ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi In Mauritius : ಮಾರಿಷಸ್​​ನಲ್ಲಿ ಪ್ರಧಾನಿ ಮೋದಿ; ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ಬಂದಿಳಿದಿದ್ದಾರೆ. ಮಾರ್ಚ್ 12ರಂದು ನಡೆಯುವ ರಾಷ್ಟ್ರೀಯ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾರಿಷಸ್‌ನ ಪ್ರಧಾನಿ ನವೀನಚಂದ್ರ ರಾಮ್‌ಗೂಲಂ ಮೋದಿ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ಮಾರಿಷಸ್​​ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಮಾರಿಷಸ್​​ನಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

Profile Vishakha Bhat Mar 11, 2025 10:59 AM

ಪೋರ್ಟ್‌ ಲೂಯಿಸ್‌ : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ಬಂದಿಳಿದಿದ್ದಾರೆ. ಮಾರ್ಚ್ 12ರಂದು ನಡೆಯುವ ರಾಷ್ಟ್ರೀಯ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾರಿಷಸ್‌ನ ಪ್ರಧಾನಿ ನವೀನಚಂದ್ರ ರಾಮ್‌ಗೂಲಂ ಮೋದಿ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಪ್ರಧಾನಿ ಮೋದಿ ಅವರು 2 ದಿನಗಳ ಭೇಟಿಗೆ ಮಾರಿಷಸ್​ಗೆ ತೆರಳಿದರು. ಅಲ್ಲಿನ ಪ್ರಧಾನಿ ಮತ್ತು ಗಣ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ಭಾರತ-ಮಾರಿಷಸ್​ನ ಶಾಶ್ವತ ಸಂಬಂಧಗಳನ್ನು ಬಲಪಡಿಸಲಿದೆ ಎಂದು ಟ್ವೀಟ್‌ ಮಾಡಿದೆ.



ಪ್ರಧಾನಿ ಮಾರಿಷಸ್‌ನ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದು, ಸಾಮರ್ಥ್ಯ ವೃದ್ಧಿ, ವ್ಯಾಪಾರ ಕ್ಷೇತ್ರಗಳಲ್ಲಿ ನಡೆಸಲಿದ್ದು, ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅವರು ಸಾಮರ್ಥ್ಯ ವೃದ್ಧಿಯಿಂದ ಹಿಡಿದು ಸಮುದಾಯ ಸಂಬಂಧಿತ ಮೂಲಸೌಕರ್ಯದವರೆಗೆ ಭಾರತ ಅನುದಾನಿತ 20 ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ ಹಾಗೂ ಮಾರಿಷಸ್‌ ಪ್ರಧಾನಿ ಜಂಟಿಯಾಗಿ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಟ್ಟಡ ನಿರ್ಮಾಣವು ಅಂದಾಜು 4.5 ಮಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚದಲ್ಲಿ ಪೂರ್ಣಗೊಂಡಿದೆ.



"ಮಾರಿಷಸ್‌ನಲ್ಲಿ ಭಾರತೀಯ ಸಮುದಾಯದಿಂದ ದೊರೆತ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಭಾವುಕನಾಗಿದ್ದೇನೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳೊಂದಿಗಿನ ಅವರ ಬಲವಾದ ಸಂಪರ್ಕವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಇತಿಹಾಸ ಮತ್ತು ಹೃದಯದ ಈ ಬಂಧವು ತಲೆಮಾರುಗಳಿಂದ ಬಂದಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿಯವರು ಈ ಹಿಂದೆ 2015 ಮತ್ತು 1998 ರಲ್ಲಿ ಮಾರಿಷಸ್‌ಗೆ ಭೇಟಿ ನೀಡಿದ್ದರು. 1998 ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮೋಕಾದಲ್ಲಿ ನಡೆದ ಅಂತರರಾಷ್ಟ್ರೀಯ ರಾಮಾಯಣ ಸಮ್ಮೇಳನಕ್ಕೆ ತೆರಳಿದ್ದರು. 2015 ರಲ್ಲಿ ಭಾರತೀಯ ಪ್ರಧಾನ ಮಂತ್ರಿಯಾಗಿ ಪ್ರವಾಸ ಕೈಗೊಂಡಿದ್ದಾಗ, ಮೋದಿ ಅವರು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಡಲ ಸಹಕಾರದ ಸಿದ್ಧಾಂತವಾದ ಸಾಗರ ಅನ್ನು ಘೋಷಿಸಿದ್ದರು.