ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಇರಾನಿನ 6 ವಾಯು ನೆಲೆಗಳ ಮೇಲೆ ಇಸ್ರೇಲ್‌ ದಾಳಿ; 15 ಯುದ್ಧ ವಿಮಾನಗಳು ಧ್ವಂಸ, ವಿಡಿಯೋ ನೋಡಿ

ಇಸ್ರೇಲ್-ಇರಾನ್ ಸಂಘರ್ಷ (Israel-Iran Conflict) ಮುಂದುವರೆದಿದ್ದು ಇಸ್ರೇಲ್‌ ಇರಾನ್‌ ಮೇಲೆ ಮತ್ತೆ ದಾಳಿಯನ್ನು ಮಾಡಿದೆ. ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್‌ನಾದ್ಯಂತ ಇರುವ ಆರು ಇರಾನಿನ ವಾಯುನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಇರಾನಿನ 6 ವಾಯು ನೆಲೆ ಮೇಲೆ ಇಸ್ರೇಲ್‌ ದಾಳಿ; ಯುದ್ಧ ವಿಮಾನಗಳು ಧ್ವಂಸ

Profile Vishakha Bhat Jun 23, 2025 1:39 PM

ಟೆಹ್ರಾನ್‌: ಇಸ್ರೇಲ್-ಇರಾನ್ ಸಂಘರ್ಷ (Israel-Iran Conflict) ಮುಂದುವರೆದಿದ್ದು ಇಸ್ರೇಲ್‌ ಇರಾನ್‌ ಮೇಲೆ ಮತ್ತೆ ದಾಳಿಯನ್ನು ಮಾಡಿದೆ. ಇಸ್ರೇಲ್ ಇರಾನ್ ನ 6 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್‌ನಾದ್ಯಂತ ಇರುವ ಆರು ಇರಾನಿನ ವಾಯುನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 15 ಯುದ್ಧ ವಿಮಾನಗಳು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಎಫ್ -15 ಮತ್ತು ಎಫ್ -5 ಯುದ್ಧ ವಿಮಾನಗಳು, ಇಂಧನ ತುಂಬುವ ವಿಮಾನ ಮತ್ತು ಎಎಚ್ -1 ಕೋಬ್ರಾ ದಾಳಿ ಹೆಲಿಕಾಪ್ಟರ್ ನಾಶವಾಗಿದೆ ಎಂದು ತಿಳಿದು ಬಂದಿದೆ.

ದಾಳಿ ಕುರಿತು ಇರಾನ್‌ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಐಡಿಎಫ್ "ಹಾನಿಗೊಳಗಾದ ರನ್‌ವೇಗಳು, ಭೂಗತ ಬಂಕರ್‌ಗಳು, ಇಂಧನ ತುಂಬುವ ವಿಮಾನ ಮತ್ತು ಇರಾನ್ ಆಡಳಿತಕ್ಕೆ ಸೇರಿದ ಎಫ್ -14, ಎಫ್ -5 ಮತ್ತು ಎಹೆಚ್ -1 ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಟೆಹ್ರಾನ್‌ನ ಮೆಹ್ರಾಬಾದ್, ಮಶಾದ್ ಮತ್ತು ಡೆಜ್‌ಫುಲ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್‌ -ಇರಾನ್‌ ಯುದ್ಧಕ್ಕೆ ಎಂಟ್ರಿ ಕೊಟ್ಟೇ ಬಿಡ್ತು ಅಮೆರಿಕ; ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ದಾಳಿ

ಪಶ್ಚಿಮ ಇರಾನ್‌ನಲ್ಲಿರುವ ಕೆರ್ಮಾನ್‌ಶಾದಲ್ಲಿನ ಮಿಲಿಟರಿ ಮೂಲಸೌಕರ್ಯದ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವುದಾಗಿ ಇಸ್ರೇಲಿ ಸೇನೆ ಸೋಮವಾರ ಘೋಷಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧವು ಸತತ 11 ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್​ ಮತ್ತು ಇಸ್ರೇಲ್​ ನಡುವಿನ (Iran- Israel War) ಯುದ್ಧಕ್ಕೆ ಎಂಟ್ರಿಯಾದ ಅಮೆರಿಕ (America Entry) ಇರಾನ್​​ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಮೂರು ದೊಡ್ಡ ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್‌ಗಳ ಮೇಲೆ ದಾಳಿ ಮಾಡಿದ ನಂತರ ಉಪಗ್ರಹ ಚಿತ್ರ ರಿಲೀಸ್​ ಆಗಿದೆ. ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ, ವಾಣಿಜ್ಯ ಉಪಗ್ರಹ ಚಿತ್ರ ಬಿಡುಗಡೆ ಮಾಡಿದೆ.