ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೆನ್‌ ಝೀಗಳಿಗೂ ಮಾದರಿ ಈ 89 ವರ್ಷದ ವೃದ್ಧೆಯ ಜೀವನೋತ್ಸಾಹ: ಬದುಕಿನ‌ ಬಂಡಿ ಸಾಗಿಸಲು ರೈಲಿನಲ್ಲಿ ಬಳೆ ಮಾರಾಟ!

Viral Video: ಇಲ್ಲೊಬ್ಬರು 89 ವರ್ಷದ ವೃದ್ದೆ ವಿಶ್ರಾಂತಿ ಮಾಡುವ ವಯಸ್ಸಿನಲ್ಲೂ ಯಾರಿಗೂ ಅವಲಂಬಿಸದೆ ಬದುಕು ಕಟ್ಟಿಕೊಂಡಿದ್ದಾರೆ. ಕಮಲಾಬೆನ್ ಮೆಹ್ತಾ ಎನ್ನುವ ಹಿರಿಯ ಮಹಿಳೆ ಮುಂಬೈನ ಕಿಕ್ಕಿರಿದು ತುಂಬಿರುವ ಲೋಕಲ್ ಟ್ರೈನ್‌ ಗಳಲ್ಲಿ ಬಳೆಗಳನ್ನು ಮಾರುವ ಮೂಲಕ ಎಲ್ಲರಿಗೂ ಮಾದರಿ ಯಾಗಿದ್ದಾರೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲೋಕಲ್ ಟ್ರೈನ್‌ನಲ್ಲಿ ಬಳೆ ಮಾರುತ್ತ ಜೀವನ ಸಾಗಿಸುವ 89 ವರ್ಷದ ಅಜ್ಜಿ!

89ರ ಹರೆಯದಲ್ಲೂ ವೃದ್ಧೆ ಮಹಿಳೆಯ ಉತ್ಸಾಹ -

Profile
Pushpa Kumari Feb 1, 2026 5:36 PM

ಮುಂಬೈ, ಫೆ. 1: ಜೀವನದಲ್ಲಿ ದುಡಿದು ತಿನ್ನಬೇಕು ಎನ್ನುವ ಮಾತಿದೆ. ಹೀಗಾಗಿ ಹೊಟ್ಟೆಪಾಡಿಗಾಗಿ ಹವರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಇಲ್ಲೊಬ್ಬರು 89 ವರ್ಷದ ವೃದ್ಧೆ ವಿಶ್ರಾಂತಿ ಮಾಡುವ ವಯಸ್ಸಿನಲ್ಲೂ ಯಾರನ್ನೂ ಅವಲಂಬಿಸದೆ ದುಡಿಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಕಮಲಾಬೆನ್ ಮೆಹ್ತಾ ಎನ್ನುವ ಹಿರಿಯ ಮಹಿಳೆ ಮುಂಬೈಯ ಕಿಕ್ಕಿರಿದು ತುಂಬಿರುವ ಲೋಕಲ್ ರೈಲಿನಲ್ಲಿ ಬಳೆಗಳನ್ನು ಮಾರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.‌ ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಸುಮಾರು 60 ವರ್ಷಗಳಿಂದ ಈ ಹಿರಿಯ ಮಹಿಳೆ ಮುಂಬೈಯ ವಿಲೆ ಪಾರ್ಲೆ ಮತ್ತು ನಲಸೋಪಾರಾ ನಡುವೆ ಸಂಚರಿಸುವ ರೈಲಿನಲ್ಲಿ ಓಡಾಡುತ್ತ ಮಣಿಗಳಿಂದ ಮಾಡಿದ ಬಳೆಗಳನ್ನು ಮಾರುತ್ತಿದ್ದಾರೆ. ರೈಲಿನೊಳಗೆ ಪ್ರಯಾಣಿಕರೊಬ್ಬರು ಮಾತನಾಡಿಸಿದಾಗ ಅವರು ನಿಧಾನವಾಗಿ ಹೆಸರನ್ನು ‌ "ಕಮಲಾಬೆನ್ ಮೆಹ್ತಾ" ಎಂದು ಉತ್ತರಿಸುತ್ತಾರೆ. ಅವರ ವಯಸ್ಸನ್ನು ಕೇಳಿದಾಗ, ಅವರು ಶಾಂತವಾಗಿ "89" ಎಂದು ಹೇಳಿದ್ದಾರೆ. ‌"ನಾನು ನನ್ನ ಕುಟುಂಬದೊಂದಿಗೆ ಇರಲು ಅವರಿಗೆ ಹಣ ನೀಡಬೇಕು, ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ವಿಡಿಯೊ ನೋಡಿ:

ಕುಟುಂಬವು ಅವಮಾನವನ್ನು ಎದುರಿಸಬಾರದು ಎಂಬ ಕಾರಣಕ್ಕೆ ತಮ್ಮ ಮನೆಯ ವಿಳಾಸವನ್ನು ಕೂಡ ನೀಡಲಿಲ್ಲ.‌ ಅವರು ಮದುವೆಯಾದ ಒಂದು ತಿಂಗಳೊಳಗೆ ಪತಿಯನ್ನು ಕಳೆದುಕೊಂಡಿದ್ದಾರಂತೆ. ಅದರ ನಂತರ ಅವರ ಜೀವನ ಬದಲಾಗಿ, ಅವರು ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಇವರ ಈ ಸಾಹಸದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 89ರ ವಯಸ್ಸಿ ನಲ್ಲಿ ಅಜ್ಜಿ ಮಾಡುತ್ತಿರುವ ಕೆಲಸಕ್ಕೆ ಹೆಚ್ಚಿನವರು ಹ್ಯಾಟ್ಸ್‌ಆಫ್‌ ಎಂದಿದ್ದಾರೆ.

ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು

ನೆಟ್ಟಿಗರೊಬ್ಬರು, ʼʼಈ ವಯಸ್ಸಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಅವರಿಂದ ಬಳೆ ಖರೀದಿಸಿದೆ. ಅವರು ಒಂದು ಬಳೆಯನ್ನು ಕೇವಲ 40 ರುಪಾಯಿಗೆ ಮಾರಾಟ ಮಾಡುತ್ತಾರೆ. ವಯಸ್ಸಾದವರಿಂದ ಖರೀದಿಸಿ, ಹುಡುಗರೇʼʼ ಎಂದು ಬರೆದುಕೊಂಡಿದ್ದಾರೆ. ಈ ವಯಸ್ಸಿನಲ್ಲೂ ದುಡಿದು ತಿನ್ನುವ ಅವರ ಛಲ ನಿಜಕ್ಕೂ ಮೆಚ್ಚುವಂತದ್ದುʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.