ್ದಾಗ ಪ್ರವಾಸಿಗರು ಕುಳಿತುಕೊಳ್ಳುವ ಬುಟ್ಟಿಯ ಒಳಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ನೋಯ್ಡಾದ ಅಪಾರ್ಟ್‌ಮೆಂಟ್ ಸ್ವಿಮ್ಮಿಂಗ್‌ ಪೂಲ್ ಬಳಿ ಪ್ರವಾಸಿಗರಿಂದ ಗಾಂಜಾ ಸೇವನೆ

ಬೆಂಕಿಗೆ ಕಾರಣವೇನು ಮತ್ತು ಎಲ್ಲ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂದು ನಿರ್ಧರಿಸಲು ಬ್ರೆಜಿಲ್‌ನ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ತನಿಖೆಯನ್ನು ಪ್ರಾರಂಭಿಸಿದೆ. ​ಬೆಂಕಿ ವ್ಯಾಪಿಸುತ್ತಿದ್ದಂತೆ ಅನುಭವಿ ಪೈಲಟ್, ಬಲೂನ್ ಅನ್ನು ತಕ್ಷಣವೇ ಕೆಳಕ್ಕೆ ಇಳಿಸಲು ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಬಲೂನ್ ನೆಲದ ಸಮೀಪಕ್ಕೆ ಬರುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳಲು ಪ್ರಯಾಣಿಕರಿಗೆ ಕೆಳಗೆ ಇಳಿಯಲು ಸೂಚಿಸಿದ್ದಾರೆ.

ಕೆಲವರು ಕೆಳಗೆ ಜಿಗಿಯುತ್ತಿದ್ದಂತೆ ಬಲೂನ್‌ನ ತೂಕ ತೀರಾ ಕಡಿಮೆಯಾಗಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಬಲೂನ್ ಮತ್ತೆ ವೇಗವಾಗಿ ಆಕಾಶದತ್ತ ಮುನ್ನುಗ್ಗಿದೆ. ಅಂತಿಮವಾಗಿ ತೂಕ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.