ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನಮ್ಮ ಪಡೆಗಳು ಸಿದ್ಧವಾಗಿವೆʼʼ: ಇರಾನ್‌ನ ದಾಳಿ ಬೆದರಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗು

Iran’s attack: ಆ್ಯಪಲ್‌ ಮತ್ತು ಗೂಗಲ್‌ನಂತಹ ಅಮೆರಿಕನ್ ತಂತ್ರಜ್ಞಾನ ದೈತ್ಯ ಕಂಪನಿಗಳ ಮೇಲೆ ದಾಳಿ ಮಾಡುವ ಇರಾನ್‌ನ ಬೆದರಿಕೆಯನ್ನು ತಡೆಗಟ್ಟಲು ನಮ್ಮ ಮಿಲಿಟರಿ ಪಡೆ ಸದಾ ಸಿದ್ಧವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತಿಯಾಗಿ ತಮ್ಮ ಸಂಬಂಧಿತ ಘಟಕಗಳ ನಾಶವನ್ನು ಎದುರಿಸಬೇಕು ಎಂದು ಗಾರ್ಡ್ಸ್ ಬೆದರಿಕೆ ಹಾಕಿತ್ತು.

ಇರಾನ್‌ನ ದಾಳಿ ಎಚ್ಚರಿಕೆಗೆ ಅಮೆರಿಕದ ಪ್ರತ್ಯುತ್ತರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -

Priyanka P
Priyanka P Apr 1, 2026 3:46 PM

ವಾಷಿಂಗ್ಟನ್, ಏ.1: ಆ್ಯಪಲ್‌ ಮತ್ತು ಗೂಗಲ್‌ನಂತಹ ಅಮೆರಿಕನ್ ತಂತ್ರಜ್ಞಾನ ದೈತ್ಯ ಕಂಪನಿಗಳ ಮೇಲೆ ದಾಳಿ ಮಾಡುವ ಇರಾನ್‌ನ ಬೆದರಿಕೆಯನ್ನು ತಡೆಗಟ್ಟಲು ನಮ್ಮ ಮಿಲಿಟರಿ ಪಡೆ ಸದಾ ಸಿದ್ಧವಾಗಿದೆ ಎಂದು ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಇರಾನ್ ನಡೆಸುವ ಯಾವುದೇ ಸಂಭಾವ್ಯ ಆಕ್ರಮಣವನ್ನು ತಡೆಯಲು ಅಮೆರಿಕ ಮಿಲಿಟರಿ (US Military) ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇರಾನ್‌ನ ಯಾವುದೇ ದಾಳಿಯನ್ನು ತಡೆಯಲು ಅಮೆರಿಕದ ಸೇನೆ ಸಿದ್ಧವಾಗಿದೆ. ಭಯೋತ್ಪಾದಕ ಆಡಳಿತದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಶೇ. 90ರಷ್ಟು ಇಳಿಕೆ ಕಂಡುಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹಲವು ಇರಾನಿನ ನಾಯಕರು ಹತ್ಯೆಯಾದರೆ, ಅಮೆರಿಕದ ತಂತ್ರಜ್ಞಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು (IRGC) ಎಚ್ಚರಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ಬಂದಿದೆ.

ಇರಾನ್‌ ವಿರುದ್ಧದ ಯುದ್ಧ ಅಮೆರಿಕವನ್ನೇ ನಾಶ ಮಾಡುತ್ತ? 18 ಟೆಕ್‌ ಕಂಪನಿ ಮೇಲೆ ದಾಳಿಯ ಎಚ್ಚರಿಕೆ

