ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದಲ್ಲಿ ಹಿಂದೂಗಳೇ ಮೇನ್‌ ಟಾರ್ಗೆಟ್‌; ವ್ಯಾಪಾರಿಯನ್ನು ಕೊಚ್ಚಿ ಕೊಂದ ಧರ್ಮಾಂಧರು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಇದುವರೆಗೂ 10 ಕ್ಕೂ ಹೆಚ್ಚಿನ ಹಿಂದೂಗಳನ್ನು ಇಸ್ಲಾಮಿಕ್‌ ಗುಂಪುಗಳು ಕೊಲೆ ಮಾಡಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ಎರಡು ದಿನ ಇರುವ ಮೊದಲು ಅಪರಿಚಿತ ದಾಳಿಕೋರರು ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.

ಬಾಂಗ್ಲಾದಲ್ಲಿ ಹಿಂದೂಗಳೇ ಮೇನ್‌ ಟಾರ್ಗೆಟ್‌;  ವ್ಯಾಪಾರಿ ಕೊಲೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 10, 2026 5:56 PM

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. (Bangladesh Unrest) ಇದುವರೆಗೂ 10 ಕ್ಕೂ ಹೆಚ್ಚಿನ ಹಿಂದೂಗಳನ್ನು ಇಸ್ಲಾಮಿಕ್‌ ಗುಂಪುಗಳು ಕೊಲೆ ಮಾಡಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ಎರಡು ದಿನ ಇರುವ ಮೊದಲು ಅಪರಿಚಿತ ದಾಳಿಕೋರರು (Hindu Person Murder) ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದೆ. ಬಲಿಯಾದ 62 ವರ್ಷದ ಸುಶೇನ್ ಚಂದ್ರ ಸರ್ಕಾರ್, ದಕ್ಷಿಣಕಂದ ಗ್ರಾಮದ ನಿವಾಸಿಯಾಗಿದ್ದು, ಅಕ್ಕಿ ವ್ಯಾಪಾರಿಯಾಗಿದ್ದರು. ಉಪ ಜಿಲ್ಲೆಯ ಬೋಗರ್ ಬಜಾರ್‌ನ ಛೇದಕದಲ್ಲಿ ಅವರು "ಭಾಯ್ ಭಾಯ್ ಎಂಟರ್‌ಪ್ರೈಸ್" ಅನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ರಾತ್ರಿ 11 ಗಂಟೆಗೆ ಮಾರುಕಟ್ಟೆಯ ಛೇದಕದಲ್ಲಿ ಕೊಲೆ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಸರ್ಕಾರ್ ಅವರನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಅಂಗಡಿಯೊಳಗೆ ಬಿಟ್ಟು ಬಾಗಿಲು ಮುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಕುಟುಂಬವು ಅಂಗಡಿಯಲ್ಲಿ ಹುಡುಕಾಡುತ್ತಿದ್ದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಅವರು ಕಂಡು ಬಂದಿದ್ದಾರೆ. ತ್ರಿಶಾಲ್ ಪೊಲೀಸ್ ಠಾಣಾಧಿಕಾರಿ ಮುಹಮ್ಮದ್ ಫಿರೋಜ್ ಹೊಸೈನ್ ಘಟನೆಯನ್ನು ದೃಢಪಡಿಸಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ

ಬಾಂಗ್ಲಾದಲ್ಲಿ ಉಸ್ಮಾನ್‌ ಹಾದಿ ಸಾವಿನ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಕಳೆದ ಡಿಸೆಂಬರ್‌ನಲ್ಲಿ ದೀಪು ಚಂದ್ರ ದಾಸ್ ಎಂಬಾತನ ಹತ್ಯೆ ಎಂಬುವವನನ್ನು ಕೊಲೆ ಮಾಡಲಾಗಿತ್ತು. ಇದರ ಬಳಿಕ ಬಾಂಗ್ಲಾದಾದ್ಯಂತ ನಡೆದ ಪ್ರತ್ಯೇಕ ದಾಳಿಗಳಲ್ಲಿ, 55 ವರ್ಷದ ಲಿಟನ್ ಚಂದ್ರ ಘೋಷ್ ಎಂಬ ಹಿಂದೂ ಉದ್ಯಮಿಯನ್ನು ಇರಿದು ಬೆಂಕಿ ಹಚ್ಚಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಲಿಟನ್ ಚಂದ್ರಘೋಷ್ ಚಿಕಿತ್ಸೆ ಫಲಿಸದೇ ಹಲವಾರು ದಿನಗಳ ನಂತರ ಸಾವನ್ನಪ್ಪಿದ್ದರು.

ಬಳಿಕ ಸುನಾಮಗಂಜ್ ಜಿಲ್ಲೆಯಲ್ಲಿ ಜಾಯ್ ಮಹಾಪಾತ್ರೋ ಎಂಬ ಹಿಂದೂ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಿ ಆತನಿಗೆ ವಿಷ ಪ್ರಾಶನ ಮಾಡಿ ಹತ್ಯೆಗೈಯ್ಯಲಾಗಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಸಿಲ್ಹೆಟ್ ಎಂಎಜಿ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಹಾಪಾತ್ರೋ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.