ವಿದಾಯದೊಂದಿಗೆ ಸ್ವಾಗತ...ಗಮನ ಸೆಳೆದ ಹೊಸ ವರ್ಷದ ಮುನ್ನಾ ದಿನದ ಗೂಗಲ್ ಡೂಡಲ್; ಏನಿದರ ವಿಶೇಷತೆ ?
ಪ್ರತಿ ವರ್ಷದಂತೆ ಮತ್ತೆ ಈ ಬಾರಿ ಹೊಸ ವರ್ಷ ಬಂದಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಎಂದಿನಂತೆ ವಿಶೇಷ ಸಂದರ್ಭಗಳಲ್ಲಿ ಗೂಗಲ್ ಡೂಡಲ್ ಎಲ್ಲರ ಗಮನ ಸೆಳೆಯುತ್ತದೆ. ಅಂತಯೇ ಈ ಬಾರಿಯೂ ಅದು ಒಂದು ದಿನ ಮುಂಚಿತವಾಗಿಯೇ ಹೊಸ ವರ್ಷದ ಡೂಡಲ್ ಅನ್ನು ಹಂಚಿಕೊಂಡಿದೆ. ಹೊಸ ವರ್ಷ ಡಿಸೆಂಬರ್ 31ರ ಮಧ್ಯರಾತ್ರಿ ಆರಂಭವಾಗುತ್ತದೆ. ಆದರೆ ಇದಕ್ಕೂ ಮೊದಲೇ ಗೂಗಲ್ ಡೂಡಲ್ ಅನ್ನು ಹಂಚಿಕೊಂಡಿದೆ. ಇದು ಸಮಯ ವೇಗವಾಗಿ ಚಲಿಸುತ್ತದೆ ಮತ್ತು ಹೊಸ ವರ್ಷ ಹತ್ತಿರದಲ್ಲಿದೆ ಎಂಬುದನ್ನು ಹೇಳುತ್ತದೆ.
(ಸಂಗ್ರಹ ಚಿತ್ರ) -
ನವದೆಹಲಿ: ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ (Google Doodle) ಮೂಲಕ ಗಮನ ಸೆಳೆಯುವ ಗೂಗಲ್ (google) ಈ ಬಾರಿಯೂ ಹೊಸ ವರ್ಷದ ವಿಶೇಷತೆಯನ್ನು ಡೂಡಲ್ (doodle) ಮೂಲಕ ತೋರಿಸಿದೆ. ಈ ಬಾರಿ ಗೂಗಲ್ 2026ರ ಹೊಸ ವರ್ಷವನ್ನು (new year) ಸ್ವಾಗತಿಸುವ ಡೂಡಲ್ ಅನ್ನು ಒಂದು ದಿನ ಮೊದಲೇ ಹಂಚಿಕೊಂಡಿದೆ. 2025ರ ಕೊನೆಯ ದಿನವನ್ನು ಗೂಗಲ್ ನ್ಯೂ ಇಯರ್ ಈವ್ ಡೂಡಲ್ ಮೂಲಕ ಸಂಭ್ರಮಿಸಿದೆ. ಇದರ ಅರ್ಥ ಮತ್ತು ವಿಶಿಷ್ಟಗಳ ವಿವರಗಳನ್ನು ಇದರೊಂದಿಗೆ ಅದು ಹಂಚಿಕೊಂಡಿದೆ.
ಪ್ರತಿ ವರ್ಷದಂತೆ ಸಮಯ ವೇಗವಾಗಿ ಚಲಿಸುತ್ತಿದೆ ಎಂಬುದನ್ನು ನೆನಪಿಸಿರುವ ಗೂಗಲ್, ಹೊಸ ವರ್ಷದ ಮುನ್ನಾದಿನ ಡೂಡಲ್ ನಲ್ಲಿ ಅದನ್ನು ಗುರುತಿಸಿದೆ. 2025 ನೇ ವರ್ಷದ ಕೊನೆಯ ಗಂಟೆಗಳನ್ನು ಎಣಿಸಿ 2026 ಅನ್ನು ಸ್ವಾಗತಿಸಲು ಜನರು ಸಿದ್ಧವಾಗುತ್ತಿದ್ದಂತೆ ಇದು ಪ್ರಪಂಚದಾದ್ಯಂತ ಅನುಭವಿಸುವ ಸಂತೋಷ ಮತ್ತು ಶಕ್ತಿಯನ್ನು ವರ್ಣಿಸಿದೆ.
VHT 2025-26: ನ್ಯೂಜಿಲೆಂಡ್ ಏಕದಿನ ಸರಣಿಗೂ ಮುನ್ನ ಭರ್ಜರಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್!
ಹೊಸ ವರ್ಷದ ಗೂಗಲ್ ಡೂಡಲ್ ನಲ್ಲಿ ಬಣ್ಣದ ಪಟಾಕಿ ಇದ್ದು, ಇದು ಹೊಸವರ್ಷವನ್ನು ವಿಶ್ವದ ಕೋಟ್ಯಂತರ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲು ಒಗ್ಗೂಡುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
2026 ರ ಆರಂಭವನ್ನು ಗೂಗಲ್ ಸ್ವಾಗತಿಸುತ್ತಿರುವಂತೆ ಡೂಡಲ್ ವಿನ್ಯಾಸದಲ್ಲಿ ಬಲೂನು, ಮಿಂಚು ಅಲಂಕಾರಗಳನ್ನು ಕಾಣಬಹುದು. ಇದು ಮಧ್ಯರಾತ್ರಿಯ ಆಚರಣೆಯನ್ನು ನೆನಪಿಸುತ್ತದೆ. ಗೂಗಲ್ ಲೋಗೋವನ್ನು ಹೊಳೆಯುವ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ. ಮಧ್ಯೆ ಹೊಳೆಯುವ ಬೆಳ್ಳಿಯ ಬಣ್ಣದಲ್ಲಿ 2026 ಅನ್ನು ಬರೆಯಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ 2026 ಎಂದು ಬದಲಾಗುತ್ತವೆ.
