ಭಾರತದ ಮೇಲೆ ನಿಗಾ ಇಟ್ಟಿರುವ ಪಾಕಿಸ್ತಾನ? ಸಾಂಬಾದಲ್ಲಿ ಮತ್ತೊಂದು ಶಂಕಿತ ಡ್ರೋನ್ ಪತ್ತೆ
ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಇದರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೂ ಮುನ್ನ ಜನವರಿ 15 ರಂದು ಸಾಂಬಾದ ಐಬಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿತ್ತು. ಕೂಡಲೇ ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು ಮತ್ತು ಭದ್ರತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸಂಗ್ರಹ ಚಿತ್ರ -
ಕಾಶ್ಮೀರ: ಭಾರತ (India) ಮತ್ತು ಪಾಕಿಸ್ತಾನದ (Pakistan) ಗಡಿಯಲ್ಲಿ (international border) ಮತ್ತೆ ಪಾಕಿಸ್ತಾನದ ಡ್ರೋನ್ (drone) ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಜನವರಿ 15 ರಂದು ಕಾಶ್ಮೀರದ ಸಾಂಬಾದ (samba) ಐಬಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿತ್ತು. ಈ ಬಾರಿ ಪಾಕಿಸ್ತಾನಿ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಇದರ ಮೇಲೆ ಗುಂಡಿನ ದಾಳಿ (Shooting attack) ನಡೆಸಿದರು. ಡ್ರೋನ್ ಸುಮಾರು ಐದು ನಿಮಿಷಗಳ ಕಾಲ ಭದ್ರತಾ ಸಿಬ್ಬಂದಿಗೆ ಗೋಚರಿಸಿದ್ದು, ಬಳಿಕ ನಾಪತ್ತೆಯಾಗಿದೆ. ಡ್ರೋನ್‌ನ ಮೂಲ ಮತ್ತು ಚಲನೆಯನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರಿದು ತನಿಖೆ ನಡೆಸುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾದಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ತಾನಿ ಮಾನವರಹಿತ ವೈಮಾನಿಕ ವಾಹನ (UAV) ಪತ್ತೆಯಾಗಿದ್ದು ಇದರ ಮೇಲೆ ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ಈ ವರ್ಷದಲ್ಲಿ ಇಲ್ಲಿ ಕಂಡು ಬರುತ್ತಿರುವ ಎರಡನೇ ಘಟನೆ ಇದಾಗಿದೆ. ಗಣರಾಜ್ಯೋತ್ಸವಕ್ಕೆ ಕೆಲವು ದಿನ ಮೊದಲು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಡ್ರೋನ್ ವೊಂದನ್ನು ಕಂಡುಕೊಂಡಿದ್ದರು. ತಕ್ಷಣವೇ ಅಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು.
ದುಬೈ ಉದ್ಯಮಿಯಿಂದ ಬಂಪರ್ ಆಫರ್: ಮದುವೆಯಾಗುವ ಉದ್ಯೋಗಿಗಳಿಗೆ 12.5 ಲಕ್ಷ ರುಪಾಯಿ ಉಡುಗೊರೆ
ಇದಕ್ಕೂ ಮೊದಲು ಜನವರಿ 15 ರಂದು ಸಾಂಬಾದ ಐಬಿಯಲ್ಲಿ ಮತ್ತೊಂದು ಶಂಕಿತ ಪಾಕಿಸ್ತಾನಿ ಡ್ರೋನ್ ಕಂಡು ಬಂದಿತ್ತು. ತಕ್ಷಣವೇ ಅಧಿಕಾರಿಗಳು ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದರು. ಘಟನೆಯ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಇಲ್ಲಿ ಪಾಕಿಸ್ತಾನದ ಡ್ರೋನ್ ಗಳು ಹಾರುತ್ತಿರುವುದನ್ನು ಭಾರತವು ಗಮನಿಸಿದೆ. ಪಶ್ಚಿಮ ಮುಂಭಾಗದಲ್ಲಿನ ಭದ್ರತಾ ಸವಾಲುಗಳನ್ನು ಪರಿಹರಿಸಲಾಗುತ್ತಿದ್ದರೂ ಇಂತಹ ಚಟುವಟಿಕೆ ಸ್ವೀಕಾರಾರ್ಹವಲ್ಲಎಂದು ಹೇಳಿದರು.
ಈ ಬಗ್ಗೆ ನವದೆಹಲಿ ಈಗಾಗಲೇ ಇಸ್ಲಾಮಾಬಾದ್‌ಗೆ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದೊಂದಿಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದ ಮಾತುಕತೆಗಳು ನಡೆದಿವೆ ಎಂದು ತಿಳಿಸಿದರು.
Doomsday Clock: ಮಧ್ಯರಾತ್ರಿಯ ಹತ್ತಿರಕ್ಕೆ ಬಂದ ಡೂಮ್ಸ್‌ಡೇ ಗಡಿಯಾರ; ಇದು ವಿಶ್ವದ ವಿನಾಶದ ಮುನ್ಸೂಚನೆಯೇ?
ಪಾಕಿಸ್ತಾನವು ತನ್ನ ಡ್ರೋನ್‌ಗಳನ್ನು ನಿಯಂತ್ರಿಸಲು ಸೂಚಿಸಲಾಗಿದೆ. ಭಾರತದ ಸೈನ್ಯವು ಸಂಪೂರ್ಣವಾಗಿ ಜಾಗರೂಕವಾಗಿದೆ. ಶತ್ರುಗಳ ಯಾವುದೇ ದಾಳಿಯನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದ ಅವರು, ಕಾಶ್ಮೀರದಲ್ಲಿ ಕಂಡು ಬಂದಿರುವ ಯುಎವಿಗಳು ಭಾರತದ ಚಟುವಟಿಕೆಯನ್ನು ಪರಿಶೀಲಿಸಲು ನಿಯೋಜಿಸಲಾದ ಸಣ್ಣ, ರಕ್ಷಣಾತ್ಮಕ ಡ್ರೋನ್‌ಗಳಂತಿವೆ ಎಂದರು.