ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರವಾಸಿಗರ ಬೇಜವಾಬ್ದಾರಿಗೆ ಸುಟ್ಟು ಕರಕಲಾಯ್ತು ಚೀನಾದ ಪುರಾತನ ದೇಗುಲ!

ಚೀನಾದ ಜಿಯಾಂಗ್ಸು ಪ್ರಾಂತ್ಯದ ಫೆಂಗ್‌ವಾಂಗ್ ಪರ್ವತದ ಇಳಿಜಾರು ಪ್ರದೇಶದಲ್ಲಿರುವ ಅತ್ಯಂತ ಜನಪ್ರಿಯ ದೇಗುಲದಲ್ಲಿ ಪ್ರವಾಸಿಗರು ಹಚ್ಚಿದ ಮೇಣದ ಬತ್ತಿ ಮತ್ತು ಧೂಪದ್ರವ್ಯದಿಂದಾಗಿ ಸಂಪೂರ್ಣ ದೇವಾಲಯಕ್ಕೆ ಬೆಂಕಿ ಆವರಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇದು ಪ್ರವಾಸಿ ತಾಣಗಳ ಸುರಕ್ಷತೆ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

ಚೀನಿ ದೇವಾಲಯ ಬೆಂಕಿ ಹಚ್ಚಿದ ಪ್ರವಾಸಿಗರು

ಬೆಂಕಿಗೆ ಆಹುತಿಯಾದ ಚೀನಿ ದೇವಾಲಯ (ಸಂಗ್ರಹ ಚಿತ್ರ) -

ಚೀನಾ: ಪ್ರವಾಸಿಗರ ಬೇಜವಾಬ್ದಾರಿಯಿಂದಾಗಿ ಕಳೆದ ವಾರ ಚೀನಾದ (China) ಜಿಯಾಂಗ್ಸು ಪ್ರಾಂತ್ಯದ (Jiangsu Province) ಫೆಂಗ್‌ವಾಂಗ್ ಪರ್ವತದ (Wenchang Pavilion) ಇಳಿಜಾರು ಪ್ರದೇಶದಲ್ಲಿರುವ ಅತ್ಯಂತ ಜನಪ್ರಿಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರವಾಸಿಗರು ಹಚ್ಚಿದ ಮೇಣದ ಬತ್ತಿ ಮತ್ತು ಧೂಪದ್ರವ್ಯದಿಂದಾಗಿ ಸಂಪೂರ್ಣ ದೇವಾಲಯಕ್ಕೆ ಬೆಂಕಿ (Fire) ಆವರಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಇದು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ನಡವಳಿಕೆ ಮತ್ತು ಸುರಕ್ಷತೆ ಕುರಿತು ಚರ್ಚೆಗೆ ನಾಂದಿ ಹಾಡಿದೆ.

ಚೀನಾದ ಅತ್ಯಂತ ಸುಂದರ ಪರ್ವತ ದೇವಾಲಯ ಎಂದೇ ಕರೆಯಲ್ಪಡುವ ಜಿಯಾಂಗ್ಸು ಪ್ರಾಂತ್ಯದ ಫೆಂಗ್‌ವಾಂಗ್ ಪರ್ವತದ ಇಳಿಜಾರು ಪ್ರದೇಶದಲ್ಲಿರುವ ವೆನ್‌ಚಾಂಗ್ ಪೆವಿಲಿಯನ್‌ ದೇವಾಲಯದಲ್ಲಿ ನವೆಂಬರ್ 12ರಂದು ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಪ್ರವಾಸಿಗರು ಹಚ್ಚಿದ ಮೇಣದಬತ್ತಿ ಮತ್ತು ಧೂಪದ್ರವ್ಯಗಳಿಂದಾಗಿ ಬೆಂಕಿ ಸಂಪೂರ್ಣ ದೇವಾಲಯವನ್ನು ಆವರಿಸಿತ್ತು.

