Donald Trump: ರಷ್ಯಾಗೆ ಮತ್ತೊಂದು ಶಾಕ್ ನೀಡಿದ ಟ್ರಂಪ್; ರಷ್ಯಾದ ಎರಡು ತೈಲ ಕಂಪನಿಗಳಿಗೆ ನಿರ್ಬಂಧ ವಿಧಿಸಿದ ಅಮೆರಿಕ
Sanctions On Major Russian Oil Companies: ರಷ್ಯಾ ಉಕ್ರೇನ್ ಯುದ್ಧ ಶುರುವಾಗಿ ಎರಡು ವರ್ಷಗಳೇ ಕಳೆದಿದೆ. ಆದರೆ ಯುದ್ಧ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 2ನೇ ಮಹಾಯುದ್ಧದ ಬಳಿಕ ಎಂದೂ ಕಂಡಿರದ ಸಾವು - ನೋವುಗಳ ಈ ಯುದ್ಧದಲ್ಲಿ ಸಂಭವಿಸಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವನ್ನು ಇಡೀ ಜಗತ್ತು ಅನುಭವಿಸುತ್ತಿದೆ. ಇನ್ನು ಎರಡು ದೇಶಗಳ ಗುದ್ದಾಟದ ನಡುವೆ ವಿಶ್ವದ ದೊಡ್ಡಣ್ಣ ಅಮೆರಿಕ ಎಂಟ್ರಿ ಕೊಟ್ಟಿದ್ದು, ಯುದ್ದ ಶುರುವಾಗಿನಿಂದಲೂ ರಷ್ಯಾವನ್ನು ಟಾರ್ಗೆಟ್ ಮಾಡಿಕೊಂಡು ಬಂದಿರುವ ಟ್ರಂಪ್ ಇದೀಗ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ನಿರ್ಬಂಧ ಹೇರಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ -

ವಾಷಿಂಗ್ಟನ್: ಉಕ್ರೇನ್(Ukraine) ಯುದ್ಧದ ವಿಚಾರದಲ್ಲಿ ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅಮೆರಿಕ(America) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ಬುಧವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ನಿರ್ಬಂಧ ಹೇರಿದ್ದಾರೆ. ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಟ್ರಂಪ್-ಪುಟಿನ್ ಶೃಂಗಸಭೆ ರದ್ದಾದ ಒಂದು ದಿನದ ಬಳಿಕ ಈ ಬೆಳವಣಿಗೆಯಾಗಿದೆ.
ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳಾದ ರಾಸ್ನೆಫ್ಟ್(Rosneft) ಮತ್ತು ಲುಕ್‌ಆಯಿಲ್(Lukoil) ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಹಣಕಾಸು ಸಚಿವ ಸ್ಕಾಟ್ ಬೆಸೆಂಟ್(Scott Bessent) ಹೇಳಿದ್ದಾರೆ. ಅಲ್ಲದೇ ಅಧ್ಯಕ್ಷ ಪುಟಿನ್ ಈ ಅರ್ಥಹೀನ ಯುದ್ಧವನ್ನು ಕೊನೆಗಾಣಿಸಲು ನಿರಾಕರಿಸುತ್ತಿರುವ ಕಾರಣ, ಕ್ರೆಮ್ಲಿನ್‌ನ ಯುದ್ಧ ಯಂತ್ರಕ್ಕೆ ಹಣ ಒದಗಿಸುವ ಈ ತೈಲಕ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಅಗತ್ಯಬಿದ್ದರೆ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಶಿವಾಜಿ ಮಹಾರಾಜರ ಗೆಟ್‌ಅಪ್‌ನಲ್ಲಿ ಬಂದು ಸೆಕ್ಯೂರಿಟಿ ಗಾರ್ಡ್ ಜೊತೆ ವಾಗ್ಯುದ್ಧ! ಈತನ ಹುಚ್ಚಾಟವನ್ನೊಮ್ಮೆ ನೋಡಿ
ಅಲ್ಲದೆ, "ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಅಮೆರಿಕಾ ಪ್ರಯತ್ನಿಸುತ್ತಲೇ ಇದೆ ಮತ್ತು ಶಾಶ್ವತ ಶಾಂತಿ ಸಂಪೂರ್ಣವಾಗಿ ರಷ್ಯಾದ ಪ್ರಾಮಾಣಿಕ ಮಾತುಕತೆ ಮೇಲೆ ಅವಲಂಬಿತವಾಗಿದೆ," ಎಂದು ಅವರು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, "ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇವು ಅಗಾಧ ನಿರ್ಬಂಧಗಳಾಗಿವೆ. ಇನ್ನು ಯುದ್ಧ ಇತ್ಯರ್ಥವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಕ್ಷಿಪಣಿಗಳು ಮತ್ತು ಇತರ ವಿಚಾರಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ಆದರೆ ಅದು ಅಗತ್ಯವಿಲ್ಲ ಎಂದು ತಿಳಿದಿದ್ದೇವೆ," ಎಂದು ಹೇಳಿದ್ದಾರೆ.
“ನಾವು ಅವರು ತಮ್ಮ ಸ್ಥಳಕ್ಕೆ ಹಿಂದಿರುಗಬೇಕು ಎಂದು ಬಯಸುತ್ತೇವೆ. ಕಳೆದ ವಾರ ರಷ್ಯಾ ಮತ್ತು ಉಕ್ರೇನ್ ಎರಡೂ ಕಡೆ ಸುಮಾರು 8,000 ಸೈನಿಕರು ಸಾವನ್ನಪ್ಪಿದ್ದಾರೆ. ಇದು ವಿಚಿತ್ರ ಪರಿಸ್ಥಿತಿ. ನಾವು ಇದನ್ನು ಅಂತ್ಯಗೊಳಿಸಲು ಬಯಸುತ್ತೇವೆ. ಈಗ ನಾಲ್ಕು ವರ್ಷಗಳಾಗಿವೆ... ನಾನು ಅಧ್ಯಕ್ಷನಾಗಿದ್ದರೆ, ಈ ಯುದ್ಧವೇ ಆಗುತ್ತಿರಲಿಲ್ಲ,” ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್-ಪುಟಿನ್ ಮಹತ್ವದ ಶೃಂಗಸಭೆ ರದ್ದು
ಒಂದು ವಾರದ ಹಿಂದಷ್ಟೇ ಟ್ರಂಪ್, ಮುಂದಿನ ಎರಡು ವಾರಗಳಲ್ಲಿ ಬುಡಾಪೆಸ್ಟ್‌ನಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವುದಾಗಿ ಘೋಷಿಸಿದ್ದರು. ಆದರೆ, ಮಂಗಳವಾರ, ಈ ಸಭೆ ನಡೆಯುವುದಿಲ್ಲ ಎಂದು ವೈಟ್‌ಹೌಸ್ ದೃಢಪಡಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲಾವ್ರೋವ್ ನಡುವಿನ ಪೂರ್ವ ಸಭೆಯ ಯೋಜನೆಯನ್ನು ಸಹ ರದ್ದುಪಡಿಸಲಾಯಿತು. ನಾನು ವ್ಯರ್ಥ ಸಭೆ ಬಯಸುವುದಿಲ್ಲ. ಸಮಯ ವ್ಯರ್ಥ ಮಾಡಬಯಸುವುದಿಲ್ಲ. ನೋಡೋಣ ಏನಾಗುತ್ತದೆ ಎಂದು ಟ್ರಂಪ್ ಹೇಲಿದ್ದಾರೆ.