ಹೊಸ ವರ್ಷದ ಮುನ್ನಾದಿನವೇ ಹಂಚಿಕೊಂಡಿರುವ ಗೂಗಲ್ ಡೂಡಲ್ ಬದಲಾವಣೆ ಮತ್ತು ಹೊಸ ಆರಂಭಗಳನ್ನು ಸೂಚಿಸುತ್ತದೆ. ಅನೇಕರಿಗೆ ಇದು ಹಿಂತಿರುಗಿ ನೋಡಲು, ತಪ್ಪುಗಳಿಂದ ಕಲಿಯಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಹಾರೈಸಲು ಶುಭ ಕ್ಷಣವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಆಚರಣೆ ವಿಶೇಷ
ಈ ದಿನ ಜಗತ್ತು ಒಂದಾಗುತ್ತದೆ. ಅನೇಕ ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹಲವು ವಿಶಿಷ್ಟ ರೀತಿಯ ಆಚರಣೆಗಳನ್ನು ಮಾಡುತ್ತಾರೆ. ಸ್ಪೇನ್ ನಲ್ಲಿ ಮಧ್ಯರಾತ್ರಿ ಜನರು 12 ದ್ರಾಕ್ಷಿಯನ್ನು ತಿನ್ನುತ್ತಾರೆ. ಪ್ರತಿ ದ್ರಾಕ್ಷಿಯು ಮುಂಬರುವ ವರ್ಷದ ಪ್ರತಿ ತಿಂಗಳಿಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ. ದ್ರಾಕ್ಷಿಯನ್ನು ಕಳೆದುಕೊಳ್ಳುವುದು ದುರದೃಷ್ಟವನ್ನು ಆಹ್ವಾನಿಸುತ್ತದೆ ಎನ್ನಲಾಗುತ್ತದೆ.
ಜರ್ಮನಿಯಲ್ಲಿ ಹೊಸ ವರ್ಷದ ಮುನ್ನಾದಿನ ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಹೀಗೆಯೇ ನೆದರ್ ಲ್ಯಾಂಡ್ ನಲ್ಲಿ ಜನರು ಹುರಿದ ಹಿಟ್ಟಿನ ಉಂಡೆ ಮಾಡಿ ತಿನ್ನುತ್ತಾರೆ. ಎಸ್ಟೋನಿಯಾ ಜನರು ಹೊಸ ವರ್ಷದ ಮುನ್ನಾದಿನ ಏಳು, ಒಂಬತ್ತು ಅಥವಾ ಹನ್ನೆರಡು ಊಟಗಳನ್ನು ಸವಿಯುತ್ತಾರೆ.
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ 2 ವರ್ಷ; ಇದು ನಂಬಿಕೆ, ಪರಂಪರೆಯ ಹಬ್ಬ ಎಂದ ಪ್ರಧಾನಿ ಮೋದಿ
ಸಾಂಸ್ಕೃತಿಕ ವಿಶೇಷತೆ
ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಈ ದಿನ ರಾತ್ರಿ ಚರ್ಚ್ ಗಳಲ್ಲಿ ವಿಶೇಷ ಆಚರಣೆ ನಡೆಸಿ ದೇವರಿಗೆ ಧನ್ಯವಾದ ಹೇಳಲಾಗುತ್ತದೆ. ಜಪಾನ್ ನ ಬೌದ್ಧ ದೇವಾಲಯಗಳಲ್ಲಿ ಮಧ್ಯರಾತ್ರಿ ಗಂಟೆಗಳನ್ನು ಭರಿಸಲಾಗುತ್ತದೆ. ಡೆನ್ಮಾರ್ಕ್ ನಲ್ಲಿ ಹಳೆಯ ತಟ್ಟೆಗಳನ್ನು ಮನೆ ಬಾಗಿಲಲ್ಲಿ ಒಡೆದು ಸಂಭ್ರಮಿಸುತ್ತಾರೆ. ಇದು ಹೊಸ ವರ್ಷ ಹೆಚ್ಚು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯಾಗಿದೆ. ಇಟಲಿಯಲ್ಲಿ ವೃದ್ಧನನ್ನು ಸುಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಇದು ಮುಂದಿನ ಒಳ್ಳೆಯ ದಿನಗಳಿಗೆ ಬಾಗಿಲು ತೆರೆಯುವುದು ಎನ್ನುವ ನಂಬಿಕೆಯಾಗಿದೆ.
ಹೊಸ ವರ್ಷಾಚರಣೆ ಇಂದು ನಿನ್ನೆ ಪ್ರಾರಂಭವಾಗಿದ್ದಲ್ಲ. ಸುಮಾರು 4000 ವರ್ಷಗಳ ಹಿಂದೆ ಇದನ್ನು ಆರಂಭಿಸಲಾಗಿದೆ. ಇದನ್ನು ಮೊದಲು ಪ್ರಾಚೀನ ಬ್ಯಾಬಿಲೋನಿಯನ್ನರು ಆಚರಿಸಿದರು.