ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಓಮನ್‌ ಕಡಲ ತೀರದಲ್ಲಿ ಮುಳುಗುತ್ತಿದ್ದ ಭಾರತೀಯ ಹಡಗನ್ನು ರಕ್ಷಿಸಿದ ಅಮೆರಿಕನ್‌ ನೌಕಾಪಡೆ

14 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಒಮಾನ್ ಕರಾವಳಿಯಲ್ಲಿ ಮುಳುಗಲು ಪ್ರಾರಂಭಿಸಿದ್ದು, ಭಾರತೀಯ ನೌಕಾಪಡೆ ಮತ್ತು ಹತ್ತಿರದ ವ್ಯಾಪಾರಿ ಹಡಗನ್ನು ಒಳಗೊಂಡ ತುರ್ತು ರಕ್ಷಣಾ ಕಾರ್ಯವನ್ನು ನಿಭಾಯಿಸಿವೆ. ಅಮೆರಿಕ ಹಾಗೂ ಭಾರತದ ನಡುವಿನ ಮಾತುಕತೆ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

ಮುಳುಗುತ್ತಿದ್ದ ಭಾರತೀಯ ಹಡಗನ್ನು ರಕ್ಷಿಸಿದ ಅಮೆರಿಕನ್‌ ನೌಕಾಪಡೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 14, 2026 3:18 PM

14 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಒಮಾನ್ ಕರಾವಳಿಯಲ್ಲಿ ( Oman Coast) ಮುಳುಗಲು ಪ್ರಾರಂಭಿಸಿದ್ದು, ಭಾರತೀಯ ನೌಕಾಪಡೆ ಮತ್ತು ಹತ್ತಿರದ ವ್ಯಾಪಾರಿ ಹಡಗನ್ನು ಒಳಗೊಂಡ ತುರ್ತು ರಕ್ಷಣಾ ಕಾರ್ಯವನ್ನು ನಿಭಾಯಿಸಿವೆ. ಸರ್ಕಾರಿ ಮೂಲಗಳ ಪ್ರಕಾರ, ಜೂನ್ 14 ರ ಬೆಳಿಗ್ಗೆ ಓಮನ್‌ನ ರಾಸ್ ಅಲ್ ಹಡ್‌ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಅಪಾಯದಲ್ಲಿದೆ ಎಂಬ ಮಾಹಿತಿ ಪಡೆದ ನಂತರ ಅಮೆರಿಕ ನೌಕಾಪಡೆಯು (American Navy) ತೀರ ಅಧಿಕಾರಿಗಳು ಮತ್ತು ಭಾರತೀಯ ನೌಕಾಪಡೆಗೆ ಮಾಹಿತಿ ನೀಡಿದರು.

ತುರ್ತು ಪರಿಸ್ಥಿತಿಗೆ ಸ್ಪಂದಿಸಿದ ಯುಎಸ್ ನೇವಿ ಪಿ -8 ಕಡಲ ಗಸ್ತು ವಿಮಾನವು ಹಡಗಿನ ಬಳಿ ಲೈಫ್ ರಾಫ್ಟ್ ಅನ್ನು ಇಳಿಸಿ ಅದರಲ್ಲಿದ್ದವರ ಸ್ಥಳಾಂತರಿಸುವಿಕೆಯನ್ನು ಮೇಲ್ವಿಚಾರಣೆ ಮಾಡಿತು. ಹಡಗು ಮುಳುಗಲು ಪ್ರಾರಂಭಿಸಿದ ನಂತರ ಸಿಬ್ಬಂದಿ ಲೈಫ್ ರಾಫ್ಟ್‌ಗೆ ಹೋದರು.ಒಮಾನ್ ಮತ್ತು ಹಾರ್ಮುಜ್ ಜಲಸಂಧಿಯ ಬಳಿಯ ವಾಣಿಜ್ಯ ಹಡಗು ಸಾಗಣೆ ಮತ್ತು ಸಮುದ್ರ ಕಾರ್ಯಾಚರಣೆಗಳು ವ್ಯಾಪಕ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ರಕ್ಷಣೆ ಬಂದಿದೆ.

ಹಡಗು ಕಂಪನಿಗಳು ಮತ್ತು ಕಡಲ ಅಧಿಕಾರಿಗಳು ತಿಂಗಳುಗಳಿಂದ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಾರ್ಮೊಜ್‌ ಮೂಲಕ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಗಲ್ಫ್ ಪ್ರದೇಶ ಮತ್ತು ಸುತ್ತಮುತ್ತ ನೂರಾರು ಹಡಗುಗಳು ಮತ್ತು ಸುಮಾರು 20,000 ನಾವಿಕರು ಸಿಲುಕಿಕೊಂಡಿದ್ದಾರೆ ಎಂದು ಈಗಾಗಲೆ ವರದಿಯಾಗಿದೆ.

ಇರಾನ್-ಅಮೆರಿಕ ನಡುವಿನ ಯುದ್ಧ ಅಂತ್ಯವಾಗಲಿದ್ದು ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಮಧ್ಯಪ್ರಾಚ್ಯದ ಯುದ್ಧಕ್ಕೆ ಅಂತ್ಯ ಹಾಡುವ ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಒಪ್ಪಂದದ ನಂತರ ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹೋರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.

ಜೂನ್‌ 17ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ; ಜಗತ್ತಿನ ಕುತೂಹಲ ಕೆರಳಿಸಿದೆ ಇಬ್ಬರು ನಾಯಕರ ಮೀಟಿಂಗ್‌

ಶನಿವಾರ ತಮ್ಮ ಟ್ರೂತ್ ಸೋಶಿಯಲ್ (Truth Social) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಒಪ್ಪಂದಕ್ಕೆ ನಾಳೆ ಸಹಿ ಹಾಕುವ ವೇಳಾಪಟ್ಟಿ ನಿಗದಿಯಾಗಿದೆ. ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ ಹೋರ್ಮುಜ್ ಜಲಸಂಧಿ ಎಲ್ಲ ರಾಷ್ಟ್ರಗಳಿಗೂ ತೆರೆಯಲ್ಪಡುತ್ತದೆ,” ಎಂದು ತಿಳಿಸಿದ್ದಾರೆ.