Donald Trump: ಅಮೆರಿಕದಿಂದ ಮಹತ್ವದ ಹೆಜ್ಜೆ; ಇಂದು ಹಲವಾರು ದೇಶಗಳಿಗೆ ಸುಂಕ ಪತ್ರಗಳನ್ನು ಕಳುಹಿಸಲಿರುವ ಟ್ರಂಪ್
ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಹೊಸ ಪರಸ್ಪರ ಸುಂಕ ದರಗಳನ್ನು ಒಳಗೊಂಡಿರುವ ವ್ಯಾಪಾರ ಒಪ್ಪಂದಗಳು ಸೇರಿದಂತೆ ಮೊದಲ ಸೆಟ್ ಸುಂಕ ಪತ್ರಗಳನ್ನು ಹಲವು ದೇಶಗಳಿಗೆ ಕಳಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ (Donald Trump) ಅವರ ಮೊದಲ ಸುಂಕ ಪತ್ರಗಳನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಳುಹಿಸಲಿದ್ದಾರೆ.


ವಾಷಿಂಗ್ಟನ್: ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಹೊಸ ಪರಸ್ಪರ ಸುಂಕ ದರಗಳನ್ನು ಒಳಗೊಂಡಿರುವ ವ್ಯಾಪಾರ ಒಪ್ಪಂದಗಳು ಸೇರಿದಂತೆ ಮೊದಲ ಸೆಟ್ ಸುಂಕ ಪತ್ರಗಳನ್ನು ಹಲವು ದೇಶಗಳಿಗೆ ಕಳಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ (Donald Trump) ಅವರ ಮೊದಲ ಸುಂಕ ಪತ್ರಗಳನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 9:30) ವಿವಿಧ ವ್ಯಾಪಾರ ಪಾಲುದಾರರಿಗೆ ಕಳುಹಿಸಲಾಗುವುದು. ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳೊಂದಿಗೆ ಹೆಚ್ಚಿನ ಮಟ್ಟದ ವ್ಯಾಪಾರ ಮಾತುಕತೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಯುನೈಟೆಡ್ ಸ್ಟೇಟ್ಸ್ ಸುಂಕ ಪತ್ರಗಳು ಮತ್ತು ಡೀಲ್‌ಗಳನ್ನು ಪ್ರಪಂಚದಾದ್ಯಂತದ ವಿವಿಧ ದೇಶಗಳೊಂದಿಗೆ ಜುಲೈ 7, ಸೋಮವಾರ ಮಧ್ಯಾಹ್ನ 12:00 ಗಂಟೆಯಿಂದ (ಪೂರ್ವ) ತಲುಪಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು!" ಎಂದು ಟ್ರಂಪ್ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೇಳಿದ್ದಾರೆ.
ಈ ಹಿಂದೆ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ್ದರು. ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋದರು. ಅವರು ನನ್ನ ಉತ್ತಮ ಸ್ನೇಹಿತ, ಮಾತುಕತೆ ವೇಳೆ ನಾನು ಅವರಿಗೆ ನೀವು ನನ್ನ ಸ್ನೇಹಿತ, ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಭಾರತವು ನಮಗೆ ಶೇ. 52 ರಷ್ಟು ವಿಧಿಸುತ್ತದೆ, ಆದ್ದರಿಂದ ನಾವು ಅವರಿಗೆ ಅದರಲ್ಲಿ ಅರ್ಧದಷ್ಟು ಶೇ.26 ರಷ್ಟು ವಿಧಿಸುತ್ತೇವೆ ಎಂದು ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಮಧ್ಯದಲ್ಲಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವಾಕಾಂಕ್ಷಿ ಪ್ರಮುಖ ತೆರಿಗೆ ಮಸೂದೆ ಒನ್ ಬಿಗ್ ಬ್ಯೂಟಿಫುಲ್ ಬಿಲ್ (One Big Beautiful Bill) ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡಿದೆ. ಅಮೆರಿಕದ ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್ ಮಾಡಿದೆಯಾದರೂ ಈ ಬೆಳವಣಿಗೆ ಟ್ರಂಪ್‌ಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತದೆ. ಇದೂವರೆಗೆ ಸಹಿ ಮಾಡಲಾದ ಮಸೂದೆಗಳ ಪೈಕಿ ಇದು ಅತಿದೊಡ್ಡ ಮಸೂದೆಯಾಗಿದೆ ಅಂತ ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಾವು ಇದನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರತಿಕ್ರಿಯಿಸಿದ್ದು, ಅಮೆರಿಕದ ಸುವರ್ಣಯುಗ ಆರಂಭವಾಗಿದ್ದು, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಧ್ಯಕ್ಷರ ಸಹಿಗಾಗಿ ಶೀಘ್ರದಲ್ಲೇ ವೈಟ್‌ಹೌಸ್‌ಗೆ ಬರಲಿದೆ ಎಂದಿದೆ.
ಈ ಸುದ್ದಿಯನ್ನೂ ಓದಿ:Rahul Gandhi: ಟ್ರಂಪ್ ತೆರಿಗೆ ನಿಯಮಕ್ಕೆ ಪ್ರಧಾನಿ ತಲೆಬಾಗುತ್ತಾರೆ; ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಅಮೆರಿಕದಲ್ಲಿದ್ದು ಭಾರತಕ್ಕೆ (India) ಹಣ ಕಳಿಸಿದ್ರೆ 3.5% ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು ಅಂದಾಜು 10-12 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಅಮೆರಿಕಗೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಭಾರತವಷ್ಟೇ ಅಲ್ಲ ಇತರೆ ದೇಶದ ವಲಸಿಗರಿಗೂ ಸಂಕಷ್ಟ ಆಗಲಿದೆ.