ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮತ್ತೊಮ್ಮೆ ಕಳ್ಳಾಟ ಆಡಿದ ಚೀನಾ; ಢಾಕಾದ ಕೊಳಗೇರಿ ತೋರಿಸಿ ಭಾರತದ್ದು ಎಂದ ವ್ಲಾಗರ್ಸ್‌

Anti-India Campaign: ಬಾಂಗ್ಲಾದೇಶದ ಕೊಳಗೇರಿಯನ್ನು ತೋರಿಸಿ ಅದು ದೆಹಲಿಯದ್ದು ಎಂದು ಬಿಂಬಿಸಲು ಚೀನಾ ವ್ಲಾಗರ್ಸ್‌ ಶ್ರಮಿಸಿದ್ದಾರೆ. ಆ ಮೂಲಕ ಭಾರತ ವಿರೋಧಿ ಅಭಿಯಾನ ಮತ್ತೊಂದು ಹಂತಕ್ಕೆ ಹೋಗಿದೆ. ಚೀನಾದ ಈ ಕಳ್ಳಾಟವನ್ನು ಬಯಲಾದ ಬಳಿಕ ಭಾರತ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಢಾಕಾದ ಕೊಳಗೇರಿ ತೋರಿಸಿ ಭಾರತದ್ದು ಎಂದ ವ್ಲಾಗರ್ಸ್‌

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 10, 2026 8:46 PM

ದೆಹಲಿ, ನ. 10: ಹೊರಗಿನಿಂದ ಸ್ನೇಹ ಹಸ್ತ ಚಾಚಿದರೂ ಚೀನಾ ಒಳಗೊಳಗೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪ್ರವೃತ್ತಿ ನಿಲ್ಲಿಸಿಲ್ಲ. ಇದೀಗ ಮತ್ತೆ ಅಂತಹದ್ದೇ ದುಸ್ಸಾಹಸಕ್ಕೆ ಕೈ ಹಾಕಿ ಸಿಕ್ಕಿ ಬಿದ್ದಿದ್ದು, ಭಾರತ ಕಟುವಾಗಿ ಖಂಡಿಸಿದೆ. ಬಾಂಗ್ಲಾದೇಶದ ಕೊಳಗೇರಿಯನ್ನು ತೋರಿಸಿ ಅದು ದೆಹಲಿಯದ್ದು ಎಂದು ಬಿಂಬಿಸಲು ಚೀನಾ ವ್ಲಾಗರ್ಸ್‌ ಶ್ರಮಿಸಿದ್ದಾರೆ. ಆ ಮೂಲಕ ಭಾರತ ವಿರೋಧಿ ಅಭಿಯಾನವನ್ನು (Anti-India Campaign) ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಚೀನಾದ ಈ ಕಳ್ಳಾಟವನ್ನು ಬಯಲಾದ ಬಳಿಕ ಭಾರತ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ʼʼಚೀನಾ ವ್ಲಾಗರ್‌ಗಳ ಕೃತ್ಯ ಗಮನಕ್ಕೆ ಬಂದಿದೆ. ಯಾವುದೇ ಒಂದು ದೇಶವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಖಂಡನಾರ್ಹʼʼ ಎಂದು ತಿಳಿಸಿದ್ದಾರೆ.

ಪ್ರೊಫೆಸರ್‌ ಶ್ರೀಕಾಂತ್‌ ಕೊಂಡಪಳ್ಳಿ ಹೇಳಿಕೆ:



ʼʼಢಾಕಾವನ್ನು ತೋರಿಸಿ ದೆಹಲಿ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆʼʼ ಎಂದು ಹೇಳಿದ್ದಾರೆ.

ಐಟಿ ಕ್ಷೇತ್ರದಲ್ಲಿ ಹನಿಟ್ರಾಪ್‌! ಚೀನಾ ಗೂಢಚಾರಿಣಿ ಜತೆ ಅಫೇರ್‌ ಒಪ್ಪಿಕೊಂಡ ಎನ್‌ವಿಡಿಯಾ ಸಿಇಒ!

ಏನಿದು ಘಟನೆ?

