ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಭಾರತಕ್ಕೆ ಬಂದ್ರೆ ಸಮೋಸ ಪಾರ್ಟಿ ಗ್ಯಾರಂಟಿ...! ಸುನಿತಾ ವಿಲಿಯಮ್ಸ್‌ ಕುಟುಂಬಸ್ಥರ ಸಂಭ್ರಮಾಚರಣೆ

ಸುನಿತಾ ವಿಲಿಯಮ್ಸ್‌ ಅವರ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಬಗ್ಗೆ ಸುನಿತಾ ಅವರ ಅತ್ತಿಗೆ ಫಾಲ್ಗುಣಿ ಪಾಂಡ್ಯ ಸಂತಸ ಹಂಚಿಕೊಂಡಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ಸಮೋಸಾ ಸೇವಿಸಿದ ಮೊದಲ ಗಗನಯಾತ್ರಿ ಆಗಿರುವುದರಿಂದ, ಅವರಿಗಾಗಿ 'ಸಮೋಸಾ ಪಾರ್ಟಿ' ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಸುನಿತಾ ವಿಲಿಯಮ್ಸ್‌ಗೆ ಸಮೋಸ ಪಾರ್ಟಿ ನೀಡೋಕೆ ಪ್ಲ್ಯಾನ್‌!

Profile Rakshita Karkera Mar 19, 2025 11:50 AM

ವಾಷಿಂಗ್ಟನ್: ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಇಂದು ಮುಂಜಾನೆ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್‌(Sunita Williams)ಭೂಮಿಗೆ ಮರಳಿದ್ದು, ಕೋಟ್ಯಂತರ ಜನ ಸಂಭ್ರಮಿಸಿದ್ದಾರೆ. ಈ ನಡುವೆ ಸುನಿತಾ ವಿಲಿಯಮ್ಸ್‌ ಅವರ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಬಗ್ಗೆ ಸುನಿತಾ ಅವರ ಅತ್ತಿಗೆ ಫಾಲ್ಗುಣಿ ಪಾಂಡ್ಯ ಸಂತಸ ಹಂಚಿಕೊಂಡಿದ್ದು, ನಮ್ಮ ಕುಟುಂಬದ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಹೋಮ ಹವನ ನೆರವೇರಿಸಲು ನಾವು ಯೋಜಿಸಿದ್ದೇವೆ. ಕುಟುಂಬ ಸಮೇತ ನಾವೆಲ್ಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇವೆ. ಒಟ್ಟಿನಲ್ಲಿ ಸುನಿತಾ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಕ್ಕಾಗಿ ದೇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ಹೇಳಿದ್ದಾರೆ.

ಇನ್ನು ಸುನಿತಾ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆದರೆ ನಮಗೆ ನಿಖರವಾದ ದಿನಾಂಕ ಗೊತ್ತಿಲ್ಲ. ಆದರೆ ಭಾರತಕ್ಕೆ ಬಂದೇ ಬರುತ್ತಾರೆ. ಸುನಿತಾ ಪ್ರತಿಯೊಂದು ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಅವರು ನಮಗೆಲ್ಲರಿಗೂ ಮಾದರಿ. ಅವರ ಹುಟ್ಟುಹಬ್ಬದಂದು ಜನಪ್ರಿಯ ಭಾರತೀಯ ಸಿಹಿತಿಂಡಿ, ಕಾಜು ಕಟ್ಲಿಯನ್ನು ಅವರು ಕಳುಹಿಸಿದ್ದರು. ಸೆಪ್ಟೆಂಬರ್ 19 ರಂದು ಬಾಹ್ಯಾಕಾಶದಲ್ಲಿ ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನು ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ಸಮೋಸಾ ಸೇವಿಸಿದ ಮೊದಲ ಗಗನಯಾತ್ರಿ ಆಗಿರುವುದರಿಂದ, ಅವರಿಗಾಗಿ 'ಸಮೋಸಾ ಪಾರ್ಟಿ' ನೀಡಲು ಎದುರು ನೋಡುತ್ತಿದ್ದೇನೆ ಎಂದು ಫಾಲ್ಗುಣಿ ಅವರು ತಮಾಶೆಯ ಮಾತುಗಳನ್ನಾಡಿದರು. ಇನ್ನು ಅವರು ಭಾರತಕ್ಕೆ ಆಗಮಿಸುತ್ತಿದ್ದಂತೆ ಅವರು ಮತ್ತು ನಾನು ಸುದೀರ್ಘ ರಜೆ ತೆಗೆದುಕೊಂಡು ಸಾಕಷ್ಟು ಸಮಯ ಜತೆಗೆ ಕಳೆಯಲಿದ್ದೇವೆ ಎಂದುತಿಳಿಸಿದರು.

ಈ ಸುದ್ದಿಯನ್ನೂ ಓದಿ: Sunita Williams: ಬಾಹ್ಯಾಕಾಶದಿಂದ ಭೂಮಿಯೆಡೆಗೆ...17 ಗಂಟೆಗಳ ಜರ್ನಿ; ಸುನಿತಾ ವಿಲಿಯಮ್ಸ್‌ ಎಕ್ಸ್‌ಕ್ಲೂಸಿವ್‌ ಫೋಟೋಸ್‌ ಇಲ್ಲಿದೆ