Tallest bridge: ಚೀನಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತೀ ಎತ್ತರದ ಸೇತುವೆ
ವಿಜ್ಞಾನ, ತಂತ್ರಜ್ಞಾನ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿರುವ ಚೀನಾ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೊಂದು ಮಹತ್ವಪೂರ್ಣ ದಾಖಲೆಯಾಗಲಿದೆ. ಕಣಿವೆ ಪ್ರದೇಶಗಳಲ್ಲಿ ಹಲವಾರು ವಿಶಿಷ್ಟ ರೀತಿಯ ಸೇತುವೆಗಳನ್ನು ನಿರ್ಮಿಸಿ ದಾಖಲೆ ಮಾಡಿರುವ ಚೀನಾದಲ್ಲಿ ಇದೀಗ ವಿಶ್ವದ ಅತೀ ಎತ್ತರದ ಸೇತುವೆಯೊಂದು ನಿರ್ಮಾಣವಾಗುತ್ತಿದೆ.


ಚೀನಾ: ವಿಜ್ಞಾನ, ತಂತ್ರಜ್ಞಾನ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿರುವ ಚೀನಾ (china) ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೊಂದು ಮಹತ್ವಪೂರ್ಣ ದಾಖಲೆಯಾಗಲಿದೆ. ಕಣಿವೆ ಪ್ರದೇಶಗಳಲ್ಲಿ ಹಲವಾರು ವಿಶಿಷ್ಟ ರೀತಿಯ ಸೇತುವೆಗಳನ್ನು (Tallest bridge) ನಿರ್ಮಿಸಿ ದಾಖಲೆ ಮಾಡಿರುವ ಚೀನಾದಲ್ಲಿ ಇದೀಗ ವಿಶ್ವದ ಅತೀ ಎತ್ತರದ ಸೇತುವೆಯೊಂದು (World's Tallest Bridge) ನಿರ್ಮಾಣವಾಗುತ್ತಿದೆ. 2050 ಅಡಿ ಎತ್ತರದಲ್ಲಿರುವ ಈ ಸೇತುವೆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಇದರಲ್ಲಿ ಪ್ರಯಾಣಿಸುವವರಿಗೆ ಒಂದು ಗಂಟೆಯ ಪ್ರಯಾಣದ ಅವಧಿ ಒಂದು ನಿಮಿಷಕ್ಕೆಕಡಿತಗೊಳ್ಳಲಿದೆ. ಇದನ್ನು ಜೂನ್‌ನಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ.
ವಿಶ್ವದ ಅತಿ ಎತ್ತರದ ಸೇತುವೆಯಾದ ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆಯನ್ನು (Huajiang Grand Canyon Bridge) ಚೀನಾ ಜೂನ್ ತಿಂಗಳಲ್ಲಿ ಉದ್ಘಾಟಿಸಲಿದ್ದು, ಇದು ಬೃಹತ್ ಕಣಿವೆಯಲ್ಲಿ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಸೇತುವೆಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇತ್ತೀಚೆಗೆ ಬಿಡುಗಡೆ ಮಾಡಿರುವ ದೃಶ್ಯಗಳಲ್ಲಿ ಸಿಬ್ಬಂದಿ ಸೇತುವೆಗೆ ಅಂತಿಮ ಸ್ಪರ್ಶ ನೀಡುತ್ತಿರುವುದನ್ನು ಕಾಣಬಹುದು.
ಈ ಸೇತುವೆ ನಿರ್ಮಾಣ ಕಾರ್ಯ 2022ರಲ್ಲಿ ಪ್ರಾರಂಭವಾಗಿತ್ತು. ಇದನ್ನು ಕೇವಲ ಮೂರು ವರ್ಷಗಳಲ್ಲಿ ನಿರ್ಮಿಸುತ್ತಿರುವುದು ಕೂಡ ಒಂದು ದಾಖಲೆಯೇ ಆಗಿದೆ. ಸೇತುವೆಯು ಸುಮಾರು ಒಂದು ಮೈಲಿ ಉದ್ದವಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆಗಿಂತ ಒಂಬತ್ತು ಪಟ್ಟು ಎತ್ತರವಾಗಿದೆ. ಇದರ ವೆಚ್ಚ ಸುಮಾರು ಸರಿಸುಮಾರು 24,200 ಕೋಟಿ ರೂ. ಎಂದು ವರದಿಯಾಗಿದೆ.
ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆ ಬೃಹತ್ ಕಣಿವೆಯಾದ್ಯಂತ ಎರಡು ಮೈಲುಗಳಷ್ಟು ವಿಸ್ತಾರವಾಗಿದ್ದು, ಇದು ರಚನೆಯಲ್ಲೂ ದಾಖಲೆಯಾಗಿದೆ. ಇದು ಪ್ರಯಾಣದ ಸಮಯವನ್ನು ಒಂದು ಗಂಟೆಯಿಂದ ಕೇವಲ ಒಂದು ನಿಮಿಷಕ್ಕೆ ಇಳಿಸುತ್ತದೆ. ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್‌ಗಿಂತಲೂ ಹೆಚ್ಚು ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಐಫೆಲ್ ಟವರ್‌ನಿಂದ 200 ಮೀಟರ್‌ಗಿಂತಲೂ ಹೆಚ್ಚು ಎತ್ತರ ಮತ್ತು ಮೂರು ಪಟ್ಟು ಹೆಚ್ಚು ತೂಕವಿರುವ ಈ ಸೇತುವೆ ಎಂಜಿನಿಯರಿಂಗ್ ಕ್ಷೇತ್ರದ ಪ್ರಮುಖ ಸಾಧನೆಯೆಂದೇ ಹೇಳಬಹುದು.
ಇದು ಚೀನಾದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಲೋಕಕ್ಕೆ ಪ್ರದರ್ಶಿಸುತ್ತದೆ. ವಿಶ್ವ ದರ್ಜೆಯ ಪ್ರವಾಸಿ ತಾಣವಾಗುವತ್ತ ಹೆಜ್ಜೆ ಹಾಕುತ್ತಿರುವ ಗೈಝೌನಲ್ಲಿ ಈ ಸೇತುವೆ ಕೂಡ ಆಕರ್ಷಕ ಕೇಂದ್ರವಾಗಲಿದೆ ಎಂದು ಚೀನಾದ ರಾಜಕಾರಣಿ ಜಾಂಗ್ ಶೆಂಗ್ಲಿನ್ ಹೇಳಿದ್ದಾರೆ. ಇದರ ಉಕ್ಕಿನ ಟ್ರಸ್‌ಗಳು ಸುಮಾರು 22,000 ಮೆಟ್ರಿಕ್ ಟನ್‌ಗಳಷ್ಟು ಭಾರವಿದೆ. ಇದು ಮೂರು ಐಫೆಲ್ ಟವರ್‌ಗಳಿಗೆ ಸಮಾನವಾಗಿದೆ. ಇದನ್ನು ಕೇವಲ ಎರಡು ತಿಂಗಳಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
China's Huajiang Grand Canyon Bridge is set to open this year, becoming the world's tallest bridge at 2050 feet high.
— Collin Rugg (@CollinRugg) April 8, 2025
Recent footage of the bridge has been released, showing crews putting on the finishing touches.
One of the most insane facts about the bridge is that… pic.twitter.com/DLWuEV2sXQ
ಸೇತುವೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಮತ್ತು ಅಂತಿಮವಾಗಿ ಕಣಿವೆ ಮೇಲೆ ಎತ್ತರದಲ್ಲಿ ನಿಲ್ಲುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸೇತುವೆ ನಿರ್ಮಾಣ ಮುಖ್ಯ ಎಂಜಿನಿಯರ್ ಲಿ ಝಾವೊ ಹೇಳಿದ್ದಾರೆ.
ಇದನ್ನೂ ಓದಿ: West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ರೈಲಿಗೆ ಕಲ್ಲು ತೂರಾಟ- ಕಚ್ಚಾ ಬಾಂಬ್ ಎಸೆದು ಅಟ್ಟಹಾಸ
ಚೀನಾದ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ವಾಗುತ್ತಿರುವ ಹೊಸ ಸೇತುವೆ ಪ್ರಮುಖ ಸಾರಿಗೆ ಸಂಪರ್ಕಗಳನ್ನು ಒದಗಿಸುವುದರ ಜೊತೆಗೆ ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಲಿದೆ. ಈ ಸೇತುವೆ ನಿರ್ಮಾಣ ಮಾಡುತ್ತಿರುವವರು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಗಾಜಿನ ನಡಿಗೆ ಮಾರ್ಗ ಮತ್ತು ವಿಶ್ವದ 'ಅತಿ ಎತ್ತರದ ಬಂಗೀ ಜಂಪ್' ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
ಚೀನಾದ ಗ್ರಾಮೀಣ ಪ್ರದೇಶದ ಜನ ಸಮುದಾಯವನ್ನು ಸಂಪರ್ಕಿಸಲು ನಿರ್ಮಾಣವಾಗುತ್ತಿದೆ. ವಿಶ್ವದ 100 ಅತಿ ಎತ್ತರದ ಸೇತುವೆಗಳಲ್ಲಿ 50ಕ್ಕಿಂತಲೂ ಹೆಚ್ಚು ಸೇತುವೆಗಳು ಚೀನಾದಲ್ಲೇ ಇವೆ. 2016 ರಲ್ಲಿ ಚೀನಾದ ಅತಿ ಎತ್ತರದ ಸೇತುವೆಯನ್ನು ಬೀಪಾಂಜಿಯಾಂಗ್‌ನಲ್ಲಿ ನಿರ್ಮಿಸಲಾಯಿತು. ಇದು 1,854 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ.