ಇಥಿಯೋಪಿಯಾದ ಅತ್ಯುನ್ನತ ಗೌರವ ಪ್ರಶಸ್ತಿ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಸ್ವೀಕರಿಸಿದ ಪ್ರಧಾನಿ ಮೋದಿ
ಇಥಿಯೋಪಿಯಾ ರಾಷ್ಟ್ರದ ಅತ್ಯನ್ನತ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಲಾಯಿತು. ಅಡಿಸ್ ಅಬಾಬಾದ ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶೇಷ ಸಮಾರಂಭದಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಪ್ರಧಾನಿ ಮೋದಿ ಅವರಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
(ಸಂಗ್ರಹ ಚಿತ್ರ) -
ಅಡಿಸ್ ಅಬಾಬಾ: ಜೋರ್ಡಾನ್ (Jordan) ಜೊತೆಗೆ ಐದು ಪ್ರಮುಖ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಳಿಕ ಇಥಿಯೋಪಿಯಾಗೆ (Ethiopia) ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ರಾಷ್ಟ್ರದ ಅತ್ಯನ್ನತ ಪ್ರಶಸ್ತಿಯನ್ನು (Great Honor Nishan of Ethiopia award) ನೀಡಿ ಗೌರವಿಸಲಾಗಿದೆ. ನರೇಂದ್ರ ಮೋದಿ (PM Narendra Modi) ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಪ್ರಧಾನಿಯಾಗಿದ್ದಾರೆ. ಅಡಿಸ್ ಅಬಾಬಾದ ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿಯಾದ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರುಮಂಗಳವಾರ ಪ್ರದಾನ ಮಾಡಿದರು.
ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಕೈಜೋಡಿಸಿದ ಜೋರ್ಡಾನ್
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯಾಲಯ, ಭಾರತ ಮತ್ತು ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಪ್ರಧಾನಿ ಮೋದಿ ಅವರ ಅಸಾಧಾರಣ ಕೊಡುಗೆ ಮತ್ತು ಜಾಗತಿಕ ರಾಜಕಾರಣಿಯಾಗಿ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಈ ಪ್ರಶಸ್ತಿಯನ್ನು ಇಥಿಯೋಪಿಯಾ ನೀಡಿ ಗೌರವಿಸಿದೆ. ಜಾಗತಿಕ ಮಟ್ಟದ ನಾಯಕರು ಮತ್ತು ದೇಶದಮುಖ್ಯಸ್ಥರಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲ ನಾಯಕ ಪ್ರಧಾನಿ ಮೋದಿ ಎಂದು ತಿಳಿಸಿದೆ.
ጥልቅ የሆነውን 🇮🇳 - 🇪🇹 የሥልጣኔ ትስስር የሚያስታውስ ክብር።
— Randhir Jaiswal (@MEAIndia) December 16, 2025
ጠቅላይ ሚኒስትር @narendramodi በህንድ እና በኢትዮጵያ መካከል ያለውን የሁለትዮሽ ግንኙነት ለማጠናከር እና በራዕያዊ አመራራቸው ላበረከቱት ልዩ አስተዋጽኦ፤ በጠቅላይ ሚኒስትር ዶ/ር… pic.twitter.com/XrS5f2XWvO
ಪ್ರಶಸ್ತಿ ಸ್ವೀಕರಿಸಿ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇಥಿಯೋಪಿಯಾದ ಮಹಾನ್ ಆನರ್ ನಿಶಾನ್ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಗೌರವ ತಂದಿದೆ. ನಾನು ಇದನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮೋದಿ, ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ತಮಗೆ ದೊರೆತ ಅತ್ಯಂತ ಶ್ರೇಷ್ಠ ಗೌರವ. ಇದನ್ನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕಾರ ಮಾಡಿದ್ದೇನೆ. ಈ ಗೌರವಕ್ಕಾಗಿ ಪ್ರಧಾನಿ ಅಬಿ ಮತ್ತು ಇಥಿಯೋಪಿಯಾದ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅವರು ತಿಳಿಸಿದರು.
Goa Night Club Fire: ಲೂಥ್ರಾ ಸಹೋದರರು ಇಂದು ಭಾರತಕ್ಕೆ; ವಶಕ್ಕೆ ಪಡೆಯಲು ಗೋವಾ ಪೊಲೀಸರು ಸಿದ್ಧ
ಇದೇ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ಜ್ಞಾನದ ಮಹತ್ವದ ಬಗ್ಗೆಯೂ ಅವರು ಮಾಹಿತಿ ನೀಡಿದ ಅವರು, ಈ ಪ್ರಶಸ್ತಿಯು ಭಾರತ ಮತ್ತು ಇಥಿಯೋಪಿಯಾ ನಡುವಿನ ನಿಕಟ ಪಾಲುದಾರಿಕೆ ಮತ್ತು ಜಾಗತಿಕ ದಕ್ಷಿಣದ ಸಕಾರಾತ್ಮಕ ಕಾರ್ಯಸೂಚಿಯನ್ನು ಮುಂದುವರಿಸುವಲ್ಲಿ ಒಂದು ಮೈಲುಗಲ್ಲು ಎಂದು ಅವರು ಹೇಳಿದರು.