ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"48 ಗಂಟೆಯೊಳಗೆ ಹಾರ್ಮೊಜ್‌ ತೆರೆಯದಿದ್ದರೆ ಇರಾನ್‌ ನಾಶ ಮಾಡುತ್ತೇವೆ"; ಮತ್ತೆ ಬೆದರಿಕೆ ಹಾಕಿದ ಟ್ರಂಪ್‌

ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಹಾರ್ಮೊಜ್‌ ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ ಇರಾನ್‌ ಮತ್ತೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇರಾನ್‌ಗೆ ಬೆದರಿಕೆ ಹಾಕಿದ ಟ್ರಂಪ್‌!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 22, 2026 9:25 AM

ವಾಷಿಂಗ್ಟನ್‌: ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಹಾರ್ಮೊಜ್‌ ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ (Hormuz)ಇರಾನ್‌ ಮತ್ತೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಟ್ರಂಪ್ ಇರಾನ್‌ಗೆ 48 ಗಂಟೆಗಳ ಕಾಲ ಗಡುವು ನೀಡುವುದಾಗಿ ಹೇಳಿದ್ದಾರೆ.

48 ಗಂಟೆಗಳ ಒಳಗೆ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಅಮೆರಿಕವು ಅದರ ವಿವಿಧ ವಿದ್ಯುತ್ ಸ್ಥಾವರಗಳನ್ನು ಹೊಡೆದು ನಾಶಪಡಿಸುತ್ತದೆ, ಮೊದಲು ಅತಿದೊಡ್ಡ ವಿದ್ಯುತ್ ಸ್ಥಾವರದಿಂದ ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಂಧನ, ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.

ಏನಿದು ಹೊರ್ಮುಜ್ ಜಲಸಂಧಿ?

ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹೊರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಎರಡು ಮಹಾ ಸಮುದ್ರಗಳನ್ನು ಬೆಸೆಯಲು ಎರಡು ದೇಶಗಳ ಗಡಿ ಭಾಗವನ್ನು ಕೊರೆದು ನೀರಿನ ಕಾಲುವೆಯನ್ನಾಗಿ ಮಾಡಲಾಗುತ್ತದೆ. ಜಗತ್ತಿಗೆ ಹಡಗುಗಳ ಮೂಲಕ ಸಾಗಾಟವಾಗುವ ಕಚ್ಚಾತೈಲಗಳ ಪ್ರಮಾಣದಲ್ಲಿ ಶೇ 20 ಷ್ಟು ಕಚ್ಚಾತೈಲ ಈ ಜಲಸಂಧಿಯ ಮೂಲಕ ಸಾಗಾಟವಾಗುತ್ತದೆ. ಆದರೆ ಯುದ್ದ ಸಮಸ್ಯೆಗೆ ಕಾರಣವಾಗಿದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ.

ಇರಾನ್‌ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಇರಾನ್ ಭಾರತ ಧ್ವಜ ಹೊತ್ತ ಟ್ಯಾಂಕರ್‌ಗಳಿಗೆ ಹಾರ್ಮೊಜ್‌ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ. ಅಮೆರಿಕ, ಯುರೋಪ್ ಮತ್ತು ಇಸ್ರೇಲ್‌ನ ಹಡಗುಗಳು ನಿರ್ಬಂಧಗಳನ್ನು ಎದುರಿಸುತ್ತಲೇ ಇದ್ದರೂ, ಭಾರತಕ್ಕೆ ಮಾತ್ರ ಇರಾನ್‌ ಅವಕಾಶ ನೀಡಿದೆ.