ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ಪ್ರಧಾನಿ ಜಗತ್ತಿನಲ್ಲೇ ಪ್ರಭಾವಶಾಲಿ ನಾಯಕ: ಮೋದಿಯನ್ನು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

American singer Mary Millben praises Modi: ಅಮೆರಿಕದ ಪ್ರಸಿದ್ಧ ಗಾಯಕಿ ಮೇರಿ ಮಿಲ್ಬೆನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಮತ್ತು ಜಾಗತಿಕ ನಾಯಕತ್ವವನ್ನು ಮೆಚ್ಚಿದ್ದಾರೆ. ಜತೆಗೆ ಅವರನ್ನು ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರೆಂದು ಬಣ್ಣಿಸಿದ್ದಾರೆ. ಅಮೆರಿಕಕ್ಕೆ ಮೋದಿ ಅವರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತದ ಪ್ರಧಾನಿ ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ನಾಯಕ

ಮೇರಿ ಮಿಲ್ಬೆನ್ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Dec 6, 2025 5:05 PM

ವಾಷಿಂಗ್ಟನ್, ಡಿ. 6: ಆಫ್ರಿಕನ್ ಅಮೆರಿಕನ್ ಗಾಯಕಿ ಮತ್ತು ಭಾರತದ ಅಭಿಮಾನಿಯೂ ಆಗಿರುವ ಮೇರಿ ಮಿಲ್ಬೆನ್ (Mary Millben) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು (PM Narendra Modi) ಹಾಡಿ ಹೊಗಳಿದ್ದಾರೆ. ವಿಶ್ವದಲ್ಲೇ, ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ವಾರ ನವದೆಹಲಿಯಲ್ಲಿ ಶೃಂಗಸಭೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರೊಂದಿಗೆ ಮೋದಿ ನಿರ್ವಹಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ. ಭಾರತದ ಬಗ್ಗೆ ಅಮೆರಿಕ ತನ್ನ ಧೋರಣೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಿಲ್ಬೆನ್, ಪ್ರಧಾನಿ ಮೋದಿ-ಪುಟಿನ್ ನಡುವಿನ ಸಂಬಂಧವು ಎರಡೂ ದೇಶಗಳ ನಡುವಿನ ಆಳವಾದ ಮೈತ್ರಿಯನ್ನು ಪ್ರತಿಬಿಂಬಿಸುತ್ತದೆ. ಭಾರತದ ವಿಸ್ತರಿಸುತ್ತಿರುವ ಜಾಗತಿಕ ಪಾತ್ರದ ದೃಷ್ಟಿಕೋನದಲ್ಲಿ ಇದನ್ನು ನೋಡಬೇಕು. ಪ್ರಧಾನ ಮಂತ್ರಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ದೃಷ್ಟಿಕೋನದಿಂದ ಇದು ಅತ್ಯುತ್ತಮ ಸಭೆಯಾಗಿತ್ತು ಎಂದು ಅವರು ಹೇಳಿದರು. ಜತೆಗೆ, ಇದು ನಿಖರವಾಗಿ ಭಾರತ ಮತ್ತು ರಷ್ಯಾ ನಡುವಿನ ಆಳವಾದ ಮೈತ್ರಿಯಾಗಿದೆ. ಅಮೆರಿಕ ಮತ್ತು ಭಾರತ ಹೊಂದಿರುವ ಆಳವಾದ ಸಂಬಂಧ ಮತ್ತು ಮೈತ್ರಿಯಂತೆ ಇದು ಎಂದೂ ಅವರು ಬಣ್ಣಿಸಿದರು.

ಮೇರಿ ಮಿಲ್ಬೆನ್ ಅವರ ಎಕ್ಸ್‌ ಪೋಸ್ಟ್‌:



ಪ್ರಧಾನಿ ಮೋದಿ ಸಭೆಯನ್ನು ವಿಶಿಷ್ಟ ಕಾರ್ಯತಂತ್ರದ ಶಿಸ್ತಿನಿಂದ, ವಿಶೇಷವಾಗಿ ಇಂಧನ ಮತ್ತು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ನಿರ್ವಹಿಸಿದರು ಎಂದು ಮಿಲ್ಬೆನ್ ಹೇಳಿದರು. ಮೋದಿ ತಮ್ಮ ಮಾತುಗಳಲ್ಲಿ ರಾಜತಾಂತ್ರಿಕ ಮತ್ತು ಕಾರ್ಯತಂತ್ರದವರಾಗಿದ್ದರು. ಇದು ಅವರ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರ ನಿಲುವು ಅವರನ್ನು ಇಂದಿನ ಭೌಗೋಳಿಕ ರಾಜಕೀಯ ಲೆಕ್ಕಾಚಾರಗಳ ಕೇಂದ್ರಬಿಂದುವನ್ನಾಗಿ ಮಾಡಿದೆ ಎಂದರು. ಪ್ರಧಾನಿ ಮೋದಿಯು ಇಲ್ಲಿಯವರೆಗೆ, ಭೌಗೋಳಿಕ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ನಾಯಕ. ಅದನ್ನು ನಿರಾಕರಿಸಲಾಗದು ಎಂದು ಅವರು ಬಣ್ಣಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡದೊಂದಿಗೆ ನಿಕಟ ಸಂಬಂಧ ಹೊಂದಿರುವ ಮಿಲ್ಬೆನ್, ಭಾರತದ ಬಗ್ಗೆ ಟ್ರಂಪ್ ಆಡಳಿತದ ಇತ್ತೀಚಿನ ನಿಲುವಿನ ಬಗ್ಗೆ ಟೀಕಿಸಿದರು. ಭಾರತದೊಂದಿಗೆ ವ್ಯಾಪಾರ ಸಂಬಂಧದಲ್ಲಿ ತೆಗೆದುಕೊಂಡ ನಡವಳಿಕೆಯನ್ನು ತುಂಬಾ ಆಕ್ರಮಣಕಾರಿ ಎಂದು ಹೇಳಿದರು.