ಚೀನಾದ ಪರ್ವತ ದೇವಾಲಯದಲ್ಲಿ ಕಾಣಿಸಿಕೊಂಡ ಬೆಂಕಿಯ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಬೆಟ್ಟದ ತುದಿಯಲ್ಲಿರುವ ದೇವಾಲಯದ ಕಟ್ಟಡದಿಂದ ಬೆಂಕಿಯ ಎತ್ತರದ ಜ್ವಾಲೆಗಳು, ದಟ್ಟಣೆಯ ಕಪ್ಪು ಹೊಗೆ ಹೊರಹೊಮ್ಮುತ್ತಿರುವುದನ್ನು ಕಾಣಬಹುದು. ಇದು ಸ್ಥಳೀಯರಲ್ಲಿ ಮತ್ತು ಪ್ರವಾಸಿಗರಲ್ಲಿ ಕಳವಳವನ್ನು ಉಂಟು ಮಾಡಿತ್ತು.

ಈ ದೇವಾಲಯ ಯಾವುದೇ ಪ್ರಾಚೀನ ಹಿನ್ನಲೆ ಇಲ್ಲದೇ ಇದ್ದರೂ ಕೂಡ ಇದು ಫೆಂಗ್‌ವಾಂಗ್ ಪರ್ವತದ ಇಳಿಜಾರುಗಳಲ್ಲಿ ಸುತ್ತಾಡುವ ಸಂದರ್ಶಕರಿಗೆ ಅತ್ಯಂತ ಜನಪ್ರಿಯ ತಾಣವಾಗಿತ್ತು.

ಮೂರು ಅಂತಸ್ತಿನ ವೆನ್‌ಚಾಂಗ್ ಮಂಟಪವು ಬೆಂಕಿಗೆ ಶೀಘ್ರವಾಗಿ ಆಹುತಿಯಾಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಬೆಂಕಿಯಿಂದಾಗಿ ದೇವಾಲಯದ ಛಾವಣಿಯ ಭಾಗಗಳು ಕುಸಿಯುತ್ತಿರುವುದನ್ನು ಕಾಣಬಹುದು.



ಈ ದೇವಾಲಯವನ್ನು 2009ರಲ್ಲಿ ನಿರ್ಮಿಸಲಾಗಿತ್ತು. ಹತ್ತಿರದ ಯೋಂಗ್ಕಿಂಗ್ ದೇವಾಲಯವು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಶತಮಾನಗಳಷ್ಟು ಹಿಂದಿನದ್ದಾಗಿರುವ ಈ ದೇವಾಲಯದ ಮಂಟಪವು ಇತ್ತೀಚೆಗೆ ಪುನರ್ ನಿರ್ಮಾಣ ಮಾಡಲಾಗಿತ್ತು. ಅದರ ವಿನ್ಯಾಸ ಸಾಮಾನ್ಯವಾಜಿ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.

ತನಿಖೆಗೆ ಆದೇಶ

ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿತ್ತು. ತನಿಖಾಧಿಕಾರಿಗಳ ಪ್ರಾಥಮಿಕ ವರದಿಯ ಪ್ರಕಾರ ದೇವಾಲಯದಲ್ಲಿ ಸಂದರ್ಶಕರು ಉರಿಸಿದ ಮೇಣದಬತ್ತಿ ಮತ್ತು ಧೂಪದ್ರವ್ಯಗಳಿಂದಾಗಿ ದೇವಾಲಯಕ್ಕೆ ಬೆಂಕಿ ಆವರಿಸಿದೆ. ಇದು ಬೇಜವಾಬ್ದಾರಿಯ ನಡೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಪಾರಂಪರಿಕ ತಾಣ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ದೇವಾಲಯದ ಪುನಃಸ್ಥಾಪನೆಗೆ ಕ್ರಮ

ಶೀಘ್ರದಲ್ಲೇ ದೇವಾಲಯದ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಜಾರಿಗೆಗೊಳಿಸಲಾಗುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ಗನ್ಸು ಪ್ರಾಂತ್ಯದ ಶತಮಾನಗಳಷ್ಟು ಹಳೆಯದಾದ ಶಾಂದನ್ ಗ್ರೇಟ್ ಬುದ್ಧ ದೇವಾಲಯದಲ್ಲಿ ಉಂಟಾಗಿತ್ತು. ಅಲ್ಲಿ ಅಪಾರ ನಷ್ಟವಾಗಿತ್ತು.