ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prince Jackson: ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಮೈಕೆಲ್ ಜಾಕ್ಸನ್ ಪುತ್ರ ಪ್ರಿನ್ಸ್

ಮೈಕಲ್ ಜಾಕ್ಸನ್ ಮಗ ಪ್ರಿನ್ಸ್ ಈಗ ಹಸಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 8 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ಮೋಲಿ ಶಿರ್ಮಾಂಗ್ ಅವರೊಂದಿಗೆ ಪ್ರಿನ್ಸ್ ಜಾಕ್ಸನ್ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

8 ವರ್ಷಗಳ ಪ್ರೀತಿಗೆ ಮುದ್ರೆಯೊತ್ತಿದ ಮೈಕಲ್ ಜಾಕ್ಸನ್ ಮಗ

ವಾಷಿಂಗ್ಟನ್‌: ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ (Pop singer Michael Jackson) ಅವರ ಹಿರಿಯ ಮಗ ಪ್ರಿನ್ಸ್ ಜಾಕ್ಸನ್ (Prince Jackson) ತಮ್ಮ ದೀರ್ಘ ಕಾಲದ ಗೆಳತಿ ಮೋಲಿ ಶಿರ್ಮಾಂಗ್ (Molly Schirmang) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಪ್ರಿನ್ಸ್ ತಮ್ಮ ಗೆಳತಿ ಮೋಲಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಇದೀಗ ಇವರು ಆಗಸ್ಟ್ 26ರಂದು ನಿಶ್ಚಿತಾರ್ಥ ಮಾಡಿಕೊಂಡರು. ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಂಟು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

8 ವರ್ಷಗಳ ಕಾಲ ಒಟ್ಟಿಗೆ ಇದ್ದ ಅನಂತರ ತಮ್ಮ ಸಂಬಂಧದಲ್ಲಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ಇದರೊಂದಿಗೆ ವಿವಾಹ ನಿಶ್ಚಿತಾರ್ಥದ ಹಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಬಿಳಿ ಬಟ್ಟೆಗಳಲ್ಲಿ ದಂಪತಿ ಸೂರ್ಯನ ಬೆಳಕಿನಲ್ಲಿರುವ ಉದ್ಯಾನವನದಲ್ಲಿ ಭಾವೋದ್ರಿಕ್ತವಾಗಿ ಚುಂಬನವನ್ನು ಹಂಚಿಕೊಳ್ಳುವ ಫೋಟೊವನ್ನು ಶೇರ್‌ ಮಾಡಿದ್ದಾರೆ. ಇದರೊಂದಿಗೆ ಪ್ರಿನ್ಸ್ ಹೀಗೆ ಬರೆದಿದ್ದಾರೆ.

ಎಂಟು ವರ್ಷಗಳ ಅನಂತರ ಮೋಲಿ ಮತ್ತು ನಾನು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಅದ್ಭುತ ನೆನಪುಗಳನ್ನು ಕಟ್ಟಿಕೊಂಡಿದ್ದೇವೆ. ನಾವು ಪ್ರಪಂಚವನ್ನು ಸುತ್ತಿದ್ದೇವೆ, ಪದವಿ ಪಡೆದಿದ್ದೇವೆ ಮತ್ತು ಒಟ್ಟಿಗೆ ತುಂಬಾ ಬೆಳೆದಿದ್ದೇವೆ. ನಾವು ಬೆಳೆಯುತ್ತಲೇ ಇರುವುದರಿಂದ ಮತ್ತು ಉತ್ತಮ ನೆನಪುಗಳನ್ನು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ಜೀವನದ ಈ ಮುಂದಿನ ಅಧ್ಯಾಯಕ್ಕಾಗಿ ನಾನು ಉತ್ಸುಕನಾಗಿದ್ದೇನೆ... ಎಂದು ಹೇಳಿದ್ದಾರೆ.

ಈ ಫೋಟೊಗಳಲ್ಲಿ ಪ್ರಿನ್ಸ್ ಜಾಕ್ಸನ್ ಮತ್ತು ಮೋಲಿ ಕ್ಯಾಲಿಫೋರ್ನಿಯಾದ ಎನ್ಸಿನೊದಲ್ಲಿರುವ ಜಾಕ್ಸನ್ ಕುಟುಂಬದ ಹೇವೆನ್‌ಹರ್ಸ್ಟ್ ಎಸ್ಟೇಟ್‌ನ ಹೊರಗೆ ತಮ್ಮ 95 ವರ್ಷದ ಅಜ್ಜಿ ಕ್ಯಾಥರೀನ್ ಜಾಕ್ಸನ್ ಅವರೊಂದಿಗೆ ಕುಳಿತಿರುವುದು ಕಂಡುಬಂದಿದೆ. ಜೋಡಿಯು ಲಾಸ್ ಏಂಜಲೀಸ್‌ನ ಲೊಯೊಲಾ ಮೇರಿಮೌಂಟ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಫೋಟೊವನ್ನೂ ಹಂಚಿಕೊಂಡಿದೆ.

ಈ ಪೋಸ್ಟ್‌ನಲ್ಲಿ ಅವರಿಬ್ಬರು ಒಟ್ಟಿಗೆ ಕಯಾಕಿಂಗ್, ಸ್ಕೂಟರ್ ಸವಾರಿ, ಪಾದಯಾತ್ರೆ ಮತ್ತು ಒಟ್ಟಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಚಿತ್ರಗಳಿವೆ.

ಇದನ್ನೂ ಓದಿ: Road Accident: ಭೀಕರ ಅಪಘಾತ: ಆಟೋಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಮಗು ಸೇರಿ 6 ಜನ ಸಾವು

ದಂಪತಿಗೆ ಇದರೊಂದಿಗೆ ಸಾಕಷ್ಟು ಅಭಿನಂದನಾ ಸಂದೇಶಗಳು ಬಂದಿವೆ. ಟಿಟೊ ಜಾಕ್ಸನ್ ಅವರ ಪುತ್ರ ಟ್ಯಾರಿಲ್ ಜಾಕ್ಸನ್ ಕೂಡ ಶುಭಾಶಯ ತಿಳಿಸಿದ್ದಾರೆ. ನೀವಿಬ್ಬರೂ ತುಂಬಾ ಸುಂದರ ಮತ್ತು ವಿಶೇಷ ವ್ಯಕ್ತಿಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಾನು ಯಾವಾಗಲೂ ನಿಮಗಾಗಿ ಇರುತ್ತೇನೆ ಎಂದು ಹೇಳಿದ್ದಾರೆ. ಟೋಯಾ ಜಾಕ್ಸನ್ ಕೂಡ ಮೋಲಿಗಾಗಿ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.