ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elon Musk: ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಅಡ್ಡಿ ಮಾಡಿದ್ದೇ ಬೈಡನ್‌; ಎಲಾನ್‌ ಮಸ್ಕ್‌ ಸ್ಫೋಟಕ ಹೇಳಿಕೆ

ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಇದೀಗ ಸ್ಪೇಸ್‌ ಎಕ್ಸ್‌ನ ಸಿಇಒ ಎಲಾನ್‌ ಮಸ್ಕ್‌ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ವಿರುದ್ಧ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಗಗನಯಾತ್ರಿಗಳನ್ನು ಮರಳಿ ಕರೆ ತರಲು ಜೋ ಬೈಡನ್‌ ನಿರಾಕರಿಸಿದ್ದರು ಎಂದು ಮಸ್ಕ್‌ ಹೇಳಿದ್ದಾರೆ.

ಬೈಡನ್‌ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಎಲಾನ್‌ ಮಸ್ಕ್‌!

ಎಲಾನ್‌ ಮಸ್ಕ್‌

Profile Vishakha Bhat Mar 19, 2025 12:11 PM

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಉಳಿದುಕೊಂಡ ನಂತರ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ನಾಸಾದ ಕ್ರೂ-9 ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅವರು ಮರಳಿದ್ದಾರೆ. ಬುಧವಾರ ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ನೌಕೆ ಯಶಸ್ವಿಯಾಗಿ ಕೆಳಗೆ ಇಳಿದಿದೆ. ಗಗನಯಾತ್ರಿಗಳು ಯಶಸ್ವಿಯಾಗಿ ಬಾಹ್ಯಾಕಾಶ ಯಾತ್ರೆಯನ್ನು ಮುಗಿಸಿದ್ದಕ್ಕಾಗಿ ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್‌ ಮಸ್ಕ್‌ ಅವರು ಅಭಿನಂದನೆ ತಿಳಿಸಿದ್ದಾರೆ. ಈ ಕಾರ್ಯಾಚರಣೆಗೆ ಸಾಥ್‌ ನೀಡಿದ್ದಕ್ಕಾಗಿ ಮಸ್ಕ್ ತಮ್ಮ ಸ್ನೇಹಿತ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದರು.

ಈ ಬಗ್ಗೆ ಎಲಾನ್‌ ಮಸ್ಕ್‌ ಅವರು ಟ್ವೀಟ್‌ ಮಾಡಿದ್ದಾರೆ.



ಸ್ಪೇಸ್‌ ಎಕ್ಸ್‌ ಹಾಗೂ ನಾಸಾದ ಜಂಟಿ ಕಾರ್ಯಾಚರಣೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಮಸ್ಕ್‌ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಪೇಸ್‌ಎಕ್ಸ್, ಮಾಜಿ ಅಧ್ಯಕ್ಷರ ಬಳಿ ಇಬ್ಬರು ಗಗನಯಾತ್ರಿಗಳನ್ನು ಮರಳಿ ಕರೆತರುವ ಬಗ್ಗೆ ಮಾತುಕತೆ ನಡೆಸಿತ್ತು. ಆದರೆ ಕೆಲ ರಾಜಕೀಯ ಕಾರಣದಿಂದಾಗಿ ಅಧ್ಯಕ್ಷರು ಅದನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ.



ನಾವು ಖಂಡಿತವಾಗಿಯೂ ಗಗನಯಾತ್ರಿಗಳನ್ನು ಮೊದಲೇ ಕರೆತರುವ ಯೋಜನೆಯನ್ನು ಹಾಕಿಕೊಂಡಿದ್ದೆವು. ಗಗನಯಾತ್ರಿಗಳು ಕೇವಲ ಎಂಟು ದಿನಗಳವರೆಗೆ ಅಲ್ಲಿ ಇರಬೇಕಿತ್ತು ಆದರೆ ಅವರು ಸುಮಾರು 10 ತಿಂಗಳ ಕಾಲ ಅಲ್ಲಿಯೇ ಸಿಲುಕ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸ್ಪೇಸ್‌ಎಕ್ಸ್ ಕೆಲವು ತಿಂಗಳುಗಳ ನಂತರ ಗಗನಯಾತ್ರಿಗಳನ್ನು ಕರೆತರಬಹುದಿತ್ತು. ನಾವು ಈ ಬಗ್ಗೆ ಬೈಡನ್‌ ಅವರ ಎದುರು ಈ ಪ್ರಸ್ತಾಪ ಕೂಡ ಮಾಡಿದ್ದೆವು. ಆದರೆ ಕೆಲ ರಾಜಕೀಯ ಕಾರಣಗಳಿಂದಾಗಿ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಜನವರಿಯ ಆರಂಭದಲ್ಲಿ ನಾನು ಈ ಬಗ್ಗೆ ಈಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಳಿ ಗಗನಯಾತ್ರಿಗಳನ್ನು ಭೂಮಿಗೆ ಕರೆ ತರುವ ವಿಷಯವನ್ನು ಚರ್ಚಿಸಿದ್ದೆ. ಅದಕ್ಕೆ ಅವರು ಅಸ್ತು ಎಂದು ಹೇಳಿದ್ದರು. ಇದೀಗ ನಾವು ಕೊಟ್ಟ ಮಾತಿನಂತೆ ನಮ್ಮ ಗಗನಯಾತ್ರಿಗಳನ್ನು ಕರೆತಂದಿದ್ದೇವೆ ಎಂದು ಮಸ್ಕ್‌ ಹೇಳಿದ್ದಾರೆ. ಬೈಡನ್‌ ಸರ್ಕಾರ 10 ತಿಂಗಳು ಆದರೂ ಎನೂ ಮಾಡದೇ ಇರುವುದು ಭಯಾನಕ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sunita Williams: ಭಾರತಕ್ಕೆ ಬಂದ್ರೆ ಸಮೋಸ ಪಾರ್ಟಿ ಗ್ಯಾರಂಟಿ...! ಸುನಿತಾ ವಿಲಿಯಮ್ಸ್‌ ಕುಟುಂಬಸ್ಥರ ಸಂಭ್ರಮಾಚರಣೆ

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬೈಡನ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೈಡನ್‌ ಸರ್ಕಾರವು ನಮ್ಮ ಗಗನಯಾತ್ರಿಗಳಿಗೆ ಅನ್ಯಾಯ ಮಾಡಿತ್ತು. ಆದರೆ ನಾವು ಅವರನ್ನು ಮರಳಿ ಕರೆತಂದಿದ್ದೇವೆ ಎಂದು ಅವರು ಹೇಳಿದ್ದಾರೆ.