ಅಮೆರಿಕದ ಒಪ್ಪಂದದಿಂದ ಹಿಂದೆ ಸರಿದ ಇರಾನ್; ಮತ್ತೆ ಪೂರ್ಣ ಪ್ರಮಾಣದ ಯುದ್ಧದ ಆತಂಕ
ಕದನ ಮುಕ್ತಾಯ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭುಗಿಲೆದ್ದಿದೆ. ಹೊರ್ಮುಜ್ ಜಲ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ಇರಾನ್ ಈಗ ಅಮೆರಿಕದ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗುವ ಆತಂಕ ಎದುರಾಗಿದೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಹೊರ್ಮುಜ್ ಜಲ ಮಾರ್ಗದ (Strait of Hormuz) ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ಇರಾನ್ (Iran) ಇದೀಗ ಅಮೆರಿಕದ (America) ಯುದ್ಧ ಮುಕ್ತಾಯಗೊಳಿಸುವ ಒಪ್ಪಂದದಿಂದ (War treaty) ಹಿಂದೆ ಸರಿದಿದೆ. ಇದರಿಂದ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗುವ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಎರಡು ರಾಷ್ಟ್ರಗಳ ಸೇನಾ ಪಡೆಯು ದಾಳಿ, ಪ್ರತಿ ದಾಳಿಗಳನ್ನು ನಡೆಸುತ್ತಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗುವ ಆತಂಕ ವಿಶ್ವವನ್ನೇ ಕಾಡುತ್ತಿದೆ.
ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲದ ಐದನೇ ಒಂದು ಭಾಗ ಹಾದುಹೋಗುವ ಹೊರ್ಮುಜ್ ಜಲ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಮತ್ತು ಇರಾನ್ ಪ್ರಯತ್ನಿಸುತ್ತಿದೆ. ಈ ನಡುವೆ ಯುದ್ಧವನ್ನು ನಿಲ್ಲಿಸಲು ಅಮೆರಿಕ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇರಾನ್ ಅದನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್
ಯುಎಸ್ ಸೇನಾ ಪಡೆಯು ಪದೇ ಪದೇ ಇರಾನ್ ಮೇಲೆ ದಾಳಿ ನಡೆಸುತ್ತಿರುವುದರಿಂದ ಅಮೆರಿಕದೊಂದಿಗೆ ಮಾಡಿಕೊಂಡ ತಿಳುವಳಿಕೆ ಒಪ್ಪಂದದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಇರಾನ್ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಇರಾನ್ ವಿದೇಶಾಂಗ ಸಚಿವಾಲಯ, ಟೆಹರಾನ್ ಇನ್ನು ಮುಂದೆ ಒಪ್ಪಂದದ ಭಾಗಗಳನ್ನು ಪೂರೈಸುವ ಬಾಧ್ಯತೆಯನ್ನು ಹೊಂದಿಲ್ಲ ಎಂದು ಪರಿಗಣಿಸುತ್ತದೆ. ಯಾಕೆಂದರೆ ಇರಾನ್ ಬಂದರುಗಳ ಮೇಲೆ ಹೊಸದಾಗಿ ನೌಕಾ ದಿಗ್ಬಂಧನ ವಿಧಿಸಿರುವ ಅಮೆರಿಕ ಒಪ್ಪಂದವನ್ನು ಉಲ್ಲಂಘಿಸಿದ್ದಲ್ಲದೆ ಅದನ್ನು ಸಂಪೂರ್ಣವಾಗಿ ನಾಶ ಮಾಡಿದೆ. ವಿಶೇಷವಾಗಿ
ಹೊರ್ಮುಜ್ ಜಲಮಾರ್ಗದಲ್ಲಿ ಹಾದು ಹೋಗುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಬುಧವಾರ ಮುಂಜಾನೆ ಯುಎಸ್ ಮಿಲಿಟರಿ ಇರಾನಿನ ಬಂದರುಗಳ ಮೇಲೆ ಮತ್ತೆ ದಿಗ್ಬಂಧನವನ್ನು ಹೇರಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ.
ಯುದ್ಧವನ್ನು ಹೆಚ್ಚಿಸಲೆಂದೇ ಮಧ್ಯಂತರ ಒಪ್ಪಂದವಿದ್ದರೂ ಅಮೆರಿಕನ್ ಪಡೆಗಳನ್ನು ಹೊಸ ದಾಳಿಗಳನ್ನು ನಡೆಸಿದೆ. ಅಮೆರಿಕ ಮತ್ತು ಇರಾನಿನ ಪಡೆಗಳ ನಡುವೆ ದಿನಪೂರ್ತಿ ಗುಂಡಿನ ಚಕಮಕಿ ನಡೆದಿದ್ದು, ಇದರಿಂದ ಮತ್ತೆ ಈ ಪ್ರದೇಶದಲ್ಲಿ ಸಂಪೂರ್ಣ ಯುದ್ಧ ಪ್ರಾರಂಭವಾಗುವ ಆತಂಕ ಸೃಷ್ಟಿಯಾಗಿದೆ.
ಇರಾನ್ ಹೇಳಿದ್ದು ಏನು?
ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಅವರು ಇರಾನ್ ಗೆ ಎಷ್ಟೇ ವೆಚ್ಚವಾದರೂ ಪರವಾಗಿಲ್ಲ ಅಡಿ ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಸಂಪೂರ್ಣ ಜಲಸಂಧಿಯನ್ನು ನಿಯಂತ್ರಿಸಬೇಕಿದೆ. ಜಲಸಂಧಿಯ ಮೇಲೆ ಒಮಾನ್ ಗೂ ನಿಯಂತ್ರಣವಿದೆ. ಆದರೆ ಅದು ಮಾಡದೇ ಇದ್ದರೂ ನಾವು ಮಾಡುತ್ತೇವೆ. ಇನ್ನು ಮುಂದೆ ಇರಾನ್ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಮಾತುಕತೆಗಳನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದರು.
ಇರಾನ್ ಗೆ ಟ್ರಂಪ್ ಹೊಸ ಬೆದರಿಕೆ
ಇರಾನ್ ಒಪ್ಪಂದದಿಂದ ಹಿಂದೆ ಸರಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ನಾಗರಿಕ ಮೂಲಸೌಕರ್ಯವನ್ನು ಹೊಡೆದುರುಳಿಸುವುದಾಗಿ ಮತ್ತು ಅದರ ತೈಲ ಮೂಲಸೌಕರ್ಯದೊಂದಿಗೆ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಗಲ್ಫ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಉಪ್ಪುನೀರಿನೀಕರಣ ಸ್ಥಾವರಗಳನ್ನು ಹೊಡೆದು ಉರುಳಿಸುವುದಾಗಿ ಅವರು ಹೇಳಿದರು.