ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khalistani Extremist Arrest: ಅಜಿತ್ ದೋವಲ್ ಒತ್ತಡದ ಬಳಿಕ ಒಟ್ಟಾವಾದಲ್ಲಿ ಖಲಿಸ್ತಾನಿ ಉಗ್ರನ ಬಂಧನ

2023ರಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ರಾಜಕೀಯ ಸ್ವರೂಪ ಪಡೆದು ಭಾರತ ಮತ್ತು ಕೆನಡಾ ನಡುವೆ ಸಂಬಂಧ ಹದಗೆಟ್ಟಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಎರಡು ದೇಶಗಳ ನಡುವೆ ಸಂಬಂಧ ಸುಧಾರಣೆಯಾಗುವ ಲಕ್ಷಣ ಕಂಡು ಬಂದಿದೆ. ಇದರ ಮೊದಲ ಹೆಜ್ಜೆಯಾಗಿ ಗುರುಪತ್ವಂತ್ ಸಿಂಗ್ ಪನ್ನುನ್‌ನ ನಿಕಟ ಸಹಚರ ಇಂದರ್‌ಜೀತ್ ಸಿಂಗ್ ಗೋಸಲ್‌ನನ್ನು ಒಟ್ಟಾವಾದಲ್ಲಿ ಬಂಧಿಸಲಾಗಿದೆ.

ಸುಧಾರಣೆಯಾಗುವುದೇ ಭಾರತ-ಕೆನಡಾ ಸಂಬಂಧ?

-

ಒಟ್ಟಾವಾ: ಭಾರತ (India) ಮತ್ತು ಕೆನಡಾ (canada) ನಡುವಿನ ಸಂಬಂಧದಲ್ಲಿ ಸುಧಾರಣೆಯ ಲಕ್ಷಣಗಳು ಗೋಚರವಾಗುತ್ತಿವೆ. ಹೆಚ್ಚಿನ ಬಂದೂಕು ಹೊಂದಿದ್ದ ಆರೋಪದಲ್ಲಿ ಖಲಿಸ್ತಾನಿ ನಾಯಕನಾಗಿ (Khalistani Extremist) ಗುರುತಿಸಿಕೊಂಡಿರುವ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun)ನ ನಿಕಟ ಸಹಚರ ಇಂದರ್‌ಜೀತ್ ಸಿಂಗ್ ಗೋಸಲ್ (Inderjeet Singh Gosal)ನನ್ನು ಒಟ್ಟಾವಾದಲ್ಲಿ ಬಂಧಿಸಲಾಗಿದೆ. ಇದು ಕೆನಡಾದಲ್ಲಿ ಪ್ರತ್ಯೇಕವಾದಿ ಗುಂಪುಗಳಿಗೆ ಬಹುದೊಡ್ಡ ಹೊಡೆತವಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ನೇತೃತ್ವದಲ್ಲಿ ನವದೆಹಲಿಯಿಂದ ಬಂದ ನಿರಂತರ ಒತ್ತಡದ ಬಳಿಕ ಈ ಬಂಧನವಾಗಿರುವುದು ವಿಶೇಷ ಎಂದೇ ಪರಿಗಣಿಸಲಾಗಿದೆ.

ಕೆನಡಾದ ಅಧಿಕಾರಿಗಳು ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ನಿಕಟ ಸಹಚರ ಇಂದರ್‌ಜೀತ್ ಸಿಂಗ್ ಗೋಸಲ್ ಅನ್ನು ಒಟ್ಟಾವಾದಲ್ಲಿ ಬಂಧಿಸಿದ್ದಾರೆ.