ಬಾಂಗ್ಲಾದೇಶದ ಪ್ರೋಥಮ್ ಅಲೋ ಪತ್ರಿಕೆ ನಡೆಸಿದ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಕೆಲವು ಚೀನಿ ವ್ಲಾಗರ್‌ಗಳು ಢಾಕಾದ ಕೊಳೆಗೇರಿಯನ್ನು ಚಿತ್ರೀಕರಿಸಿ ಅದನ್ನು ದೆಹಲಿ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ. ಟೆಕ್ಪಾರ ಮತ್ತು ಢಾಕಾದ ಅಗಲ ಕಿರಿದಾದ ಸಂಧಿಗಳಲ್ಲಿ ವಿಡಿಯೊ ಚಿತ್ರೀಕರಿಸಿ ವಿವಿಧ ಕಡೆಯ ಹರಿಯಬಿಟ್ಟಿದ್ದಾರೆ ಎಂದು ತಿಳಿಸಿದೆ.

ವಿಡಿಯೊದಲ್ಲಿ ಕಂಡು ಬರೋದೇನು?

ʼʼಇದು ದೆಹಲಿ. ಇವರ ಮನೆ ಗಲೀಜಾಗಿದೆ. ತಗಡು ಚಾವಣಿ ಹೊಂದಿದ ಮನೆಯೊಳಗೆ ಫ್ಯಾನ್‌ ಕೂಡ ಇಲ್ಲ. ಈ ಪ್ರದೇಶ ಅಭಿವೃದ್ಧಿಯೇ ಆಗಿಲ್ಲ. ಸ್ವಚ್ಛತೆಯೇ ಮರೀಚಿಕೆಯಾಗಿದೆ. ಕಾನೂನು ಪಾಲಿಸುವವರೇ ಇಲ್ಲʼʼ ಎಂದು ಚೀನಾ ವ್ಲಾಗರ್‌ ವಿಡಿಯೊದಲ್ಲಿ ತಿಳಿಸಿದ್ದರು. ಚೀನಾದ ಭಾರತ ವಿರೋಧಿ ಅಭಿಯಾನದ ಭಾಗವಾಗಿ ಈ ವಿಡಿಯೊ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ ಚೀನಾದ ಸೋಷಿಯಲ್‌ ಮೀಡಿಯಾ ಫ್ಲ್ಯಾಟ್‌ಫಾರ್ಮ್‌ಗಳಾದ ವೈಬೊ ಮತ್ತು ವಿಚಾಟ್‌ಗಳಲ್ಲಿ 2024ರಿಂದ ಭಾರತ ವಿರೋಧಿ, ದಕ್ಷಿಣ ಏಷ್ಯಾ ವಿರೋಧಿ ವಿಡಿಯೊಗಳು ಹರಿದಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚೀನಾವನ್ನು ತರಾಟೆಗೆ ತೆಗೆದುಕೊಂಡ ರಣಧೀರ್ ಜೈಸ್ವಾಲ್:



ʼʼಇಂತಹ ವ್ಲಾಗರ್ಸ್‌ ಢಾಕಾ ಮಾತ್ರವಲ್ಲ ಇಂಡೋನೇಷ್ಯಾ ಮತ್ತು ವಿಯೆಟ್ನಾಂಗಳಲ್ಲೂ ವಿಡಿಯೊ ಮಾಡಿ, ಬಡತನವನ್ನು ತೋರಿಸಿ ಭಾರತದ್ದೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆʼʼ ಎಂದು ಜೆನ್‌ಯು ಪ್ರೊಫೆಸರ್‌ ಶ್ರೀಕಾಂತ್‌ ಕೊಂಡಪಳ್ಳಿ ಹೇಳಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಜತೆ ಮಾತನಾಡಿ, ʼʼನಾನು ಪ್ರಪಂಚದ ವಿವಿಧ ಕಡೆಗಳಲ್ಲಿ ಸಂಚರಿಸಿದ್ದೇನೆ. ಇದೇ ರೀತಿಯ ಪರಿಸ್ಥಿತಿ ಚೀನಾ ಸೇರಿ ಪ್ರಪಂಚದ ವಿವಿಧ ಹಳ್ಳಿಗಳಲ್ಲಿದೆʼʼ ಎಂದು ವಿವರಿಸಿದ್ದಾರೆ.

ಅಪರೇಷನ್ ಸಿಂದೂರ್‌ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಬಲ ನೀಡಿದ್ದ ಚೀನಾ

"ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಿನ್ನ ಆಡಳಿತ ಮಾದರಿಯನ್ನು ಹೊಂದಿರುವ ಭಾರತವು ಚೀನಾದಷ್ಟು ಜಿಡಿಪಿ ಅಥವಾ ಹೂಡಿಕೆಯಿಲ್ಲದೆಯೇ ಬಡತನ ನಿವಾರಣೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಯಿತುʼʼ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