ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dalai Lama: ದಲೈ ಲಾಮಾ ಪುನರ್ಜನ್ಮವನ್ನು ಗುರುತಿಸುವ ಅಧಿಕಾರ ನಮಗೆ ಮಾತ್ರ ಇದೆ; ಚೀನಾದ ವಿದೇಶಾಂಗ ಸಚಿವ

ಮುಂದಿನ ದಲೈ ಲಾಮಾ ಅವರ ಪುನರ್ಜನ್ಮವನ್ನು ಚೀನಾದ ಕೇಂದ್ರ ಸರ್ಕಾರ ಅನುಮೋದಿಸಬೇಕು ಎಂದು ಚೀನಾ ಬುಧವಾರ ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಕೂಡ ಬೀಜಿಂಗ್ ಉತ್ತರಾಧಿಕಾರಿಯ ಗುರುತನ್ನು ಅನುಮೋದಿಸಬೇಕಾಗಿತ್ತು ಮತ್ತು ಅದನ್ನು ಶತಮಾನಗಳಷ್ಟು ಹಳೆಯದಾದ ಆಚರಣೆಯ ಮೂಲಕ ಚೀನಾದಲ್ಲಿ ಮಾಡಬೇಕಾಗಿತ್ತು ಮಾಡಬೇಕಿತ್ತು ಎಂದು ಹೇಳಿದೆ.

ಮುಂದಿನ ದಲೈ ಲಾಮಾ ಪುನರ್ಜನ್ಮವನ್ನು ಗುರುತಿಸುವ ಅಧಿಕಾರ ನಮ್ಮದು; ಚೀನಾ

Profile Vishakha Bhat Jul 2, 2025 3:21 PM

ಬೀಜಿಂಗ್‌: ಮುಂದಿನ ದಲೈ ಲಾಮಾ (Dalai Lama) ಅವರ ಪುನರ್ಜನ್ಮವನ್ನು ಚೀನಾದ ಕೇಂದ್ರ (China) ಸರ್ಕಾರ ಅನುಮೋದಿಸಬೇಕು ಎಂದು ಚೀನಾ ಬುಧವಾರ ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಕೂಡ ಬೀಜಿಂಗ್ ಉತ್ತರಾಧಿಕಾರಿಯ ಗುರುತನ್ನು ಅನುಮೋದಿಸಬೇಕಾಗಿತ್ತು ಮತ್ತು ಅದನ್ನು ಶತಮಾನಗಳಷ್ಟು ಹಳೆಯದಾದ ಆಚರಣೆಯ ಮೂಲಕ ಚೀನಾದಲ್ಲಿ ಮಾಡಬೇಕಾಗಿತ್ತು ಮಾಡಬೇಕಿತ್ತು ಎಂದು ಹೇಳಿದೆ. ಈ ಹಿಂದೆ ದಲೈಲ್‌ ಲಾಮಾ ಅವರು ತಮ್ಮ ಸಂಸ್ಥಯೇ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದರು.

ದಲೈ ಲಾಮಾ ಅವರು ಪುನರ್ಜನ್ಮ ಪಡೆಯುವುದಾಗಿ ಮತ್ತು ಅವರ ಲಾಭರಹಿತ ಸಂಸ್ಥೆಯು ತಮ್ಮ ಪುನರ್ಜನ್ಮವನ್ನು ಗುರುತಿಸುವ ಏಕೈಕ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಚೀನಾದಿಂದ ಈ ಹೇಳಿಕೆ ಬಂದಿದೆ. ಚೀನಾದ ಆಡಳಿತದ ವಿರುದ್ಧ ವಿಫಲ ದಂಗೆಯ ನಂತರ 1959 ರಲ್ಲಿ ಟಿಬೆಟ್‌ನಿಂದ ಭಾರತಕ್ಕೆ ಪಲಾಯನ ಮಾಡಿದ ದಲೈ ಲಾಮಾ ಅವರನ್ನು ಚೀನಾ ಪ್ರತ್ಯೇಕವಾದಿ ಎಂದು ಭಾವಿಸುತ್ತದೆ.

ಟಿಬೆಟಿಯನ್ ಸಂಪ್ರದಾಯಿಕ ನಂಬಿಕೆ ಪ್ರಕಾರ ಹಿರಿಯ ಬೌದ್ಧ ಸನ್ಯಾಸಿಯ ಆತ್ಮವು ಮರಣದ ಬಳಿಕ ಪುನರ್ಜನ್ಮ ಪಡೆಯುತ್ತದೆ. 1935ರ ಜುಲೈ 6ರಂದು ಈಶಾನ್ಯ ಟಿಬೆಟ್‌ನಲ್ಲಿರುವ ಕೃಷಿ ಕುಟುಂಬದಲ್ಲಿ ಜನಿಸಿದ ಲಾಮೋ ಧೋಂಡಪ್ ಎರಡೇ ವರ್ಷಕ್ಕೆ 13ನೇ ದಲೈ ಲಾಮಾ ಅವರಿಗೆ ಸೇರಿದ ಆಸ್ತಿಗಳನ್ನು ಸ್ಪಷ್ಟವಾಗಿ ಗುರುತಿಸಿದಾಗ ಇದೇ ಪುನರ್ಜನ್ಮ ಎಂದು ಟಿಬೆಟಿಯನ್ ಸರ್ಕಾರ ನೇಮಿಸಿದ ಶೋಧನಾ ತಂಡವು ದೃಢಪಡಿಸಿತು.

ಈ ಸುದ್ದಿಯನ್ನೂ ಓದಿ: Manmohan Singh: ಮನಮೋಹನ್‌ ಸಿಂಗ್‌ ನನಗೆ ಹಿರಿಯಣ್ಣನಂತಿದ್ದರು; ದಲೈಲಾಮಾ ಭಾವುಕ ಪತ್ರ

ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಭಾಗವಾಗಿ ಹಿರಿಯ ಸನ್ಯಾಸಿ ಮತ್ತು ಆಧ್ಯಾತ್ಮಿಕ ನಾಯಕರು ದಲೈ ಲಾಮಾ ಅವರ ಮರಣದ ಸಮಯದಲ್ಲಿ ಸಂಭವಿಸುವ ಕನಸುಗಳು, ಧಾರ್ಮಿಕ ಶಕುನಗಳು ಆಧರಿಸಿ ಪರಿಶೀಲಿಸುತ್ತಾರೆ. ಪುನರ್ಜನ್ಮವಾಗುವ ಸಾಧ್ಯತೆಗಳಿರುವ ಪ್ರದೇಶಗಗಳಲ್ಲಿ ಹುಡುಕಲು ತಂಡವನ್ನು ರಚಿಸಲಾಗುತ್ತದೆ. ಉತ್ತರಾಧಿಕಾರಿಯಾಗಬಹುದಾದ ಅಭ್ಯರ್ಥಿಗಳಿಗೆ ಹಿಂದಿನ ದಲೈ ಲಾಮಾ ಅವರ ವಸ್ತುಗಳನ್ನು ನೀಡಲಾಗುತ್ತದೆ. ಇವುಗಳನ್ನು ಮಗು ಸ್ಪಷ್ಟವಾಗಿ ಗುರುತಿಸಿದರೆ ಅದು ಅವರ ಪುನರ್ಜನ್ಮ ಎಂದು ನಂಬಲಾಗುತ್ತದೆ.