ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahavur Rana: 26/11 ಮುಂಬೈ ದಾಳಿಯ ಸಂಚು- ತಹವ್ವೂರ್ ರಾಣಾ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ

Tahavur Rana: ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿರುವ 26/11 ಮುಂಬೈ ದಾಳಿಗೆ ಸಂಚು ರೂಪಿಸಿದ್ದವರಲ್ಲಿ ಒಬ್ಬನಾದ ತಹವ್ವೂರ್ ರಾಣಾನನ್ನು ಭಾರತಕ್ಕೆ ಒಪ್ಪಿಸದಂತೆ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಶೀಘ್ರದಲ್ಲೇ ಎಫ್‌ಬಿಐ ತಹವ್ವೂರ್ ರಾಣಾನನ್ನು ಎನ್‌ಐಎಗೆ ಹಸ್ತಾಂತರಿಸಲಿದೆ.

ಮುಂಬೈ ದಾಳಿಯ ಸಂಚುಕೋರ ರಾಣಾನಿಗೆ ಭಾರೀ ಹಿನ್ನಡೆ

ನವದೆಹಲಿ: ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿರುವ 26/11 ಮುಂಬೈ ದಾಳಿಗೆ (Mumbai Attacks) ಸಂಚು ರೂಪಿಸಿದ್ದವರಲ್ಲಿ ಒಬ್ಬನಾದ ತಹವ್ವೂರ್ ರಾಣಾನನ್ನು (Tahawwur Rana) ಭಾರತಕ್ಕೆ ಒಪ್ಪಿಸದಂತೆ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ (US Supreme Court) ತಿರಸ್ಕರಿಸಿದೆ. ಹೀಗಾಗಿ ಶೀಘ್ರದಲ್ಲೇ ಎಫ್‌ಬಿಐ (FBI) ತಹವ್ವೂರ್ ರಾಣಾನನ್ನು ಎನ್‌ಐಎಗೆ ಹಸ್ತಾಂತರಿಸಲಿದೆ. ಅಮೆರಿಕ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಸೋಮವಾರ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ವಿಚಾರಣೆಗಾಗಿ ರಾಣಾನನ್ನು ಭಾರತಕ್ಕೆ ಕರೆತರಲು ತಮ್ಮ ತಂಡ ಯಾವಾಗ ಅಮೆರಿಕಕ್ಕೆ ಪ್ರಯಾಣಿಸಬಹುದು ಎಂಬುದನ್ನು ಅಮೆರಿಕ ಅಧಿಕಾರಿಗಳು ಶೀಘ್ರದಲ್ಲೇ ತಿಳಿಸುತ್ತಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಲೆನಾ ಕಗನ್ ಅವರು ಮಾರ್ಚ್ 6 ರಂದು ತಮ್ಮ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ ಅನಂತರ ರಾಣಾ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್ ಜೂನಿಯರ್ ಅವರಿಗೆ ತಮ್ಮ ಮನವಿ ಸಲ್ಲಿಸಿದ್ದರು.

ತಾನು ಪಾಕಿಸ್ತಾನ ಮೂಲದ ಮುಸ್ಲಿಂ ಮತ್ತು ಮಾಜಿ ಸೇನಾ ಅಧಿಕಾರಿಯಾಗಿದ್ದು, ಭಾರತದಲ್ಲಿ ತನಗೆ ಚಿತ್ರಹಿಂಸೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ರಾಣಾ, ಯುಕೆ ಹೈಕೋರ್ಟ್ ಇತ್ತೀಚೆಗೆ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಿರಸ್ಕರಿಸಿತ್ತು. ಇದನ್ನು ಉಲ್ಲೇಖಿಸಿರುವ ರಾಣಾ, ನಾನು ಭಾರತದಲ್ಲಿ "ಚಿತ್ರಹಿಂಸೆ" ಎದುರಿಸಬೇಕಾಗಬಹುದು ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾನೆ.

ಭಾರತಕ್ಕೆ ರಾಣಾ ಹಸ್ತಾಂತರಕ್ಕೆ ತಡೆ ಕೋರಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 21 ರಂದು ಯುಎಸ್ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದಾಗ ಡೊನಾಲ್ಡ್ ಟ್ರಂಪ್ ಆಡಳಿತವು ಎನ್‌ಐಎಗೆ ರಾಣಾನನ್ನು ಒಪ್ಪಿಸಲು ಅನುಮೋದನೆಯನ್ನು ನೀಡಿತ್ತು.

ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿರುವ ರಾಣಾನನ್ನು ಅಮೆರಿಕ ಮತ್ತು ಭಾರತದ ಅಧಿಕಾರಿಗಳು ನಿರ್ಧರಿಸುವ ದಿನದಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎನ್‌ಐಎಗೆ ಹಸ್ತಾಂತರಿಸಲಿದೆ. 2008ರ ನವೆಂಬರ್ 26 ಮತ್ತು 29ರ ನಡುವೆ ಅರೇಬಿಯನ್ ಸಮುದ್ರದ ಮೂಲಕ ಮುಂಬೈಗೆ ಆಗಮಿಸಿದ 10 ಶಸ್ತ್ರಸಜ್ಜಿತ ಲಷ್ಕರ್-ಎ-ತೈಬಾದ ಸದಸ್ಯರು ನಗರದಲ್ಲಿ ಸುಮಾರು 60 ಗಂಟೆಗಳ ಕಾಲ ಒತ್ತೆಯಾಳಾಗಿಟ್ಟುಕೊಂಡ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು.

ಈ ಘಟನೆಯಲ್ಲಿ ಸೆರೆಹಿಡಿಯಲಾದ ಭಯೋತ್ಪಾದಕ ಅಜ್ಮಲ್ ಕಸಬ್‌ನ ವಿಚಾರಣೆಯಿಂದ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಇದರಲ್ಲಿ ನೇರವಾಗಿ ಭಾಗಿಯಾಗಿರುವುದು ಬಹಿರಂಗವಾಯಿತುಮತ್ತು ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಜೊತೆಗೆ ಅದರ ಮೂವರು ಮಿಲಿಟರಿ ಅಧಿಕಾರಿಗಳು ಈ ಸಂಚು ರೂಪಿಸಿದ್ದರು ಎನ್ನುವುದು ತಿಳಿದುಬಂದಿತ್ತು.

ಇದನ್ನೂ ಓದಿ: Smart Phone Addiction: ನಿಮ್ಮ ಮಕ್ಕಳು ಮೊಬೈಲ್​ ಫೋನ್‌ಗೆ ಅಡಿಕ್ಟ್​ ಆಗಿದ್ದಾರಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಮುಂಬೈ ದಾಳಿಯಲ್ಲಿ ರಾಣಾನ ಬಾಲ್ಯದ ಸ್ನೇಹಿತ, ಅಮೆರಿಕದ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಕೂಡ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ 2009ರಲ್ಲಿ ಎಫ್‌ಬಿಐ ಆತನನ್ನು ಬಂಧಿಸಿತು. ಪ್ರಸ್ತುತ ಆತ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಭಾರತೀಯ ಸಂಸ್ಥೆಗಳು ರಾಣಾನನ್ನು ವಿಚಾರಣೆ ನಡೆಸುತ್ತಿರುವುದು ಇದೇ ಮೊದಲು. 2010ರ ಜೂನ್ ನಲ್ಲಿ ಎನ್‌ಐಎ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ವಿಚಾರಣೆ ನಡೆಸಲು ಅಮೆರಿಕಕ್ಕೆ ಹೋಗಿದ್ದಾಗ ರಾಣಾ ಅವರನ್ನು ವಿಚಾರಣೆ ಮಾಡಲಿಲ್ಲ.

ಭಾರತಕ್ಕೆ ರಾಣಾನನ್ನು ಕರೆದುಕೊಂಡು ಬಂದ ಬಳಿಕ ಮುಂಬೈಗೆ ಕರೆದೊಯ್ಯಲಾಗುತ್ತದೆ. ಬಳಿಕ ಆಗ್ರಾ, ಹಾಪುರ್, ಕೊಚ್ಚಿನ್ ಮತ್ತು ಅಹಮದಾಬಾದ್‌ಗೆ ಕರೆದೊಯ್ಯಲಾಗುತ್ತದೆ. ಯಾಕೆಂದರೆ ಮುಂಬೈ ದಾಳಿಗೆ ಮೊದಲು ಅಂದರೆ 2008 ರ ನವೆಂಬರ್ 13 ಮತ್ತು 21 ಆತ ಇಲ್ಲಿಗೆ ಪತ್ನಿಯೊಂದಿಗೆ ಭೇಟಿ ನೀಡಿದ್ದ.

ರಾಣಾ ವಿಚಾರಣೆ ವೇಳೆ ಪಾಕಿಸ್ತಾನದಲ್ಲಿ ನೆಲೆಸಿರುವ ಮುಂಬೈ ದಾಳಿಯ ಸಂಚು ರೂಪಿಸಿದವರು,ಭಯೋತ್ಪಾದಕ ದಾಳಿಗೆ ಹಣಕಾಸು ನೀಡಿದ ಪಾಕಿಸ್ತಾನ ಸೇನೆ ಮತ್ತು ಐಎಸ್ ಐಯಲ್ಲಿರುವವರ ಬಗ್ಗೆ ನಿಖರವಾದ ವಿವರಗಳನ್ನು ಪಡೆಯಲು ಎನ್‌ಐಎ ಅಧಿಕಾರಿಗಳು ಬಯಸುತ್ತಿದ್ದಾರೆ.