ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕಕ್ಕೆ ಮತ್ತೆ ಮುಖಭಂಗ; ದಿಗ್ಬಂಧನವನ್ನು ಮೀರಿ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ನ 2 ಹಡಗುಗಳು

Iran’s two ships cross Hormuz: ಅಮೆರಿಕದ ಮಿಲಿಟರಿ ದಿಗ್ಬಂಧನದ ಹೊರತಾಗಿಯೂ ಸೋಮವಾರ (ಏಪ್ರಿಲ್‌ 13) ಇರಾನ್‌ನ ಕನಿಷ್ಠ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗಿವೆ. ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲ ರಾಷ್ಟ್ರಗಳ ಹಡಗುಗಳನ್ನು ದಿಗ್ಬಂಧನ ಗುರಿಯಾಗಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.

ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ನ 2 ಹಡಗುಗಳು

ಸಾಂದರ್ಭಿಕ ಚಿತ್ರ -

Priyanka P
Priyanka P Apr 14, 2026 8:23 PM

ಟೆಹರಾನ್, ಏ. 14: ಅಮೆರಿಕದ ಮಿಲಿಟರಿ ದಿಗ್ಬಂಧನದ ಹೊರತಾಗಿಯೂ, ಸೋಮವಾರ (ಏಪ್ರಿಲ್‌ 13) ಕನಿಷ್ಠ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಾದು ಹೋಗಿವೆ. ಲೈಬೀರಿಯಾ (Liberia) ಧ್ವಜ ಹೊತ್ತ ಬೃಹತ್ ವಾಹಕ ನೌಕೆ ಕ್ರಿಸ್ಟಿಯಾನ್ನಾ, ಇರಾನಿನ ಬಂದರ್ ಇಮಾಮ್ ಖೊಮೇನಿಯಲ್ಲಿ ಜೋಳವನ್ನು ಇಳಿಸಿದ ನಂತರ ಜಲಸಂಧಿಯನ್ನು ದಾಟಿ, ಸೋಮವಾರ ಇರಾನ್‌ನ ಲಾರಕ್ ದ್ವೀಪವನ್ನು ದಾಟಿತು. ಅಂದರೆ ಅಮೆರಿಕದ ದಿಗ್ಬಂಧನ ಜಾರಿಗೆ ಬಂದ ಎರಡು ಗಂಟೆಗಳ ನಂತರ ಇದು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಹಡಗು, ಕೊಮೊರೊಸ್ ಧ್ವಜವನ್ನು ಹೊಂದಿರುವ ಟ್ಯಾಂಕರ್ ಎಲ್ಪಿಸ್ ಲಾರಕ್ ದ್ವೀಪದ ಬಳಿ ಕಂಡು ಬಂತು. ಅಲ್ಲದೆ ದಿಗ್ಬಂಧನ ಜಾರಿಗೆ ಬಂದ ನಂತರವೇ ಜಲಸಂಧಿಯನ್ನು ದಾಟಿತು ಎಂದು ದತ್ತಾಂಶವು ತೋರಿಸಿದೆ. ಇದು 31,000 ಟನ್ ಮೆಥನಾಲ್ ಹೊತ್ತುಕೊಂಡು ಮಾರ್ಚ್ 31ರಂದು ಇರಾನಿನ ಬಂದರಿನ ಬುಶೆಹರ್‌ನಿಂದ ಹೊರಟಿತು.

ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ನ ಹಡಗುಗಳು:



ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲ ರಾಷ್ಟ್ರಗಳ ಹಡಗುಗಳನ್ನು ದಿಗ್ಬಂಧನ ಗುರಿಯಾಗಿಸುತ್ತದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿತ್ತು. ಲಾರಾಕ್ ದ್ವೀಪದ ದಕ್ಷಿಣಕ್ಕೆ ಇರಾನಿನ ಅನುಮೋದಿತ ಪರಿಶೀಲನಾ ಮಾರ್ಗದ ಮೂಲಕ ಸೋಮವಾರದಿಂದ ಮಂಗಳವಾರದವರೆಗೆ ರಾತ್ರಿಯಿಡೀ ಚೀನಾದ ಟ್ಯಾಂಕರ್, ರಿಚ್ ಸ್ಟಾರಿ ಕೂಡ ಜಲಸಂಧಿಯನ್ನು ದಾಟಿತು. ಹಡಗು 31,500 ಟನ್ ಮೆಥನಾಲ್ ಸಾಗಿಸುತ್ತಿತ್ತು. ಒಮಾನ್‌ನ ಸೊಹಾರ್‌ಗೆ ಹೋಗುತ್ತಿತ್ತು.

ಜಗತ್ತನ್ನೇ ಇರಾನ್ ಯುದ್ಧ ಭೂಮಿಗೆ ಎಳೆದ ಡೊನಾಲ್ಡ್‌ ಟ್ರಂಪ್? ಅಮೆರಿಕ ಅಧ್ಯಕ್ಷನ ಮುಂದಿನ ನಡೆ ಬಗ್ಗೆ ಹೆಚ್ಚಿದ ಕುತೂಹಲ

ಹೊರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ದಿಗ್ಬಂಧನ

ವಾರಾಂತ್ಯದಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ನಂತರ, ಇರಾನಿನ ಬಂದರು ಮತ್ತು ಕೊಲ್ಲಿಯ ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ಹೊರಡುವ ಹಡಗುಗಳನ್ನು ದಿಗ್ಬಂಧನಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು. ದಿಗ್ಬಂಧನವನ್ನು ಪ್ರಶ್ನಿಸುವ ಯಾವುದೇ ಇರಾನಿನ ಹಡಗುಗಳನ್ನು ನಾಶಪಡಿಸಲಾಗುವುದು ಎಂದು ಎಚ್ಚರಿಸಿದರು.

ಎರಡು ವಾರಗಳ ಮೊದಲೇ ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ, ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಂತೆ ಮಧ್ಯವರ್ತಿ ಪಾಕಿಸ್ತಾನ ಮತ್ತು ಕೊಲ್ಲಿ ರಾಷ್ಟ್ರ ಕತಾರ್ ಅದನ್ನು ಗೌರವಿಸಬೇಕೆಂದು ಕರೆ ನೀಡುತ್ತಲೇ ಇದ್ದರೂ, ದಿಗ್ಬಂಧನ ಜಾರಿಗೆ ಬಂದಿತ್ತು.

ತಕ್ಷಣದಿಂದಲೇ ಜಾರಿಗೆ ಬರುವಂತೆ, ವಿಶ್ವದ ಅತ್ಯುತ್ತಮ ನೌಕಾಪಡೆಯಾದ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯು ಹೊರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅಥವಾ ಅಲ್ಲಿಂದ ಹೊರಹೋಗಲು ಪ್ರಯತ್ನಿಸುವ ಎಲ್ಲ ಹಡಗುಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.