ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲೈಂಗಿಕ ಕಾಯಿಲೆಗೆ ತುತ್ತಾಗಿರುವ ಬಿಲ್ ಗೇಟ್ಸ್; ಜೆಫ್ರಿ ಎಪ್ಸ್ಟೀನ್ ಪ್ರಕರಣದಲ್ಲಿ ಬಯಲಾಗಿದೆ ರಹಸ್ಯ

ರಷ್ಯಾದ ಹುಡುಗಿಯರು, ಗುಪ್ತ ರೋಗ, ಹೆಂಡತಿಗೆ ಮೋಸ..ವಿಶ್ವದ ಶ್ರೀಮಂತ ವ್ಯಕ್ತಿಯೊಬ್ಬರ ಇನ್ನೊಂದು ಮುಖವನ್ನು ಅನಾವರಣ ಮಾಡಿದೆ ಜೆಫ್ರಿ ಎಪ್ಸ್ಟೀನ್ ಪ್ರಕರಣ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ರಹಸ್ಯ ದಾಖಲೆಗಳಲ್ಲಿ ಬಿಲ್ ಗೇಟ್ಸ್ ಅವರಿಗೆ ಸಂಬಂಧಿಸಿದ ಹಲವು ರಹಸ್ಯಗಳು ಬಹಿರಂಗವಾಗಿವೆ.

ವಿಶ್ವದ ಶ್ರೀಮಂತ ವ್ಯಕ್ತಿಯ ಇನ್ನೊಂದು ಮುಖ ಬಯಲು

ಸಂಗ್ರಹ ಚಿತ್ರ -

ವಾಷಿಂಗ್ಟನ್: ಅಮೆರಿಕದ ನ್ಯಾಯಾಂಗ ಇಲಾಖೆ (US Department of Justice) ಬಿಡುಗಡೆ ಮಾಡಿರುವ ಜೆಫ್ರಿ ಎಪ್ಸ್ಟೀನ್‌ಗೆ (Jeffrey Epstein case) ಸಂಬಂಧಿಸಿದ ದಾಖಲೆಗಳಲ್ಲಿ ವಿಶ್ವದ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ (Microsoft co-founder) ಬಿಲ್ ಗೇಟ್ಸ್ (Bill Gates) ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಗೊಳಿಸಿದೆ. ಜೆಫ್ರಿ ಎಪ್ಸ್ಟೀನ್ ಪ್ರಕರಣದಲ್ಲಿ ಬಿಡುಗಡೆಯಾದ 3 ಮಿಲಿಯನ್‌ಗಿಂತಲೂ ಹೆಚ್ಚು ಕಡತಗಳಲ್ಲಿ ಬಿಲ್ ಗೇಟ್ಸ್ ಲೈಂಗಿಕವಾಗಿ ಹರಡುವ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ರಷ್ಯಾದ (Russia) ಹುಡುಗಿಯರೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಕೂಡ ಇಮೇಲ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಾಖಲೆಯನ್ನು ನಾಶ ಮಾಡಲು ಜೆಫ್ರಿ ಎಪ್ಸ್ಟೀನ್‌ಗೆ ಬೆದರಿಕೆ ಕೂಡ ಹಾಕಲಾಗಿತ್ತು ಎನ್ನಲಾಗಿದೆ.

2013ರ ಜುಲೈನಲ್ಲಿ ಜೆಫ್ರಿ ಎಪ್ಸ್ಟೀನ್ ಗೆ ದೀರ್ಘ ಇಮೇಲ್ ಕಳುಹಿಸಿದ್ದ ಬಿಲ್ ಗೇಟ್ಸ್, ಇದರಲ್ಲಿ ಲೈಂಗಿಕವಾಗಿ ಹರಡುವ ರೋಗಗಳಿಗೆ ಸಂಬಂಧಿಸಿದ ಇಮೇಲ್‌ಗಳನ್ನು ಅಳಿಸಲು ವಿನಂತಿಸಿದ್ದಾರೆ. ಇದು ಗೇಟ್ಸ್ ತಮ್ಮಿಂದ ದೂರವಾಗಲು ಪ್ರಾರಂಭಿಸುವುದಕ್ಕಿಂತಲೂ ಮೊದಲಿನದ್ದು ಎಂದು ಎಪ್ಸ್ಟೀನ್‌ ಹೇಳಿದ್ದಾರೆ.

ಪಾಕಿಸ್ತಾನದ ಮದುವೆ ಸಮಾರಂಭದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ ಸಾವಿನ ಸಂಖ್ಯೆ

ರಷ್ಯಾ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಬಿಲ್ ಗೇಟ್ಸ್, ಲೈಂಗಿಕವಾಗಿ ಹರಡುವ ರೋಗ (STD) ಗೆ ತುತ್ತಾಗಿದ್ದರು. ಇದು ಪತ್ನಿ ಮೆಲಿಂಡಾ ಗೇಟ್ಸ್ ತಿಳಿಯಬಾರದು ಎಂದು ಹೇಳಿ ಗೌಪ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಪತ್ನಿಯನ್ನು ಕೊಲ್ಲಲು ಔಷಧಗಳ ಬಗ್ಗೆಯೂ ಕೇಳಿದ್ದರು ಎಂದು ಎಪ್ಸ್ಟೀನ್ ಹೇಳಿದ್ದಾರೆ.



