ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಎನ್ನದ ಇರಾನ್; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ಕೇಂದ್ರದ ಮೇಲೆ ಡ್ರೋನ್ ದಾಳಿ
ಇರಾನ್- ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧ ತೀವ್ರಗೊಂಡಿದ್ದು, ಮಂಗಳವಾರ ಮುಂಜಾನೆ ಇರಾನ್ ಸೌದಿ ಅರೇಬಿಯಾ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ನಡೆಸಿದೆ. ದಾಳಿಯಿಂದಾಗಿ ದೇಶದ ಅತಿದೊಡ್ಡ ಕೈಗಾರಿಕಾ ಕೇಂದ್ರ ಮತ್ತು ಪ್ರಮುಖ ಪೆಟ್ರೋಕೆಮಿಕಲ್ ಮತ್ತು ಇಂಧನ ಸೌಲಭ್ಯಗಳಿಗೆ ನೆಲೆಯಾದ ಅಲ್ ಜುಬೈಲ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಸಂಗ್ರಹ ಚಿತ್ರ -
ಟೆಹರಾನ್: ಇರಾನ್- ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧ (Iran Israel US War) ತೀವ್ರಗೊಂಡಿದ್ದು, ಮಂಗಳವಾರ ಮುಂಜಾನೆ ಇರಾನ್ ಸೌದಿ ಅರೇಬಿಯಾ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ನಡೆಸಿದೆ. ದಾಳಿಯಿಂದಾಗಿ ದೇಶದ ಅತಿದೊಡ್ಡ ಕೈಗಾರಿಕಾ ಕೇಂದ್ರ ಮತ್ತು ಪ್ರಮುಖ ಪೆಟ್ರೋಕೆಮಿಕಲ್ ಮತ್ತು ಇಂಧನ ಸೌಲಭ್ಯಗಳಿಗೆ ನೆಲೆಯಾದ ಅಲ್ ಜುಬೈಲ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಹಾರ್ಮೊಜ್ ಜಲಸಂಧಿಯ ನಿಯಂತ್ರಣವನ್ನು ಬಿಟ್ಟುಕೊಡದಿದ್ದರೆ ಇಸ್ಲಾಮಿಕ್ ಗಣರಾಜ್ಯದಲ್ಲಿರುವ ಎಲ್ಲಾ ಸೇತುವೆಗಳು ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಬಾಂಬ್ ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಬದಲಾಗಿದೆ ಇರಾನ್ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ಕೇಂದ್ರದಲ್ಲಿ ಸ್ಫೋಟ ಮತ್ತು ನಂತರ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ವೀಡಿಯೊಗಳು ತೋರಿಸಿವೆ. ಜುಬೈಲ್ 1,000 ಚದರ ಕಿ.ಮೀ.ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, 150 ಕ್ಕೂ ಹೆಚ್ಚು ಕೈಗಾರಿಕಾ ಸೌಲಭ್ಯಗಳನ್ನು ಹೊಂದಿದ್ದು, ಸೌದಿ ಜಿಡಿಪಿಯ ಸರಿಸುಮಾರು 7% ರಿಂದ 12% ಮತ್ತು ಒಟ್ಟು ವಿದೇಶಿ ನೇರ ಹೂಡಿಕೆಯ ಸುಮಾರು 50% ರಷ್ಟಿದೆ.
ವಿಡಿಯೋ ನೋಡಿ
NEW 🔴
— Open Source Intel (@Osint613) April 6, 2026
Reports indicate Al Jubail Industrial City in Saudi Arabia is on fire following Iranian strikes. pic.twitter.com/c6KbzFmh3z
ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ತನ್ನ ವಾಯು ರಕ್ಷಣಾ ಪಡೆಗಳು ಅಲ್ ಜುಬೈಲ್ ಇರುವ ಪೂರ್ವ ಪ್ರದೇಶವನ್ನು ಗುರಿಯಾಗಿಸಿಕೊಂಡು ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಿವೆ ಎಂದು ತಿಳಿಸಿದೆ. ಪೂರ್ವ ಪ್ರದೇಶದ ಕಡೆಗೆ ಉಡಾಯಿಸಲಾದ 7 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಕುವೈತ್, ಬಹ್ರೇನ್ ಮತ್ತು ಯುಎಇಗಳಲ್ಲಿನ ಪೆಟ್ರೋಕೆಮಿಕಲ್ ಸೌಲಭ್ಯಗಳ ಮೇಲೆಯೂ ಇರಾನ್ ದಾಳಿ ನಡೆಸಿದೆ.
ನಿನ್ನೆ ಉತ್ತರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್‌ನ್ ಹೈಫಾ ನಗರ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿತ್ತು. ಹೈಫಾದಲ್ಲಿ ಬಹುಮಹಡಿ ಕಟ್ಟಡಗಳಿಗೆ ಹಾನಿಯಾಗಿದೆ. ಈ ಮಧ್ಯೆ ಕತಾರ್, ಟರ್ಕಿ ಮಧ್ಯಸ್ಥಿಕೆ ತಿರಸ್ಕರಿಸಿದ ಇರಾನ್, ಅಮೆರಿಕ ಜೊತೆ ಮಾತುಕತೆ ಅಗತ್ಯವಿಲ್ಲ. ಯಾರ ಮಧ್ಯಸ್ಥಿಕೆಯೂ ಇನ್ನು ಮುಂದೆ ಅಗತ್ಯವಿಲ್ಲ ಎಂದು ಮಧ್ಯಸ್ಥಿಕೆಗೆ ಬಂದ ಕತಾರ್, ಟರ್ಕಿಗೆ ಇರಾನ್ ಸಂದೇಶ ನೀಡಿದೆ.