Padmashri Awardee Dr C N Manjunath honoured: ‘ಕರುನಾಡ ವೈಭವ 2026’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ದಂಪತಿಗೆ ಸನ್ಮಾನ
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್ ಅವರು, ಸಂಸತ್ತಿನಲ್ಲಿ ಬಡ ಮತ್ತು ಮನುಕುಲದ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಮತ್ತು ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯಗಳು ತಲುಪುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
-
ದೋಹಾ: ಕತಾರ್‌ನಲ್ಲಿರುವ ಕನ್ನಡಿಗರ ಪ್ರಮುಖ ಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ (KSQ) ಆಯೋಜಿಸಿದ ‘ಕರುನಾಡ ವೈಭವ 2026’ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಯಲ್ಲಿ, ಪ್ರಸಿದ್ಧ ಹೃದ್ರೋಗ ತಜ್ಞರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ.ಸಿ.ಎನ್.ಮಂಜುನಾಥ್(Padmashri Awardee Dr C N Manjunath) ಮತ್ತು ಅವರ ಧರ್ಮಪತ್ನಿ ಶ್ರೀಮತಿ ಅನಸೂಯಾ ಮಂಜುನಾಥ್ ಅವರಿಗೆ ಕತಾರ್ ಕನ್ನಡಿಗರ ಪರವಾಗಿ ಶ್ರದ್ಧೆ ಹಾಗೂ ಪ್ರೀತಿಯಿಂದ ಸನ್ಮಾನಿಸಲಾಯಿತು.
ಅಲ್ ವಕ್ರಾ ನಗರದ DPS MIS ಆಡಿಟೋರಿಯಂನಲ್ಲಿ ನಡೆದ ಈ ವೈಭವೋಪೇತ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್‌ನಲ್ಲಿರುವ ಭಾರತದ ರಾಯಭಾರಿ ಹೆಚ್.ಇ. ಡಾ. ಕೆ. ಶ್ರೀಕರ್ ರೆಡ್ಡಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಸಾಂಸ್ಕೃತಿಕ ಸಚಿವಾಲಯದ ಸಂಗೀತ ವ್ಯವಹಾರಗಳ ಕೇಂದ್ರದ ನಿರ್ದೇಶಕ ಖಾಲಿದ್ ಅಲ್ ಸಾಲೆಮ್, ಹಾಗೂ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ಸಂಸ್ಥೆಯು, ಡಾ. ಸಿ.ಎನ್. ಮಂಜುನಾಥ್ ಅವರ ದಶಕಗಳ ನಿಸ್ಸ್ವಾರ್ಥ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿತು. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ‘ಮೊದಲು ಚಿಕಿತ್ಸೆ, ನಂತರ ಹಣ’ ಎಂಬ ಮಾನವೀಯ ತತ್ವದೊಂದಿಗೆ ಬಡ ಹಾಗೂ ಮನುಕುಲದ ಪ್ರತಿಯೊಬ್ಬರಿಗೂ ಅತ್ಯುನ್ನತ ಚಿಕಿತ್ಸೆ ಸಿಗುವಂತೆ ಮಾಡಿದ ಅವರ ಸೇವೆಯನ್ನು ಸಂಸ್ಥೆಯು ಕೊಂಡಾಡಿತು.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ(Bangalore Gramantara Loksabha MP)ರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್ ಅವರು, ಸಂಸತ್ತಿನಲ್ಲಿ ಬಡ ಮತ್ತು ಮನುಕುಲದ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಮತ್ತು ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯ ಗಳು ತಲುಪುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ತಮ್ಮ ಸರಳತೆ, ಕಾರುಣ್ಯ ಮತ್ತು ನಿರಂತರ ಸೇವೆಯ ಮೂಲಕ ಕರ್ನಾಟಕ ಹಾಗೂ ಭಾರತ ದೇಶದ ಕೀರ್ತಿಯನ್ನು ಎತ್ತಿಹಿಡಿದ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಕತಾರ್‌ನ ಸಮಸ್ತ ಕನ್ನಡಿಗರು ತಮ್ಮ ಆಳವಾದ ಗೌರವ ಮತ್ತು ಪ್ರೀತಿಯನ್ನು ಸಮರ್ಪಿಸಿದರು.