ಗುಪ್ತಚರ ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ನೇತೃತ್ವದಲ್ಲಿ ನವದೆಹಲಿಯಿಂದ ನಿರಂತರ ರಾಜತಾಂತ್ರಿಕ ಮತ್ತು ಗುಪ್ತಚರ ಇಲಾಖೆ ಒತ್ತಡದ ಬಳಿಕ ಈ ಬಂಧನವಾಗಿದೆ. ಭಾರತೀಯ ಏಜೆನ್ಸಿಗಳು ಸಲ್ಲಿಸಿರುವ ಹಣಕಾಸಿನ ವಹಿವಾಟಿನ ದಾಖಲೆಗಳ ಬಳಿಕ ಕೆನಡಾದ ಅಧಿಕಾರಿಗಳು ಖಲಿಸ್ತಾನಿ ಉಗ್ರಗಾಮಿ ಸ್ಲೀಪರ್ ಸೆಲ್‌ಗಳನ್ನು ನಿಗ್ರಹಿಸಲು ಕ್ರಮಕ್ಕೆ ಮುಂದಾಗಿದ್ದಾರೆ.

ಭಾರತದಿಂದ ಈಗಾಗಲೇ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ಪನ್ನುನ್‌ಗೆ ಹತ್ತಿರವಿರುವವರು ಕೆನಡಾದ ಭದ್ರತಾಗೂ ಸವಾಲೊಡ್ಡುತ್ತಿದ್ದಾರೆ ಎಂದು ಈಗಾಗಲೇ ಭಾರತ ಆರೋಪಿಸಿದೆ.

ಅಜಿತ್ ದೋವಲ್ ಮತ್ತು ಕೆನಡಾದ ರಾಯಭಾರಿ ನಥಾಲಿ ಡ್ರೌಯಿನ್ ಈ ತಿಂಗಳ ಆರಂಭದಲ್ಲಿ ಚರ್ಚೆ ನಡೆಸಿದ್ದರು. 2023ರಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಹದಗೆಟ್ಟ ಸಂಬಂಧವನ್ನು ಸುಧಾರಿಸುವ ಉದ್ದೇಶವನ್ನು ಇದು ಹೊಂದಿತ್ತು ಎನ್ನಲಾಗಿದೆ.

ಆ ಸಭೆಯಲ್ಲಿ ಖಲಿಸ್ತಾನಿ ಉಗ್ರವಾದ, ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ಭಯೋತ್ಪಾದಕರ ಹಸ್ತಾಂತರ ಮತ್ತು ಭಾರತದ ದೇಶೀಯ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಭಾರತೀಯ ಅಧಿಕಾರಿಗಳು ಒತ್ತಾಯಿಸಿದ್ದರು.

ಗೋಸೆಲ್ ಬಂಧನ ಇದರ ಪ್ರತಿಫಲನ. ಸರ್ಕಾರದಿಂದ ಉನ್ನತ ಮಟ್ಟದ ರಾಜಕೀಯ ಅನುಮತಿ ಇಲ್ಲದೆ ಗೋಸಲ್ ಬಂಧನ ಆಗುತ್ತಿರಲಿಲ್ಲ ಎಂದು ಸ್ವತಃ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಕ್ಯಾಬ್‌ ಚಾಲಕ- ಮಹಿಳೆ ನಡುವೆ ಡೆಡ್ಲಿ ಫೈಟ್‌! ವಿಡಿಯೊ ವೈರಲ್

ಗೋಸೆಲ್ ಬಂಧನವು ಎರಡು ದೇಶಗಳ ನಡುವಿನ ಸಂಬಂಧ ಸುಧಾರಣೆಯ ಲಕ್ಷಣವನ್ನು ತೋರಿಸಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಲ್ಗರಿ ಭೇಟಿಯ ಸಮಯದಲ್ಲಿ ಚರ್ಚಿಸಲಾದ ವ್ಯಾಪಾರ ವಹಿವಾಟುಗಳಿಗೆ ಮತ್ತೆ ಅವಕಾಶ ತೆರೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ನಿ ಸರ್ಕಾರವು ಉತ್ಸುಕವಾಗಿದೆ ಎನ್ನಲಾಗಿದೆ.