ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs USA: 4 ಓವರ್‌ಗೆ 65 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಸೌರಭ್‌ ನೇತ್ರವಾಳ್ಕರ್‌!

ಭಾರತ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಮೂರನೇ ಪಂದ್ಯದಲ್ಲಿ ಯುಎಸ್‌ಎ ತಂಡದ ವೇಗಿ ಸೌರಭ್‌ ನೇತ್ರವಾಳ್ಕರ್‌ ಅವರು ತಮ್ಮ ದುಬಾರಿ ಬೌಲಿಂಗ್‌ ಸ್ಪೆಲ್‌ ಮೂಲಕ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ. ಇವರು ಬೌಲ್‌ ಮಾಡಿದ ನಾಲ್ಕು ಓವರ್‌ಗಳಿಗೆ ವಿಕೆಟ್‌ ಇಲ್ಲದೆ 65 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ಭಾರತದ ವಿರುದ್ಧ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ನೇತ್ರವಾಳ್ಕರ್‌!

4 ಓವರ್‌ಗೆ 65 ರನ್‌ ನೀಡಿ ಅನಗತ್ಯ ದಾಖಲೆ ಬರೆದ ಸೌರಭ್‌. -

Profile
Ramesh Kote Feb 7, 2026 10:18 PM

ಮುಂಬೈ: ಶನಿವಾರ ಭಾರತ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್-ಎ ಹಂತದ ಪಂದ್ಯದಲ್ಲಿ ಯುಎಸ್‌ಎ ವೇಗದ ಬೌಲರ್ ಸೌರಭ್ ನೇತ್ರವಾಳ್ಕರ್ ಅನಗತ್ಯ ದಾಖಲೆಯೊಂದನ್ನು ಹೆಗಲೇರಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಹಾಕಿದ ಅನಗತ್ಯ ದಾಖಲೆಯನ್ನು ಅವರು ಬರೆದಿದ್ದಾರೆ. ಎಡಗೈ ವೇಗಿ ಆಗಿರುವ ನೇತ್ರವಾಳ್ಕರ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್ ಅನ್ನು ವಿಕೆಟ್‌ ಪಡೆಯದೆ 65 ರನ್‌ಗಳನ್ನು ಬಿಟ್ಟುಕೊಟ್ಟರು. ಆ ಮೂಲಕ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ (0/64) ಅವರ ದಾಖಲೆಯನ್ನು ಹಿಂದಿಕ್ಕಿದರು. ತಮ್ಮ ಕೊನೆಯ ಎರಡು ಓವರ್‌ಗಳಲ್ಲಿ 34 ವರ್ಷದ ನೇತ್ರವಾಳ್ಕರ್ ಅವರನ್ನು ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಸಂಪೂರ್ಣವಾಗಿ ದಂಡಿಸಿದರು.

ಸೂರ್ಯಕುಮಾರ್ ಯಾದವ್ ಅಜೇಯ 84 ರನ್‌ಗಳ ಅಬ್ಬರದ ಇನಿಂಗ್ಸ್ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 161 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಈ ಇನಿಂಗ್ಸ್ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ನಾಯಕನೊಬ್ಬ ಸಾಧಿಸಿದ ಎರಡನೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಯುಎಸ್‌ಎ ವೇಗಿ ಸೌರಭ್‌ ನೇತ್ರವಾವಾಳ್ಕರ್‌ ವಿಕೆಟ್‌ ಪಡೆಯದೆ ಅತ್ಯಂತ ದುಬಾರಿ ಬೌಲರ್‌ ಎನಿಸಿಕೊಂಡರು.

T20 World Cup: ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ಬಲದಿಂದ ಸ್ಲಾಟ್ಲೆಂಡ್‌ ಎದುರು ಗೆದ್ದ ವೆಸ್ಟ್‌ ಇಂಡೀಸ್‌!

ಟಿ20 ವಿಶ್ವಕಪ್‌ ಇತಿಹಾಸದ ಅತ್ಯಂತ ದುಬಾರಿ ಬೌಲಿಂಗ್‌ ಸ್ಪೆಲ್‌ಗಳು

ಸೌರಭ್‌ ನೇತ್ರವಾಳ್ಕರ್ (ಅಮೆರಿಕಾ) 65 ರನ್‌ vs ಭಾರತ

ಸನತ್‌ ಜಯಸೂರ್ಯ (ಶ್ರೀಲಂಕಾ) 64 ರನ್‌ vs ಪಾಕಿಸ್ತಾನ

ಮುಶ್ರಾಫೆ ಮೊರ್ತಾಝಾ (ಬಾಂಗ್ಲಾದೇಶ) 63 ರನ್‌ vs ಪಾಕಿಸ್ತಾನ

ಲಮೆಕ್‌ ಒನ್ಯೋಂಗಾ (ಕೀನ್ಯಾ) 61 ರನ್‌ vs ಶ್ರೀಲಂಕಾ

ಸ್ಟುವರ್ಟ್‌ ಬ್ರಾಡ್‌ (ಇಂಗ್ಲೆಂಡ್) 60 ರನ್‌ vs ಭಾರತ

ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ) 60 ರನ್‌ vs ನ್ಯೂಜಿಲೆಂಡ್‌



ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಅರ್ಧಶತಕ

ಭಾರತ ತಂಡದ ಪರ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ವಿಫಲರಾದರು. ಒಂದು ಹಂತದಲ್ಲಿ ಭಾರತ 77 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಮಾತ್ರ ಬಹಳ ಎಚ್ಚರಿಕೆಯಿಂದ ಯುಎಸ್‌ಎ ಬೌಲರ್‌ಗಳನ್ನು ಎದುರಿಸಿದರು. ಇವರು ಆಡಿದ 49 ಎಸೆತಗಳಲ್ಲಿ 10 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳೊಂದಿಗೆ 84 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕಟ್‌ ನಷ್ಟಕ್ಕೆ 161 ರನ್‌ಗಳನ್ನು ಗಳಿಸಿತು ಹಾಗೂ ಎದುರಾಳಿ ಯುಎಸ್‌ಎ ತಂಡಕ್ಕೆ 162 ರನ್‌ಗಳ ಗುರಿಯನ್ನು ನೀಡಿತು.

T20 World Cup 2026: ಸ್ಕಾಟ್ಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ದಾಖಲೆ ಬರೆದ ರೊಮ್ಯಾರಿಯೊ ಶೆಫರ್ಡ್!

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಇಶಾನ್ ಕಿಶನ್ ವಿಕೆಟ್‌ ಕೀಪರ್‌), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ

ಯುಎಸ್‌ಎ: ಆಂಡ್ರೀಸ್ ಗೌಸ್ (ವಿಕೆಟ್‌ ಕೀಪರ್‌), ಸಾಯ್‌ ತೇಜಾ ಮುಕ್ಕಮಲ್ಲ, ಮೊನಾಂಕ್ ಪಟೇಲ್ (ನಾಯಕ), ಮಿಲಿಂದ್ ಕುಮಾರ್, ಸಂಜಯ್ ಕೃಷ್ಣಮೂರ್ತಿ, ಶುಭಂ ರಂಜನೆ, ಹರ್ಮೀತ್ ಸಿಂಗ್, ಮೊಹಮ್ಮದ್ ಮೊಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಅಲಿ ಖಾನ್, ಸೌರಭ್ ನೇತ್ರವಳ್ಕರ್