ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆನೆಜುವೆಲಾ ಜತೆ ನಾವಿದ್ದೇವೆ; ಅಮೆರಿಕದ ವಿರುದ್ಧ ನಿಂತ ಭಾರತ

ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಭಾರತ ಇದಕ್ಕೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ ಸೇನಾ ಪಡೆಗಳು ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು.

ವೆನೆಜುವೆಲಾ ಮೇಲಿನ ದಾಳಿಗೆ ಭಾರತ ಕಳವಳ

(ಸಂಗ್ರಹ ಚಿತ್ರ) -

ನವದೆಹಲಿ: ವೆನೆಜುವೆಲಾದ (Venezuela) ಮೇಲೆ ಅಮೆರಿಕ ವಾಯುದಾಳಿ (America airstrike) ನಡೆಸಿದ ಬಳಿಕ ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ (Ministry of External Affairs of India) ವೆನೆಜುವೆಲಾ ಜನರೊಂದಿಗೆ ನಾವಿದ್ದೇವೆ ಎಂದ ಹೇಳಿದೆ. ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು. ಈ ಕುರಿತು ಭಾನುವಾರ ಭಾರತ ತನ್ನ ಸಂದೇಶವನ್ನು ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ವೆನೆಜುವೆಲಾದಲ್ಲಿನ ಬೆಳವಣಿಗೆಗಳು ತೀವ್ರ ಕಳವಳಕಾರಿ ವಿಷಯವಾಗಿದೆ. ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವೆನೆಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಭಾರತ ತನ್ನ ಬೆಂಬಲವನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಹಾಗು ಸಮಸ್ಯೆಯನ್ನು ಸಂವಾದದ ಮೂಲಕ ಶಾಂತಿಯುತವಾಗಿ ಪರಿಹರಿಸಲು ಎಲ್ಲರಿಗೂ ಕರೆ ನೀಡುವುದಾಗಿ ಹೇಳಿದೆ.

ನಿಮ್ಮ ಗತಿಯೂ ಇದೇ ಆಗಬಹುದು ಹುಶಾರ್‌! ; ಕೊಲಂಬಿಯಾ ಅಧ್ಯಕ್ಷರಿಗೆ ನೇರ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಕ್ಯಾರಕಾಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ. ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದನ್ನು ಮುಂದುವರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ವೆನೆಜುವೆಲಾಗೆ ಬೆದರಿಕೆ ಒಡ್ಡುತ್ತಿರುವ ಯುನೈಟೆಡ್ ಸ್ಟೇಟ್ಸ್ ಶನಿವಾರ ವೆನೆಜುವೆಲಾ ಮೇಲೆ ಬಾಂಬ್ ದಾಳಿ ನಡೆಸಿ ಎಡಪಂಥೀಯ ನಾಯಕ ಮಡುರೊ ಅವರ ಸರ್ಕಾರವನ್ನು ಉರುಳಿಸಿತ್ತು. ಅವರು ಮತ್ತು ಅವರ ಪತ್ನಿಯನ್ನು ಬಂಧಿಸಿ ವಿಚಾರಣೆಗಾಗಿ ನ್ಯೂಯಾರ್ಕ್‌ಗೆ ಕರೆದುಕೊಂಡು ಹೋಗಲಾಗಿದೆ.

ಅಮೆರಿಕದ ಸೆರೆಯಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಮೊದಲ ಫೋಟೋ ರಿಲೀಸ್‌ ಮಾಡಿದ ಟ್ರಂಪ್‌!

ಸುಮಾರು 12 ವರ್ಷಗಳ ಮಡುರೊ ಆಡಳಿತಕ್ಕೆ ತೆರೆ ಎಳೆದಿರುವ ಅಮೆರಿಕ ಅವರ ಬಂಧನಕ್ಕೆ 50 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಈ ಹಿಂದೆ ಘೋಷಿಸಿತ್ತು. ಮಡುರೊ ಬಂಧನದ ಬಳಿಕ ಅಮೆರಿಕದ ನೌಕಾ ಹಡಗಿನಲ್ಲಿ ವೆನೆಜುವೆಲಾದ ನಾಯಕನಿಗೆ ಕೈಕೋಳ ತೊಡಿಸಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದರು.

ಮಡುರೊ ಅವರ ಬಂಧನದ ಬಳಿಕ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ದೇಶ ಸ್ವಾತಂತ್ರ್ಯಗೊಳ್ಳುವ ಸಮಯ ಬಂದಿದೆ ಎಂದು ಘೋಷಿಸಿದರು. ಆದರೆ ಆಕೆ ನಾಯಕಿಯಾಗಿ ಹೊರಹೊಮ್ಮುವ ಯಾವುದೇ ನಿರೀಕ್ಷೆಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.