Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು
ಹಿಂದೂಗಳನ್ನು ಮತ್ತು ಭಾರತವನ್ನು ಗುರಿಯಾಗಿಸಿಕೊಂಡ ಪ್ರತಿಭಟನೆಗಳು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಲೇ ಇವೆ. ಇಷ್ಟು ಸಾಲದೆಂಬಂತೆ, ಬಾಂಗ್ಲಾದ ಒಂದಿಷ್ಟು ತಥಾ ಕಥಿತ ನಾಯಕರು ಗಡಿಭಾಗದ ‘ಚಿಕನ್ ನೆಕ್’ ಪ್ರದೇಶದ ಕುರಿತು ಉಲ್ಲೇಖಿಸಿ, ಈಶಾನ್ಯ ಭಾರತದ ಜತೆಗಿನ ಸಂಪರ್ಕವನ್ನೇ ತುಂಡರಿಸುವುದಾಗಿ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು.
-
ಹಿಂದೂಗಳನ್ನು ಮತ್ತು ಭಾರತವನ್ನು ಗುರಿಯಾಗಿಸಿಕೊಂಡ ಪ್ರತಿಭಟನೆಗಳು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಲೇ ಇವೆ. ಇಷ್ಟು ಸಾಲದೆಂಬಂತೆ, ಬಾಂಗ್ಲಾದ ಒಂದಿಷ್ಟು ತಥಾಕಥಿತ ನಾಯಕರು ಗಡಿಭಾಗದ ‘ಚಿಕನ್ ನೆಕ್’ ಪ್ರದೇಶದ ಕುರಿತು ಉಲ್ಲೇಖಿಸಿ, ಈಶಾನ್ಯ ಭಾರತದ ಜತೆಗಿನ ಸಂಪರ್ಕವನ್ನೇ ತುಂಡರಿಸುವುದಾಗಿ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು.
ಇದಕ್ಕೆ ನಾಗಾಲ್ಯಾಂಡ್‌ನ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ತೆಮ್‌ಜೆನ್ ಇಮ್ನಾ ಅಲಾಂಗ್ ಅವರು, “ಚಿಕನ್ ನೆಕ್ ಪ್ರದೇಶದ ತಂಟೆಗೆ ಬಂದರೆ, ಶತ್ರುಗಳ ತಲೆ ತೆಗೆಯುವುದು ಹೇಗೆಂಬುದು ನಮಗೆ ಗೊತ್ತು" ಎಂಬರ್ಥದಲ್ಲಿ ಎದುರೇಟು ನೀಡಿದ್ದಾರೆ.
ಇದನ್ನೂ ಓದಿ: Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...
ಇದು ಶ್ಲಾಘನೀಯ ಹೆಜ್ಜೆಯೂ ಹೌದು, ಕೃತಘ್ನರಿಗೆ ನೀಡಬೇಕಾದ ಉತ್ತರವೂ ಹೌದು. ಏಕೆಂದರೆ, ಬಾಂಗ್ಲಾದೇಶವು ಅಸ್ತಿತ್ವವನ್ನು ಕಂಡುಕೊಂಡು ಉಸಿರಾಡುವಂತಾಗುವುದಕ್ಕೆ ಭಾರತವು ದಶಕಗಳಿಂದಲೂ ನೀಡಿಕೊಂಡು ಬಂದಿರುವ ಸಹಾಯಹಸ್ತವನ್ನು ಆ ದೇಶದ ಒಂದಿಷ್ಟು ನಾಯಕರು ಮರೆತಿರುವಂತಿದೆ. ವಿದೇಶಿ ಶಕ್ತಿಗಳು ನೀಡುತ್ತಿರುವ ಕುಮ್ಮಕ್ಕನ್ನು ತಮಗೆ ಒದಗಿರುವ ಬೆಂಬಲ ಎಂದೇ ತಪ್ಪಾಗಿ ಭಾವಿಸಿರುವಂತಿದೆ ಬಾಂಗ್ಲಾದ ಇಂಥ ನಾಯಕರು.
ತಮ್ಮ ನೆಲದಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿಮಾಡುವ, ಅವರ ಆಸ್ತಿಪಾಸ್ತಿ ಗಳಿಗೆ ಹಾನಿಯುಂಟು ಮಾಡುವ ಮೂಲಕ ಭಾರತವನ್ನು ಕೆರಳಿಸಬಹುದು ಅಂತ ಬಾಂಗ್ಲಾದ ವಿಕ್ಷಿಪ್ತರು ಅಂದುಕೊಂಡಿರುವಂತಿದೆ. ಭೌಗೋಳಿಕ ವಿಸ್ತಾರದಲ್ಲಾಗಲೀ, ಸಂಪನ್ಮೂಲದ ವಿಷಯದಲ್ಲಾಗಲೀ, ಮಿಲಿಟರಿ ಸಾಮರ್ಥ್ಯದಲ್ಲಾಗಲೀ ಬಾಂಗ್ಲಾಕ್ಕಿಂತ ಸಾಕಷ್ಟು ಪಟ್ಟು ಬಲಶಾಲಿಯಾಗಿರುವ ಭಾರತವು ಇಂಥ ಕೆರಳಿಕೆಗಳನ್ನು ಸಮರ್ಥ ವಾಗಿಯೇ ಹಣಿದು ಬಾಯಿ ಮುಚ್ಚಿಸಬಲ್ಲದು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದಾದ ಅಮಾಯಕರ ಮಾರಣಹೋಮಕ್ಕೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಭಾರತ ತಪರಾಕಿ ಕೊಟ್ಟಿದ್ದೇ ಇದಕ್ಕೆ ಇತ್ತೀಚಿನ ಸಾಕ್ಷಿ. ಇದನ್ನು ಮನಗಂಡಾದರೂ ಬಾಂಗ್ಲಾದ ಪುಡಿನಾಯಕರು ಬಾಯಿಮುಚ್ಚಿಕೊಂಡಿದ್ದರೆ ಒಳಿತು...