ಫ್ರಾನ್ಸ್‌ನಿಂದ 114 ರಫೇಲ್ ಫೈಟರ್ ಜೆಟ್ ಖರೀದಿಗೆ ತಯಾರಿ ನಡೆಸುತ್ತಿದೆ ಭಾರತ
ಕಳೆದ ಕೆಲವು ತಿಂಗಳುಗಳಿಂದ ಹಲವಾರು ದೇಶಗಳೊಂದಿಗೆ ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ನಿರತವಾಗಿರುವ ಭಾರತ ಇದೀಗ ಫ್ರಾನ್ಸ್‌ನಿಂದ 114 ರಫೇಲ್ ಫೈಟರ್ ಜೆಟ್ ಖರೀದಿಗೆ ತಯಾರಿ ನಡೆಸುತ್ತಿದೆ. ಇತ್ತೀಚೆಗೆ ಕೆನಡಾ, ಯುಕೆ, ಯುರೋಪಿಯನ್ ಒಕ್ಕೂಟ, ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.
ಸಂಗ್ರಹ ಚಿತ್ರ -
ನವದೆಹಲಿ: ಫ್ರಾನ್ಸ್‌ನಿಂದ (France) 114 ರಫೇಲ್ ಫೈಟರ್ ಜೆಟ್ (Rafale jets deals) ಖರೀದಿಗೆ ಭಾರತ ಈಗ ತಯಾರಿ ನಡೆಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಹಲವಾರು ದೇಶಗಳೊಂದಿಗೆ ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ನಿರತವಾಗಿರುವ ಭಾರತ (India) ಇದೀಗ ಫ್ರಾನ್ಸ್‌ನಿಂದ (France) ರಫೇಲ್ ಫೈಟರ್ ಜೆಟ್ (fighter jets) ಖರೀದಿಗೆ ಮುಂದಾಗಿದೆ. ಕೆನಡಾ (canada), ಯುಕೆ (UK), ಯುರೋಪಿಯನ್ ಒಕ್ಕೂಟ (EU), ಯುಎಸ್ (US) ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಕ್ಕೆ (trade deal) ಇತ್ತೀಚೆಗೆ ಭಾರತ ಸಹಿ ಹಾಕಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಗೂ ಮುನ್ನವೇ ಭಾರತ 114 ರಫೇಲ್ ಜೆಟ್‌ಗಳ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಈಗಾಗಲೇ ಅನುಮೋದನೆ ಪಡೆಯಲಾಗಿರುವ 42 ಸ್ಕ್ವಾಡ್ರನ್‌ಗಳನ್ನು 29 ಸ್ಕ್ವಾಡ್ರನ್‌ಗಳಿಗೆ ಇಳಿಸಲಾಗಿದ್ದು ಫ್ರಾನ್ಸ್‌ನಿಂದ 114 ರಫೇಲ್ ಫೈಟರ್ ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು 3.25 ಲಕ್ಷ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲು ಭಾರತೀಯ ರಕ್ಷಣಾ ಮಂಡಳಿ ಸಿದ್ಧತೆ ನಡೆಸುತ್ತಿದೆ.
ಹಾಸ್ಟೆಲ್‌ನಲ್ಲಿ ಚಾಕು ಇರಿತ; ರಷ್ಯಾದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಫೆಬ್ರವರಿ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಅವರು ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಪ್ರಸ್ತಾವನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಬಹು-ಶತಕೋಟಿ ಡಾಲರ್ ಒಪ್ಪಂದದ ಬಗ್ಗೆ ಪರಿಶೀಲನೆ ನಡೆಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ ಶೀಘ್ರದಲ್ಲೇ ಸಭೆ ಸೇರಲಿದೆ. ಈಗಾಗಲೇ ರಕ್ಷಣಾ ಕಾರ್ಯದರ್ಶಿ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು ಕಳೆದ ತಿಂಗಳು ರಫೇಲ್ ಸ್ವಾಧೀನ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಔಪಚಾರಿಕ ಮಾತುಕತೆಗಳನ್ನು ನಡೆಸಿದೆ.
ಭಾರತದ ಅತೀ ದೊಡ್ಡ ಯುದ್ಧ ವಿಮಾನ ಖರೀದಿ ಒಪ್ಪಂದ ಇದಾಗಿದ್ದು, ಭಾರತೀಯ ವಾಯುಪಡೆ (ಐಎಎಫ್)ಯು ಸದ್ಯ ತೀವ್ರ ಸ್ಕ್ವಾಡ್ರನ್ ಕೊರತೆಯನ್ನು ಎದುರಿಸುತ್ತಿದೆ. ಶತ್ರು ರಾಷ್ಟ್ರಗಳ ಬೆದರಿಕೆ ನಡುವೆ ಈಗ ಭಾರತ ಸುಮಾರು 29 ಫೈಟರ್ ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತಿದೆ. ಖರೀದಿ ಮಾಡಲು ಯೋಜಿಸಿರುವ 114 ರಫೇಲ್ ಜೆಟ್‌ಗಳಲ್ಲಿ 18 ಸಿದ್ದ ವಿಮಾನಗಳನ್ನು ಖರೀದಿಸುವ ಸಾಧ್ಯತೆಯಿದೆ. ಉಳಿದವುಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.
ಪಾಕ್ ಮೇಲೆ ಸೇಡು ತೀರಿಸಿಕೊಳ್ತಾ ಬಲೂಚಿಸ್ತಾನ? ನಮಾಜ್ ಮಾಡುತ್ತಿದ್ದವರನ್ನೇ ಟಾರ್ಗೆಟ್ ಮಾಡಿದ್ಯಾಕೆ?
ಯುದ್ಧ ವಿಮಾನಗಳ ಶೇ. 80ರಷ್ಟನ್ನು ದೇಶೀಯವಾಗಿ ಉತ್ಪಾದಿಸುವ ನಿರೀಕ್ಷೆಯಿದೆ. ಸ್ಥಳೀಯ ಉತ್ಪಾದನೆ ಮತ್ತು ವಿಮಾನಗಳ ಜೋಡಣೆಗಾಗಿ ಭಾರತೀಯ ಖಾಸಗಿ ವಲಯದ ಕಂಪನಿಗಳೊಂದಿಗೆ ಡಸಾಲ್ಟ್ ಏವಿಯೇಷನ್ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.