ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಪುಟಿನ್-ಮೋದಿ ದೂರವಾಣಿ ಸಂಭಾಷಣೆ: ಉಕ್ರೇನ್ ಯುದ್ಧದ ಬಗ್ಗೆ ಚರ್ಚೆ, ಶಾಂತಿಗೆ ಕರೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗಿನ ಮಾತುಕಥೆ ಬಳಿಕ ರಷ್ಯಾಗೆ ಮರಳಿದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಸಭೆಯ ಕುರಿತು, ಪುಟಿನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿದ ರಷ್ಯಾ ಅಧ್ಯಕ್ಷ

ಮೋದಿ - ಪುಟಿನ್

Profile Sushmitha Jain Aug 19, 2025 8:14 AM

ನವದೆಹಲಿ: ರಷ್ಯಾದ ಅಧ್ಯಕ್ಷ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಅವರು ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಉಕ್ರೇನ್ ಯುದ್ಧದ (Ukraine war) ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump ) ಜತೆ ಅಲಾಸ್ಕಾದಲ್ಲಿ ನಡೆದ ಸಭೆಯ ಮಾಹಿತಿಯನ್ನು ಹಂಚಿಕೊಂಡರು. ಪುಟಿನ್‌ಗೆ ಧನ್ಯವಾದ ಸೂಚಿಸಿದ ಮೋದಿ, ಉಕ್ರೇನ್ ಸಂಘರ್ಷವನ್ನು ಸಂಧಾನ ಮತ್ತು ಸಂವಾದದ ಮೂಲಕ ಶಾಂತಿಯುತವಾಗಿ ಬಗೆಹರಿಸಬೇಕೆಂಬ ಭಾರತದ ಸ್ಥಿರ ನಿಲುವನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುವುದಾಗಿ ತಿಳಿಸಿದರು.

ದ್ವಿಪಕ್ಷೀಯ ಸಂಬಂಧ

ಇಬ್ಬರು ನಾಯಕರು ಭಾರತ-ರಷ್ಯಾದ ವಿಶೇಷ ಮತ್ತು ವಿಶ್ವಾಸಾರ್ಹ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರದ ಹಲವು ವಿಷಯಗಳನ್ನು ಚರ್ಚಿಸಿದರು. ಕಳೆದ ಎರಡು ವಾರಗಳಲ್ಲಿ ಇದು ಎರಡನೇ ದೂರವಾಣಿ ಸಂಭಾಷಣೆಯಾಗಿದೆ. ಆಗಸ್ಟ್ 8ರಂದು ನಡೆದ ಮೊದಲ ಕರೆಯಲ್ಲಿ, ಪುಟಿನ್ ಉಕ್ರೇನ್‌ನ ಬೆಳವಣಿಗೆಗಳ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿದ್ದರು. ಟ್ರಂಪ್ ರಷ್ಯಾದ ತೈಲ ಖರೀದಿಸುತ್ತಿರುವುದಕ್ಕೆ ಭಾರತಕ್ಕೆ 50% ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಈ ಚರ್ಚೆಯು ಮಹತ್ವ ಪಡೆದಿದೆ.

ಈ ಸುದ್ದಿಯನ್ನು ಓದಿ: Viral Video: ಅಬ್ಬಾ! ಒಂಚೂರು ಭಯ ಇಲ್ಲದೆ ಮೇಲಿಂದ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದ 6ರ ಪೋರ; ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ

ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ

ಚರ್ಚೆಗೂ ಮುನ್ನ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಅಲಾಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ನಡುವಿನ ಶೃಂಗಸಭೆಯನ್ನು ಭಾರತ ಸ್ವಾಗತಿಸುತ್ತದೆ. ಶಾಂತಿಯ ಪರಿಶೋಧನೆಯಲ್ಲಿ ಅವರ ನಾಯಕತ್ವವು ಶ್ಲಾಘನೀಯ. ಸಂವಾದ ಮತ್ತು ಸಂಧಾನವೇ ಮುಂದಿನ ದಾರಿಯಾಗಿದೆ. ಉಕ್ರೇನ್ ಸಂಘರ್ಷವು ಶೀಘ್ರ ಕೊನೆಗೊಳ್ಳಬೇಕೆಂದು ವಿಶ್ವ ಆಗ್ರಹಿಸುತ್ತಿದೆ” ಎಂದು ಹೇಳಿದ್ದರು.

ಪುಟಿನ್-ಟ್ರಂಪ್ ಚರ್ಚೆ
ಶುಕ್ರವಾರ ಅಲಾಸ್ಕಾದಲ್ಲಿ ಪುಟಿನ್ ಮತ್ತು ಟ್ರಂಪ್ ಮೂರು ಗಂಟೆಗಳ ಕಾಲ ಚರ್ಚಿಸಿದರೂ, ಯುದ್ಧ ವಿರಾಮಕ್ಕೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಸಂಘರ್ಷವು ಹಲವಾರು ಸಾವಿರ ಜನರ ಸಾವಿಗೆ ಮತ್ತು ಉಕ್ರೇನ್‌ನಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ. ಟ್ರಂಪ್, ಸೋಮವಾರ ವಾಷಿಂಗ್ಟನ್‌ನಲ್ಲಿ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿಯವರನ್ನು ಯುರೋಪಿಯನ್ ನಾಯಕರ ಜೊತೆ ಭೇಟಿಯಾಗಲಿದ್ದಾರೆ. ಟ್ರಂಪ್, ಜೆಲೆನ್‌ಸ್ಕಿಯವರಿಗೆ ಶಾಂತಿ ಒಪ್ಪಂದವನ್ನು ಸ್ವೀಕರಿಸಲು ಒತ್ತಾಯಿಸಿದ್ದಾರೆ, ಇಲ್ಲವಾದರೆ ಯುದ್ಧ ಮುಂದುವರಿಯಲಿದೆ ಎಂದಿದ್ದಾರೆ. 2014ರಲ್ಲಿ ರಷ್ಯಾ ವಶಪಡಿಸಿಕೊಂಡ ಕ್ರಿಮಿಯಾವನ್ನು ಮರಳಿ ಪಡೆಯುವುದು ಮತ್ತು ಉಕ್ರೇನ್‌ನ ನ್ಯಾಟೋ ಸದಸ್ಯತ್ವವನ್ನು ಟ್ರಂಪ್ ತಿರಸ್ಕರಿಸಿದ್ದಾರೆ.