ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಕ್ರೇನ್‌ ಅಧ್ಯಕ್ಷರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ; ರಷ್ಯಾ-ಉಕ್ರೇನ್‌ ಸಂಘರ್ಷ ಅಂತ್ಯಕ್ಕೆ ಸಹಕಾರದ ಭರವಸೆ

Ukraine-Russia war: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಹಿಂದಿನಿಂದಲೂ ಉಕ್ರೇನ್‌-ರಷ್ಯಾ ಯುದ್ಧವನ್ನು ಮಾತುಕತೆ ಮೂಲಕ ನಿಲ್ಲಿಸಬೇಕೆಂದು ಭಾರತ ಆಗ್ರಹಿಸುತ್ತಲೇ ಬಂದಿದ್ದು, ಮತ್ತೊಮ್ಮೆ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಉಕ್ರೇನ್‌ ಅಧ್ಯಕ್ಷರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ವೊಲೊಡಿಮಿರ್ ಝೆಲೆನ್ಸ್ಕಿ, ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 9, 2026 11:12 PM

ದೆಹಲಿ, ನ. 9: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಹಿಂದಿನಿಂದಲೂ ಉಕ್ರೇನ್‌-ರಷ್ಯಾ ಯುದ್ಧವನ್ನು (Ukraine-Russia War) ಮಾತುಕತೆ ಮೂಲಕ ನಿಲ್ಲಿಸಬೇಕೆಂದು ಭಾರತ ಆಗ್ರಹಿಸುತ್ತಲೇ ಬಂದಿದ್ದು, ಮತ್ತೊಮ್ಮೆ ತನ್ನ ನಿಲುವನ್ನು ಪುನರುಚ್ಚರಿಸಿದೆ. ಇದರೊಂದಿಗೆ ಎರಡು ದೇಶಗಳ ಪರಸ್ಪರ ಸಹಕಾರದ ಬಗ್ಗೆಯೂ ನಾಯಕರು ಚರ್ಚೆ ನಡೆಸಿದರು. ಸದ್ಯ ಈ ಮಾತುಕತೆ ಜಗತ್ತಿನ ಕುತೂಹಲ ಕೆರಳಿಸಿದ್ದು, ಉಕ್ರೇನ್‌-ರಷ್ಯಾ ಯುದ್ಧ ಅಂತ್ಯದ ಕಾಲ ಸನ್ನಿಹಿತವಾಯ್ತಾ ಎಂಬ ಚರ್ಚೆ ಆರಂಭವಾಗಿದೆ.

ನಾಯಕರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ ನಡೆಸಿದ್ದಾರೆ ಮತ್ತು ಭಾರತ-ಉಕ್ರೇನ್ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಒಪ್ಪಿಕೊಂಡರು. ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತವು ಎರಡೂ ದೇಶಗಳೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಎಕ್ಸ್‌ ಪೋಸ್ಟ್‌:



ಮಾಹಿತಿ ಹಂಚಿಕೊಂಡ ಮೋದಿ

ʼʼದೂರವಾಣಿ ಮೂಲಕ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆ ಯಶಸ್ವಿ ಮಾತುಕತೆ ನಡೆಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ ನಡೆಸಲಾಗಿದ್ದು, ಸಂಬಂಧ ವೃದ್ಧಿಗೆ ಒಪ್ಪಿಕೊಂಡೆವುʼʼ ಎಂದು ಎಕ್ಸ್‌ ಮೂಲಕ ನರೇಂದ್ರ ಮೋದಿ ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್‌ ಮಧ್ಯೆ ಶಾಂತಿ ಮಾತುಕತೆ; ಸಮರ ಅಂತ್ಯಕ್ಕೆ ಕಾಲ ಸನ್ನಿಹಿತ?

"ನಡೆಯುತ್ತಿರುವ ಸಂಘರ್ಷ, ಅದರ ಮಾನವೀಯ ಆಯಾಮಗಳು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಕೈಗೊಳ್ಳುತ್ತಿರುವ ವಿವಿಧ ಪ್ರಯತ್ನಗಳ ಕುರಿತು ಝೆಲೆನ್ಸ್ಕಿ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಶಾಂತಿಯುತ ಪರಿಹಾರಕ್ಕಾಗಿ ಸಾಧ್ಯವಿರುವ ಎಲ್ಲ ರೀತಿಯ ಕೊಡುಗೆ ನೀಡಲು ಭಾರತ ಬದ್ಧವಾಗಿದೆ ಎಂಬುದನ್ನು ಪುನರುಚ್ಚರಿಸಿದ್ದೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವೊಲೊಡಿಮಿರ್ ಝೆಲೆನ್ಸ್ಕಿ ಎಕ್ಸ್‌ ಪೋಸ್ಟ್‌:



ಈ ಬಗ್ಗೆ ತಿಳಿಸಿದ ಝೆಲೆನ್ಸ್ಕಿ ತಾವು ಮೋದಿ ಅವರಿಗೆ ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. "ನಾನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ ಮತ್ತು ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳ ಕುರಿತು ಅವರಿಗೆ ಮಾಹಿತಿ ನೀಡಿದೆ. ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಸಭೆಯ ಕಾರ್ಯಸೂಚಿಯಲ್ಲಿರುವ ಪ್ರತಿಯೊಂದು ವಿಷಯಕ್ಕೂ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಉಕ್ರೇನ್ ಯಾವಾಗಲೂ ರಚನಾತ್ಮಕ ನಿಲುವನ್ನು ತಳೆದಿದೆ. ರಷ್ಯಾ ಕೂಡ ಸಂಘರ್ಷ ನಿಯಂತ್ರಿಸಲು ಬದ್ಧತೆ ತೋರಿಸಬೇಕಿದೆ. ಯುದ್ಧವನ್ನು ಮುಂದುವರಿಸುವ ಸಮಯ ಇದಲ್ಲ, ಬದಲಾಗಿ ಅದನ್ನು ಕೊನೆಗೊಳಿಸುವ ಸಮಯ ಇದಾಗಿದೆ ಎಂದು ಪ್ರಧಾನ ಮಂತ್ರಿ ರಷ್ಯಾದ ನಾಯಕರಿಗೆ ಹಲವು ಬಾರಿ ಹೇಳಿದ್ದಾರೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. "ಈ ಭಯಾನಕ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಕ್ಕೆ ಭಾರತ ಅಪಾರ ಕೊಡುಗೆ ನೀಡಲಿದೆ ಎನ್ನುವ ವಿಶ್ವಾಸವಿದೆʼʼ ಎಂದು ಹೇಳಿದ್ದಾರೆ.

ಪಾಮ್‌ ಭಾನುವಾರದಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ; 31 ಮಂದಿ ಬಲಿ

ಉಕ್ರೇನ್ ಸಂಘರ್ಷ ಕೊನೆಗೊಳಿಸುವ ವಿಚಾರಕ್ಕೆ ಪ್ರಧಾನಿ ಮೋದಿ ಬದ್ಧರಾಗಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ತಿಂಗಳು ಹೇಳಿದ್ದರು. ಪ್ರತಿ ಸಭೆಯಲ್ಲೂ ಮೋದಿ ಈ ವಿಚಾರ ಎತ್ತುತ್ತಾರೆ ಎಂದಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