ಭಾರತ ನಮ್ಮ ಸ್ನೇಹಿತ, ನಮ್ಮ ದೀರ್ಘ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ಪಾಲುದಾರ ಎಂದು ಅವರು ಹೇಳಿದರು. ಸ್ನೇಹಿತರೊಂದಿಗೆ ಉತ್ತಮ ವ್ಯವಹಾರವನ್ನು ಅರ್ಥ ಮಾಡಿಕೊಳ್ಳುವುದು ಉತ್ತಮ. ಆದರೆ ಆಕ್ರಮಣಕಾರಿ ಫಲಿತಾಂಶಗಳು ರಷ್ಯಾ ಮತ್ತು ಚೀನಾದೊಂದಿಗಿನ ಭಾರತದ ರಾಜತಾಂತ್ರಿಕತೆ ಸೇರಿದಂತೆ ಪ್ರಮುಖ ಜಾಗತಿಕ ಶಕ್ತಿಗಳ ನಡುವೆ ತೀವ್ರಗೊಳ್ಳುತ್ತಿರುವ ಕಠಿಣ ನೀತಿ ಎಂದು ಅವರು ಹೇಳಿದರು.

ಅಸ್ಸಾಂ ಚಹಾ, ಭಗವದ್ಗೀತೆ, ಬೆಳ್ಳಿ ಕುದುರೆ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳಿವು

ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಅಧಿಕೃತ ಭೇಟಿಗಾಗಿ ವಾಷಿಂಗ್ಟನ್‌ಗೆ ಆಹ್ವಾನಿಸಬೇಕೆಂದು ಶಿಫಾರಸು ಮಾಡಿದರು. ರಷ್ಯಾದೊಂದಿಗೆ ನಡೆದ ಸಭೆಯನ್ನು ನೋಡಿದ ನಂತರ ತನಗೆ ಮೋದಿಯನ್ನು ಅಮೆರಿಕಕ್ಕೆ ಆಹ್ವಾನಿಸಬೇಕು ಎಂದೆನಿಸುತ್ತದೆ. ಇದರಿಂದ ಭಾರತ-ಅಮೆರಿಕ ಸಂಬಂಧ ಸರಿಹೋಗಬಹುದು ಎಂದು ಹೇಳಿದರು.

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮಿಲ್ಬೆನ್, ಇಬ್ಬರನ್ನೂ ದೀರ್ಘಕಾಲದ ಸ್ನೇಹಿತರು ಎಂದು ಕರೆದರು. ಪ್ರಧಾನಿ ಮೋದಿ ಅವರ ಇತ್ತೀಚಿನ ರಾಜತಾಂತ್ರಿಕತೆಯು ಅವರ ಜಾಗತಿಕ ನಿಲುವನ್ನು ಒತ್ತಿಹೇಳುತ್ತದೆ. ಅವರು ಖಂಡಿತವಾಗಿಯೂ ಎಲ್ಲರನ್ನೂ ಮೀರಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ ಎಂದರು.

ನವದೆಹಲಿಯಲ್ಲಿ ನಡೆದ ಪ್ರಧಾನಿ ಮೋದಿ-ಪುಟಿನ್ ಶೃಂಗಸಭೆಯು ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು. ರಕ್ಷಣೆ, ಇಂಧನ, ಅಂತರಿಕ್ಷ ಮತ್ತು ನ್ಯೂಕ್ಲಿಯರ್ ಸಹಕಾರವನ್ನು ಒಳಗೊಂಡಿರುವ ಈ ತಂತ್ರಜ್ಞಾನ ಸಹಭಾಗಿತ್ವ ದೀರ್ಘಕಾಲದಿಂದ ಮುಂದುವರಿಯುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಪ್ರಾರಂಭದಿಂದ ಭಾರತವು ಮೋಸ್ಕೋ ಮತ್ತು ಕಿವ್ ಎರಡರೊಂದಿಗೆ ಸಂವಾದವನ್ನು ನಿರ್ವಹಿಸುತ್ತಿದೆ.

ಇನ್ನು ಭಾರತೀಯ ಮತ್ತು ಅಮೆರಿಕನ್ ದೇಶದ ನಡುವೆ ಅನೌಪಚಾರಿಕ ಸಾಂಸ್ಕೃತಿಕ ರಾಯಭಾರಿಯಾಗಿ ಹೊರಹೊಮ್ಮಿರುವ ಮಿಲ್ಬೆನ್, ಎರಡೂ ರಾಷ್ಟ್ರಗಳ ಸಂಬಂಧಗಳ ಬೆಂಬಲಿಗರಾಗಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಈ ಹಿಂದೆಯೂ ಹೊಗಳಿದ್ದಾರೆ.