ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak PM Shahbaz Sharif:ಭಾರತದ ಸಖತ್‌ ಠಕ್ಕರ್‌ಗೆ ಪಾಕ್‌ ವಿಲವಿಲ- ಪ್ರಧಾನಿ ಷರೀಫ್‌ ಆಸ್ಪತ್ರೆಗೆ ದಾಖಲು

Pak PM Hospitalised: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಕಿಡಿಗೇಡಿ ಪಾಕಿಸ್ತಾನದ ವಿರುದ್ಧ ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಭಾರತದ ಪ್ರತೀಕಾರಕ್ಕೆ ಪಾಕ್‌ ವಿಲವಿಲ ಒದ್ದಾಡುತ್ತಿದೆ. ಈ ನಡುವೆ ಅಲ್ಲಿನ ಪ್ರಧಾನಿ ಶೆಹಬಾಜ್‌ ಷರೀಫ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡೆಡ್ಲಿ ಅಟ್ಯಾಕ್‌ ಭೀತಿಯಲ್ಲಿ ಪಾಕ್‌; ಪ್ರಧಾನಿಯೇ ಆಸ್ಪತ್ರೆಗೆ ದಾಖಲು

Profile Rakshita Karkera Apr 30, 2025 12:54 PM

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam terror Attack) ಕಳೆದ ವಾರ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ನಿಗಿ ನಿಗಿ ಕೆಂಡದಂತಾಗಿದೆ. ದಾಳಿಗೆ ಪ್ರತೀಕಾರವಾಗಿ ಭಾರತ ಜಲಸಮರ ಸೇರಿದಂತೆ ಕೆಲವೊಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಅದೂ ಅಲ್ಲದೇ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಸೇನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ. ಹೀಗಿರುವಾಗ ಯಾವ ಕ್ಷಣದಲ್ಲೂ ತನ್ನ ಮೇಲೆ ಭಾರತ ದಾಳಿ ನಡೆಸುವ ಭೀತಿಯಲ್ಲಿ ಪಾಕಿಸ್ತಾನ ಇದೆ. ಈ ನಡುವೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್(Pak PM Shahbaz Sharif) ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ(Pak PM Hospitalised) ಎಂದು ವರದಿಗಳು ಹೇಳುತ್ತವೆ. ಪಾಕಿಸ್ತಾನಿ ಪ್ರಧಾನಿ ಮೂಲವ್ಯಾಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಏಪ್ರಿಲ್ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

pak

ಈ ಸುದ್ದಿಯನ್ನೂ ಓದಿ: ಪಹಲ್ಗಾಮ ಉಗ್ರರ ಕುಕೃತ್ಯವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ : ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ

ಇನ್ನೂ ಹೆಚ್ಚಿನ ಸಂಗತಿಯೆಂದರೆ, ಆಸ್ಪತ್ರೆಯ ದಾಖಲೆಗಳು ಪ್ರಧಾನ ಮಂತ್ರಿಯವರ ಸ್ಥಿತಿಯನ್ನು ಗೌಪ್ಯವಾಗಿಡಲು ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿವೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಪ್ರತ್ಯೇಕತೆ ಮತ್ತು ಆಂತರಿಕ ಅಸ್ಥಿರತೆಯ ಬಗ್ಗೆ ಈಗಾಗಲೇ ಬಿಕ್ಕಟ್ಟಿನಲ್ಲಿರುವ ದೇಶದಲ್ಲಿ, ಈ ಗೌಪ್ಯತೆ ಕಾಪಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಇನ್ನು ಇದು ಸರ್ವೇ ಸಾಮಾನ್ಯವಾಗಿ ಇರುವ ಆರೋಗ್ಯ ಸಮಸ್ಯೆಯೇ ಅಥವಾ ಭಾರತದ ಪ್ರತೀಕಾರಕ್ಕೆ ಮಾನಸಿಕ ಒತ್ತಡ ಉಂಟಾಗಿ ಅದರಿಂದ ಉಲ್ಭಣಿಸಿರುವ ಕಾಯಿಲೆಯೇ ಎಂಬ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ.

ಒಂದೆಡೆ ಯುದ್ಧ ಭೀತಿಯಲ್ಲಿ ಪಾಕಿಸ್ತಾನ ಇದ್ದರೆ ಮತ್ತೊಂದೆಡೆ ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪ್ರಧಾನಿಯೇ ಆಸ್ಪತ್ರೆಗೆ ದಾಖಲಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ಪಾಕಿಸ್ತಾನದ ವಿರುದ್ಧ ಭಾರತ ಸಿಂಧೂಜಲ ಒಪ್ಪಂದ ರದ್ದು, ಪಾಕಿಸ್ತಾನಿ ಪ್ರಜೆಗಳ ಗಡೀಪಾರು ಸೇರಿದಂತೆ ಹತ್ತು ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದರ ನಡುವೆ ನಿನ್ನೆ ಮೂರು ಸೇನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ ಪಾಕ್‌ ವಿರುದ್ಧ ಸಮರಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಸಂಪೂರ್ಣ ಅಧಿಕಾರವನ್ನು ಸೇನೆಗೆ ನೀಡಿದ್ದಾರೆ. ಈ ಎಲ್ಲಾ ನಡೆಗಳಿಂದ ಪಾಕಿಸ್ತಾನ ಕಂಗೆಟ್ಟಿದೆ.