ಏಪ್ರಿಲ್ 1ರ ರಾತ್ರಿ 8 ಗಂಟೆಯಿಂದ (ಭಾರತೀಯ ಕಾಲಮಾನ ರಾತ್ರಿ 10) ಈ ಕಂಪನಿಗಳ ಮೇಲೆ ದಾಳಿ ನಡೆಸಲಾಗುತ್ತದೆ. ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತಿಯಾಗಿ ಅಮೆರಿಕ ತಮ್ಮ ಸಂಬಂಧಿತ ಘಟಕಗಳ ನಾಶವನ್ನು ಎದುರಿಸಬೇಕು ಎಂದು ಗಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಪ್ರಕಾರ, ಕೆಲವು ಕಂಪನಿಗಳು ಇರಾನ್ ಅಧಿಕಾರಿಗಳ ಹತ್ಯೆಯಲ್ಲಿ ಭಾಗಿಯಾಗಿವೆ. ಏಪ್ರಿಲ್ 1ರಿಂದ ಅವುಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ತಕ್ಷಣವೇ ತಮ್ಮ ಕೆಲಸದ ಸ್ಥಳಗಳನ್ನು ತೊರೆಯುವಂತೆ ನಾವು ಸಲಹೆ ನೀಡುತ್ತೇವೆ ಎಂದು ಅದು ಹೇಳಿದೆ. ಇರಾನಿನ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಗಳನ್ನು ನಿಲ್ಲಿಸುವ ಅಗತ್ಯದ ಬಗ್ಗೆ ನಮ್ಮ ಪುನರಾವರ್ತಿತ ಎಚ್ಚರಿಕೆಗಳನ್ನು ಅಮೆರಿಕ ಸರ್ಕಾರ ಮತ್ತು ತಂತ್ರಜ್ಞಾನ ದೈತ್ಯರು ನಿರ್ಲಕ್ಷಿಸಿದ್ದಾರೆ ಎಂದು ಗಾರ್ಡ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಟೆಲ್, ಮೈಕ್ರೋಸಾಫ್ಟ್ ಮತ್ತು ಒರಾಕಲ್ ಹಾಗೆಯೇ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ, ವಿಶ್ಲೇಷಣಾ ಸಂಸ್ಥೆ ಪಲಂತಿರ್ ಮತ್ತು ಚಿಪ್ ದೈತ್ಯ ಎನ್ವಿಡಿಯಾ ಸೇರಿದಂತೆ ಈ 18 ಕಂಪನಿಗಳು ಪ್ರತೀಕಾರದ ಅಪಾಯವನ್ನು ಎದುರಿಸುತ್ತಿವೆ ಎಂದು ಹೇಳಿಕೆ ತಿಳಿಸಿದೆ.

ಅಮೆರಿಕದ ನೆಲೆಗಳ ಮೇಲಿನ ಇರಾನ್ ದಾಳಿಗೆ ರಷ್ಯಾ ನೆರವು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೊಸ ಬಾಂಬ್‌

ಭಯೋತ್ಪಾದಕ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಕಂಪನಿಗಳು ಟಾರ್ಗೆಟ್ ಪರಸ್ಪರ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿಕೆ ತಿಳಿಸಿದೆ. ಈ ಕ್ರಮ ಎಲ್ಲಿ ನಡೆಯುತ್ತದೆ ಎಂಬುದನ್ನು ಎಚ್ಚರಿಕೆಯಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಆದರೆ ಎಲ್ಲ ದೇಶಗಳಲ್ಲಿನ ಈ ಕಂಪನಿಗಳ ಸಿಬಬದಿ ಕಚೇರಿಯ ಒಂದು ಕಿಲೋ ಮೀಟರ್ ವ್ಯಾಪ್ತಿ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಹೇಳಿದೆ.

ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ರಾಜತಾಂತ್ರಿಕತೆ ಮಾತುಕತೆಯನ್ನು ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವಾಗಲೇ ಈ ಬೆದರಿಕೆ ಬಂದಿದೆ. ಜತೆಗೆ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಅಮೆರಿಕ-ಇಸ್ರೇಲ್‌ ಅಭಿಯಾನವನ್ನು ಹೆಚ್ಚಿಸುವುದಾಗಿಯೂ ಅವರು ಬೆದರಿಕೆ ಹಾಕುತ್ತಿದ್ದಾರೆ.