ಎಪ್ಸ್ಟೀನ್ ಕಡತದಲ್ಲಿ ಗೇಟ್ಸ್ ಅವರ ಮಾಜಿ ಸಲಹೆಗಾರ ಬೋರಿಸ್ ನಿಕೋಲಿಕ್ ಹೆಸರು ಕೂಡ ಇದೆ. ಗೇಟ್ಸ್ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿರುವ ನಿಕೋಲಿಕ್ ರಾಜೀನಾಮೆ ಪತ್ರದಲ್ಲಿ ಅನೈತಿಕ ಮಾತ್ರವಲ್ಲ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಿರುವುದಾಗಿ ಹೇಳಿಕೊಂಡಿದ್ದರು. ಬಿಲ್ ಗೇಟ್ಸ್‌ಗಾಗಿ ಅವರು ರಷ್ಯಾದ ಮಹಿಳೆಯರನ್ನು ವ್ಯವಸ್ಥೆ ಮಾಡಲು, ಮಾದಕ ದ್ರವ್ಯಗಳನ್ನು ತಲುಪಿಸಲು ಮತ್ತು ಅಕ್ರಮ ಟ್ರಸ್ಟ್‌ಗಳನ್ನು ರಚಿಸಲು ಸಹಾಯ ಮಾಡಿರುವುದಾಗಿ ಆರೋಪಿಸಿದ್ದಾರೆ.

ಬಿಲ್ ಗೇಟ್ಸ್ ಬಗ್ಗೆ ಸತ್ಯ ತಿಳಿದ ಬಳಿಕ ಅವರೊಂದಿಗೆ ಮೆಲಿಂಡಾ 2021ರಲ್ಲಿ ವಿಚ್ಛೇದನ ಪಡೆದಿದ್ದರು. ಬಿಲ್ ಗೇಟ್ಸ್ ಜೊತೆ ತಾವು ಯಾವುದೇ ರೀತಿಯಲ್ಲಿ ಸ್ನೇಹ ಹೊಂದಿರಲಿಲ್ಲ ಎಂದು ಹೇಳಿದ್ದರೂ ಇದು ಸತ್ಯಕ್ಕೆ ದೂರವಾಗಿದೆ. 2013ರ ಮಾರ್ಚ್ ನಲ್ಲಿ ಎಪ್ಸ್ಟೀನ್ ಅವರ ಖಾಸಗಿ ಜೆಟ್‌ನಲ್ಲಿ ಬಿಲ್ ಗೇಟ್ಸ್ ಪ್ರಯಾಣಿಸಿದ್ದಾರೆ. ಅಲ್ಲದೇ ಎಪ್ಸ್ಟೀನ್ ಅವರ ಮ್ಯಾನ್‌ಹ್ಯಾಟನ್ ಟೌನ್‌ಹೌಸ್‌ನಲ್ಲಿ ಹಲವಾರು ಬಾರಿ ತಡರಾತ್ರಿವರೆಗೂ ಗೇಟ್ಸ್ ತಂಗಿದ್ದರು. 2019ರಲ್ಲಿ ಜೆಫ್ರಿ ಎಪ್ಸ್ಟೀನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆರೋಪದ ಬಗ್ಗೆ ಗೇಟ್ಸ್ ಹೇಳಿದ್ದೇನು?

ಎಪ್ಸ್ಟೀನ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಲ್ ಗೇಟ್ಸ್, ಇದು ಸಂಪೂರ್ಣ ಸುಳ್ಳು. ಎಪ್ಸ್ಟೀನ್ ಅವರು ಗೇಟ್ಸ್‌ನೊಂದಿಗೆ ನಿರಂತರ ಸಂಬಂಧವನ್ನು ಹೊಂದಿರಲಿಲ್ಲ. ಗೇಟ್ಸ್ ಮಾನಹಾನಿ ಮಾಡಲು ಇವರು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಟೆಹ್ರಾನ್ ಮೇಲಿನ ಯಾವುದೇ ದಾಳಿ ನಮ್ಮ ವಿರುದ್ದದ ಸಂಪೂರ್ಣ ಯುದ್ಧ ಎಂದು ಪರಿಗಣಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎಚ್ಚರಿಕೆ

ನೈತಿಕವಾಗಿ ಸೂಕ್ತವಲ್ಲದ ವಿಷಯಗಳಲ್ಲಿ ಭಾಗವಹಿಸಲು ನನ್ನನ್ನು ಕೇಳಲಾಗಿದೆ ಮತ್ತು ತಪ್ಪಾಗಿ ಅದನ್ನು ಒಪ್ಪಿಕೊಂಡಿರುವುದಾಗಿ ಹೇಳಿರುವ ಗೇಟ್ಸ್, ಕಾನೂನುಬಾಹಿರವಾದ ಕಾರ್ಯಗಳನ್ನು ಮಾಡಲು ಪದೇ ಪದೇ ಕೇಳಲಾಗಿದೆ. ರಷ್ಯಾದ ಹುಡುಗಿಯರೊಂದಿಗೆ ಸಂಬಂಧ ಬೆಳೆಸಲು ಮಾದಕ ದ್ರವ್ಯಗಳನ್ನು ನೀಡಲಾಗಿದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ, ನನ್ನ ಜೀವನವನ್ನು ಮುಂದುವರಿಸಲು ಸಹಾಯ ಮಾಡಿದ ಸ್ನೇಹಿತರು, ಸಹೋದ್ಯೋಗಿಗಳಿಗೆ ನಾನು ಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.