ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vladimir Putin: ಉಕ್ರೇನ್‌ ಯುದ್ಧದ ಬಗ್ಗೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಪುಟಿನ್‌ ಸಿದ್ದ- ರಷ್ಯಾದಿಂದ ಮಹತ್ವದ ಘೋಷಣೆ

ಉಕ್ರೇನ್ ಯುದ್ಧದ ವಿಷಯದ ಬಗ್ಗೆ ಸೌದಿ ಅರೇಬಿಯಾದಲ್ಲಿ ಅಮೆರಿಕ-ರಷ್ಯಾ ನಿಯೋಗದ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ವ್ಲಾಡಿಮಿರ್ ಪುಟಿನ್ ಸಿದ್ಧ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಇನ್ನು ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಸ್ವತಃ ಪುಟಿನ್‌ ಕೂಡ ಹೇಳಿದ್ದಾರೆ.

ಉಕ್ರೇನ್‌ ಅಧ್ಯಕ್ಷರ ಜೊತೆ ಮಾತುಕತೆಗೆ ಪುಟಿನ್‌ ಸಿದ್ಧ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್

Profile Deekshith Nair Feb 18, 2025 5:43 PM

ಮಾಸ್ಕೋ:‌ ಉಕ್ರೇನ್(Ukrainian) ಸಮರದ ಕುರಿತು ಸೌದಿ ಅರೇಬಿಯಾದಲ್ಲಿ ಅಮೆರಿಕ-ರಷ್ಯಾ ನಿಯೋಗದ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ(Zelensky) ಜೊತೆ ಮಾತುಕತೆ ನಡೆಸಲು ವ್ಲಾಡಿಮಿರ್ ಪುಟಿನ್(Vladimir Putin) ಸಿದ್ಧ ಎಂದು ಕ್ರೆಮ್ಲಿನ್(Kremlin) ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಇನ್ನು ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಸ್ವತಃ ಪುಟಿನ್‌ ಕೂಡ ಹೇಳಿದ್ದಾರೆ. ಆದರೆ ಝೆಲೆನ್ಸ್ಕಿ ಈ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ರಷ್ಯಾ ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದಲ್ಲಿ ಅಮೆರಿಕ ಮತ್ತು ರಷ್ಯಾದ ರಾಜತಾಂತ್ರಿಕರು ಮಾತುಕತೆ ನಡೆಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ದಿರಿಯಾ ಅರಮನೆಯಲ್ಲಿ ರಷ್ಯಾ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಉಕ್ರೇನ್‌ನಲ್ಲಿ ಸಂಬಂಧಗಳನ್ನು ಸುಧಾರಿಸುವ ಮತ್ತು ಯುದ್ಧ ವಿರಾಮದ ಕುರಿತು ಮಾತುಕತೆಗಳನ್ನು ನಡೆಸಿದ್ದಾರೆ. ರಷ್ಯಾ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ವಹಿಸಿದ್ದರು. ರಷ್ಯಾ ದೇಶದ ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ವಹಿಸಿದ್ದರು. ಈ ನಡುವೆ ಒಂದು ವೇಳೆ ಅಗತ್ಯವಿದ್ದರೆ” ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಕ್ರೆಮ್ಲಿನ್ ಮೂಲ ತಿಳಿಸಿದೆ.



ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಬೆನ್ನ ಹಿಂದೆ ಮಧ್ಯವರ್ತಿಗಳು ನಡೆಸುವ ಯಾವುದೇ ಶಾಂತಿ ಒಪ್ಪಂದಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Mahakumbh 2025: ಕುಂಭಮೇಳದಿಂದ ಭಕ್ತರ ಸಂಖ್ಯೆ ಏರಿಕೆ- ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನಕ್ಕೆ 6 ವಲಯಗಳು

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ಮಾತುಕತೆಗೆ ಸಿದ್ಧರಾಗಿದ್ದಾರೆ. ಟ್ರಂಪ್ ಅವರು ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೊಂದಿಗೂ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ಸಭೆಯು ಉಕ್ರೇನ್‌ ಸಂಘರ್ಷವನ್ನು ನಿಲ್ಲಿಸುವಲ್ಲಿ ಅಮೆರಿಕ ಕಳೆದ ಕೆಲವು ವರ್ಷಗಳಿಂದಲೂ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಟ್ರಂಪ್‌ ಇಬ್ಬರು ಉಭಯ ನಾಯಕರ ನಡುವೆ ಶಾಂತಿ ಒಪ್ಪಂದ ನಡೆಸಲಿದ್ದಾರೆ ಎನ್ನಲಾಗಿದೆ.